ನ್ಯೂಜಿಲೆಂಡ್ ವಿರುದ್ಧದ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋತ ನಂತರ, ಅಂದರೆ ಆಗಸ್ಟ್ 2021 ರಲ್ಲಿ, ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿತು. ಎರಡೂ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಬೇಕಿತ್ತು. ಆದರೆ ಅಲ್ಲಿ 4 ಟೆಸ್ಟ್‌ಗಳು ಮಾತ್ರ ನಡೆದವು. ಸರಣಿಯ 5 ನೇ ಮತ್ತು ಕೊನೆಯ ಟೆಸ್ಟ್ ಜುಲೈ 2022 ಕ್ಕೆ ಮುಂದೂಡಲಾಯಿತು. ಅಂತಿಮವಾಗಿ 5 ಪಂದ್ಯಗಳ ಈ ಸರಣಿ 2-2ರಲ್ಲಿ ಸಮಬಲಗೊಂಡಿತು.