- Kannada News Photo gallery Cricket photos Kannada News| IPL 2023 Ravindra Jadeja scripts IPL history with 150 wickets
IPL 2023: ಐಪಿಎಲ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ಮೊದಲ ಎಡಗೈ ಬೌಲರ್ ಜಡೇಜಾ..!
Ravindra Jadeja: ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು.
Updated on:May 24, 2023 | 3:13 PM

ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಧೋನಿ ಪಡೆ 15 ರನ್‌ಗಳಿಂದ ಗೆದ್ದು ಐಪಿಎಲ್ ಫೈನಲ್‌ಗೆ ತಲುಪಿದ್ದು ಗೊತ್ತೇ ಇದೆ. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದರು.

ರವೀಂದ್ರ ಜಡೇಜಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 150 ನೇ ವಿಕೆಟ್ ಪೂರೈಸಿದರು. ನಿನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆಟಗಾರ ದಸುನ್ ಶಾನಕ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ 150ನೇ ವಿಕೆಟ್ ಪಡೆದರು.

ಅಲ್ಲದೆ ಡೇವಿಡ್ ಮಿಲ್ಲರ್ ಅವರನ್ನು ಕೂಡ ಪೆವಿಲಿಯನ್ಗೆ ಅಟ್ಟುವ ಮೂಲಕ ನಿನ್ನೆಯ ಪಂದ್ಯದಲ್ಲಿಯೇ 151ನೇ ವಿಕೆಟ್ ಪೂರೈಸಿದರು. ಏತನ್ಮಧ್ಯೆ, ಜಡೇಜಾ ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಮೊದಲ ಎಡಗೈ ಬೌಲರ್ ಮತ್ತು ಈ ಲೀಗ್‌ನಲ್ಲಿ 150 ವಿಕೆಟ್ ಪಡೆದ 10 ನೇ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಎಡಗೈ ಬೌಲರ್‌ಗಳಾದ ಆಶಿಶ್ ನೆಹ್ರಾ ಮತ್ತು ಜಹೀರ್ ಖಾನ್ ಮಾಡಲು ಸಾಧ್ಯವಾಗದ ದಾಖಲೆಯನ್ನು ಜಡೇಜಾ ಮಾಡಿದ್ದಾರೆ. ಜಡೇಜಾ (151) ನಂತರ ಅಕ್ಷರ್ ಪಟೇಲ್ (112), ಆಶಿಶ್ ನೆಹ್ರಾ (106), ಟ್ರೆಂಟ್ ಬೌಲ್ಟ್ (105) ಮತ್ತು ಜಹೀರ್ ಖಾನ್ (102) ಐಪಿಎಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಬೌಲರ್‌ಗಳ ಅಗ್ರ 5 ಸ್ಥಾನಗಳಲ್ಲಿದ್ದಾರೆ.

ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (187 ವಿಕೆಟ್) ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಲಸಿತ್ ಮಾಲಿಂಗ ಐಪಿಎಲ್‌ನಲ್ಲಿ 183 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರೆ, ಇತ್ತೀಚೆಗೆ ಚಹಾಲ್ ಆ ದಾಖಲೆಯನ್ನು ಮುರಿದರು. ಸದ್ಯ ಮಾಲಿಂಗ 183 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದು, ಪಿಯೂಷ್ ಚಾವ್ಲಾ (177) ಮೂರನೇ ಸ್ಥಾನದಲ್ಲಿದ್ದಾರೆ.
Published On - 3:10 pm, Wed, 24 May 23



















