IPL 2023: ಐಪಿಎಲ್ ಟ್ರೋಫಿ ಗೆದ್ದ ಅತ್ಯಂತ ಹಿರಿಯ ಆಟಗಾರ ಯಾರು ಗೊತ್ತೇ?

| Updated By: ಝಾಹಿರ್ ಯೂಸುಫ್

Updated on: Jun 01, 2023 | 3:56 PM

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್​ ಟ್ರೋಫಿಗೆ ಮುತ್ತಿಟ್ಟ ಅತ್ಯಂತ ಹಿರಿಯ ಆಟಗಾರರು ಯಾರೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

1 / 7
IPL 2023 Records: ಸೋಮವಾರ (ಮೇ 29) ಅಹಮದಾಬಾದ್​ನಲ್ಲಿ ನಡೆದ ಐಪಿಎಲ್​ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ 250 ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದರು. ಈ ದಾಖಲೆಯ ಬೆನ್ನಲ್ಲೇ ಮತ್ತೊಂದು ರೆಕಾರ್ಡ್ ಅನ್ನು ಕೂಡ ನಿರ್ಮಿಸಿದ್ದಾರೆ. ಅದು ಕೂಡ ಕಪ್ ಎತ್ತಿ ಹಿಡಿಯುವ ಮೂಲಕ ಎಂಬುದು ವಿಶೇಷ.

2 / 7
ಹೌದು, ಐಪಿಎಲ್​ ಇತಿಹಾಸದಲ್ಲಿ ಟ್ರೋಫಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಹಾಗಿದ್ರೆ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಅತ್ಯಂತ ಹಿರಿಯ ಆಟಗಾರರು ಯಾರೆಲ್ಲಾ ಎಂದು ನೋಡೋಣ...

3 / 7
1- ಮಹೇಂದ್ರ ಸಿಂಗ್ ಧೋನಿ: ಸಿಎಸ್​ಕೆ ತಂಡದ ನಾಯಕ ಎಂಎಸ್ ಧೋನಿ, ಈ ಬಾರಿಯ ಟ್ರೋಪಿಯನ್ನು ಎತ್ತಿ ಹಿಡಿಯುವ ಮೂಲಕ ಐಪಿಎಲ್​ನಲ್ಲಿ ಕಪ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಧೋನಿ 41ನೇ (327 ದಿನಗಳು) ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ.

4 / 7
2-  ಸಚಿನ್ ತೆಂಡೂಲ್ಕರ್​: 2013 ರಲ್ಲಿ ಮುಂಬೈ ಇಂಡಿಯನ್ಸ್​ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದಾಗ ಸಚಿನ್ ತೆಂಡೂಲ್ಕರ್ ಅವರಿಗೆ 40 ವರ್ಷ ಮತ್ತು 33 ದಿನಗಳಾಗಿತ್ತು.

5 / 7
3- ಇಮ್ರಾನ್ ತಾಹಿರ್: 2018 ರಲ್ಲಿ ಸಿಎಸ್​ಕೆ ತಂಡ ಟ್ರೋಫಿ ಗೆದ್ದಾಗ ಟೀಮ್​ನಲ್ಲಿದ್ದ ಇಮ್ರಾನ್ ತಾಹಿರ್​ ಅವರ ವಯಸ್ಸು 39 ವರ್ಷ ಮತ್ತು 61 ದಿನಗಳಾಗಿತ್ತು.

6 / 7
4- ಶೇನ್ ವಾರ್ನ್: 2008 ರ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಾಗ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಶೇನ್ ವಾರ್ನ್ ಅವರ ವಯಸ್ಸು 38 ವರ್ಷ 262 ದಿನಗಳು.

7 / 7
5- ಮ್ಯಾಥ್ಯೂ ಹೇಡನ್: 2010 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಟ್ರೋಫಿ ಗೆದ್ದಾಗ ತಂಡದಲ್ಲಿದ್ದ ಮ್ಯಾಥ್ಯೂ ಹೇಡನ್ ಅವರ ವಯಸ್ಸು 38 ವರ್ಷ ಮತ್ತು 178 ದಿನಗಳು.