Ruturaj Gaikwad Marriage: ರುತುರಾಜ್ ಕೈ ಹಿಡಿಯುತ್ತಿರುವ ಈ ಮಹಿಳಾ ಕ್ರಿಕೆಟರ್ ಯಾರು ಗೊತ್ತಾ?

Ruturaj Gaikwad Marriage: ಉತ್ಕರ್ಷ ಪವಾರ್ ಕ್ರಿಕೆಟರ್ ಆಗಿದ್ದು, ಅವರು ದೇಶೀಯ ಸರ್ಕ್ಯೂಟ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.

ಪೃಥ್ವಿಶಂಕರ
|

Updated on: Jun 01, 2023 | 3:57 PM

16ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ತೆರೆ ಬಿದ್ದಿದೆ. ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಸಿಎಸ್​ಕೆ ತಂಡ ಮುಡಿಗೇರಿಸಿಕೊಂಡಿದೆ. ಚೆನ್ನೈ ತಂಡದ ಈ ದಾಖಲೆಯ ಜಯದ ಹಿಂದೆ ಹಲವು ಆಟಗಾರರ ಶ್ರಮವಿದೆ. ಅಂತಹವರಲ್ಲಿ ಆರಂಭಿಕ ರುತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಪ್ರಮುಖವಾದುದ್ದಾಗಿದೆ.

1 / 7
ಈ ಸೀಸನ್​ನಲ್ಲಿ ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಆರಂಭಿಕರಾಗಿ ಡಿವೋನ್ ಕಾನ್ವೇ ಅವರೊಂದಿಗೆ ಉತ್ತಮ ಜೊತೆಯಾಟ ಆಡಿದಲ್ಲದೆ, ವೈಯಕ್ತಿಕವಾಗಿ 590 ರನ್‌ ಬಾರಿಸಿ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ಸ್ಥಾನ ಪಡೆದಿದ್ದರು.

2 / 7
ಇನ್ನು 2021 ರ ಐಪಿಎಲ್​ನಲ್ಲಿ ಚೆನ್ನೈ 4ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದಾಗ ಇದೇ ಗಾಯಕ್ವಾಡ್ ಬರೋಬ್ಬರಿ 635 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ಇದೀಗ ಐಪಿಎಲ್‌ನಲ್ಲಿನ ಅವರ ಸ್ಥಿರ ಪ್ರದರ್ಶನ ಮತ್ತು ದೇಶೀಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನದ ಆಧಾರದ ಮೇಲೆ ರುತುರಾಜ್ ಅವರನ್ನು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮೀಸಲು ಆಟಗಾರನಾಗಿ ಭಾರತದ ತಂಡಕ್ಕೆ ಸೇರಿಸಲಾಯಿತು.

3 / 7
ಆದಾಗ್ಯೂ, ಈ ವಾರದ ಕೊನೆಯಲ್ಲಿ ವೈವಾಹಿಕ ಜೀವನಕ್ಕೇ ಕಾಲಿಡಲು ಸಿದ್ಧರಾಗಿರುವ ರುತುರಾಜ್ ಡಬ್ಲ್ಯುಟಿಸಿ ಫೈನಲ್​ನಿಂದ ಹಿಂದೆ ಸರಿದಿದ್ದಾರೆ. ಇನ್ನು ರುತುರಾಜ್ ವರಿಸುತ್ತಿರುವ ಹುಡುಗಿ ಯಾರು ಎಂಬುದನ್ನು ನೋಡುವುದಾದರೆ..

4 / 7
ರುತುರಾಜ್ ತಮ್ಮ ಬಹುದಿನದ ಗೆಳತಿ ಹಾಗೂ ಕ್ರಿಕೆಟರ್ ಉತ್ಕರ್ಷ ಪವಾರ್ ಅವರನ್ನು ವರಿಸಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ಕರ್ಷ ಕೂಡ ಗುಜರಾತ್ ಹಾಗೂ ಚೆನ್ನೈ ನಡುವಿನ ಐಪಿಎಲ್ ಫೈನಲ್‌ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದರು.

5 / 7
ಇನ್ನು ಉತ್ಕರ್ಷ ಅವರ ಹೇಳಬೇಕೆಂದರೆ ಅಕ್ಟೋಬರ್ 13, 1998 ರಂದು ಜನಿಸಿದ ಉತ್ಕರ್ಷ ಪವಾರ್ ಕೂಡ ಕ್ರಿಕೆಟರ್ ಆಗಿದ್ದಾರೆ. ಅವರು ದೇಶೀಯ ಸರ್ಕ್ಯೂಟ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. 24 ವರ್ಷ ವಯಸ್ಸಿನ ಉತ್ಕರ್ಷ ಅವರು ಆಲ್ ರೌಂಡರ್ ಆಗಿದ್ದು, ಅವರು ಬಲಗೈ ಬ್ಯಾಟರ್ ಮತ್ತು ಬಲಗೈ ಬೌಲರ್ ಕೂಡ ಆಗಿದ್ದಾರೆ.

6 / 7
ಸದ್ಯ, ಸುಮಾರು 18 ತಿಂಗಳುಗಳಿಂದ ಕ್ರಿಕೆಟ್​ನಿಂದ ದೂರವಿರುವ ಉತ್ಕರ್ಷ ಪವಾರ್, ವರದಿಗಳ ಪ್ರಕಾರ ಪ್ರಸ್ತುತ ಪುಣೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸಸ್‌ನಲ್ಲಿ (INFS) ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗಾಯಕ್ವಾಡ್ ಮತ್ತು ಉತ್ಕರ್ಷ ಜೂನ್ 3 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

7 / 7
Follow us