IPL 2023: RCB ತಂಡದ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ ಅಶ್ವಿನ್
TV9 Web | Updated By: ಝಾಹಿರ್ ಯೂಸುಫ್
Updated on:
Mar 22, 2023 | 8:30 PM
IPL 2023 Kannada: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಏಪ್ರಿಲ್ 2 ರಂದು ಐಪಿಎಲ್ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ.
1 / 16
ಟಿ20 ಕ್ರಿಕೆಟ್ ಅಂಗಳದ ಮದಗಜಗಳ ಕಾಳಗಕ್ಕೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 31 ರಿಂದ ಶುರುವಾಗಲಿರುವ ಐಪಿಎಲ್ ಸೀಸನ್ 16ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಇನ್ನು ಏಪ್ರಿಲ್ 1 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಸೆಣಸಲಿದೆ.
2 / 16
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಪ್ರಿಲ್ 2 ರಂದು ಐಪಿಎಲ್ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೆ ಆರ್ಸಿಬಿ ತಂಡದ ಆಡುವ ಬಳಗ ಹೇಗಿರಲಿದೆ ಎಂಬುದೇ ಕುತೂಹಲ.
3 / 16
ಈ ಕುತೂಹಲವನ್ನು ತಣಿಸುವಂತಹ ಕೆಲಸ ಮಾಡಿದ್ದಾರೆ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಆರ್ಸಿಬಿ ತಂಡದ ಬಗ್ಗೆ ಮಾತನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಅಶ್ವಿನ್, ಎಂದಿನಂತೆ ಈ ಬಾರಿ ಕೂಡ ಬೆಂಗಳೂರು ತಂಡ ಬಲಿಷ್ಠವಾಗಿದೆ. ಅವರಲ್ಲಿ ಉತ್ತಮ ಆಟಗಾರರಿದ್ದು, ಹೀಗಾಗಿ ಅವರ ಪ್ಲೇಯಿಂಗ್ ಇಲೆವೆನ್ ಕೂಡ ಬಲಿಷ್ಠವಾಗಿರಲಿದೆ.
4 / 16
ನನ್ನ ಪ್ರಕಾರ ಆರ್ಸಿಬಿ ತಂಡವು ಈ ಬಾರಿ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಅನೂಜ್ ರಾವತ್ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರರ್ ಅವರನ್ನು ಆಡಿಸಬಹುದು. ಹಾಗೆಯೇ ಗಾಯಗೊಂಡಿರುವ ಜೋಶ್ ಹ್ಯಾಝಲ್ವುಡ್ ಆಡದಿದ್ದರೆ ರೀಸ್ ಟೋಪ್ಲಿಗೆ ಅವಕಾಶ ಸಿಗಲಿದೆ ಎಂದು ಅಶ್ವಿನ್ ತಿಳಿಸಿದ್ದಾರೆ. ಅದರಂತೆ ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ...
5 / 16
1- ಫಾಫ್ ಡುಪ್ಲೆಸಿಸ್ (ನಾಯಕ)
6 / 16
2- ವಿರಾಟ್ ಕೊಹ್ಲಿ
7 / 16
ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ರಜತ್ ಪಾಟಿದಾರ್, ಜೋಶ್ ಹ್ಯಾಝಲ್ವುಡ್ ಹಾಗೂ ವನಿಂದು ಹಸರಂಗ ಅಲಭ್ಯರಾಗಿದ್ದಾರೆ. ಪಾದದ ನೋವಿನಿಂದ ಬಳಲುತ್ತಿರುವ ರಜತ್ ಪಾಟಿದಾರ್ಗೆ NCA ಕಡೆಯಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ.
8 / 16
3- ಗ್ಲೆನ್ ಮ್ಯಾಕ್ಸ್ವೆಲ್
9 / 16
5- ಶಹಬಾಝ್ ಅಹ್ಮದ್
10 / 16
5- ದಿನೇಶ್ ಕಾರ್ತಿಕ್
11 / 16
5- ಮಹಿಪಾಲ್ ಲೊಮ್ರೋರ್ (ಆಲ್ರೌಂಡರ್)
12 / 16
ವನಿಂದು ಹಸರಂಗ
13 / 16
ಜೋಶ್ ಹ್ಯಾಝಲ್ವುಡ್
14 / 16
ಆಕಾಶ್ದೀಪ್ ಸಿಂಗ್
15 / 16
10- ಮೊಹಮ್ಮದ್ ಸಿರಾಜ್
16 / 16
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.