IPL 2023: ರಾಜೀವ್ ಗಾಂಧಿ ಸ್ಟೇಡಿಯಂ…RCB ಗೆ ಭಯ ಶುರು..!

| Updated By: ಝಾಹಿರ್ ಯೂಸುಫ್

Updated on: May 17, 2023 | 7:21 PM

IPL 2023 Kannada: ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದು 2019 ರಲ್ಲಿ. ಈ ವೇಳೆ SRH ತಂಡವು RCB ವಿರುದ್ಧ 231 ರನ್​ ಬಾರಿಸಿತ್ತು.

1 / 7
IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿರುವ SRH ತಂಡಕ್ಕೆ ಈ ಪಂದ್ಯ ಔಪಚಾರಿಕ. ಆದರೆ ಪ್ಲೇಆಫ್ ರೇಸ್​ನಲ್ಲಿರುವ RCB ಪಾಲಿಗೆ ಇದು ನಿರ್ಣಾಯಕ ಪಂದ್ಯ.

2 / 7
ಅಂದರೆ ಈ ಪಂದ್ಯದಲ್ಲಿ RCB ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ರೇಸ್​ನಲ್ಲಿ ಉಳಿಯಲಿದೆ. ಈ ಪಂದ್ಯದಲ್ಲಿ ಗೆದ್ದು, ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸಿದರೆ ನೆಟ್​ ರನ್​ ರೇಟ್​ ನೆರವಿನೊಂದಿಗೆ RCB ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿಯೇ SRH ವಿರುದ್ಧ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕವಾಗಿದೆ.

3 / 7
ಆದರೆ ಈ ಪಂದ್ಯವು SRH ತಂಡದ ತವರು ಮೈದಾನ ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಇದೀಗ RCB ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದಕ್ಕೆ ಮುಖ್ಯ ಕಾರಣ ಈ ಮೈದಾನದಲ್ಲಿನ ಆರ್​ಸಿಬಿ ತಂಡದ ಪ್ರದರ್ಶನ.

4 / 7
ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನಾಡಿದೆ. ಆದರೆ ಈ ವೇಳೆ ಗೆದ್ದಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಇನ್ನು ಒಂದು ಪಂದ್ಯ ರದ್ದಾಗಿತ್ತು. ಅಂದರೆ ಆಡಿರುವ 9 ಪಂದ್ಯಗಳಲ್ಲಿ 7 ರಲ್ಲಿ ಸೋಲನುಭವಿಸಿದೆ.

5 / 7
ಇನ್ನು ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದು 2019 ರಲ್ಲಿ. ಈ ವೇಳೆ ಎಸ್​ಆರ್​ಹೆಚ್ ತಂಡವು ಆರ್​ಸಿಬಿ ವಿರುದ್ಧ 231 ರನ್​ ಬಾರಿಸಿತ್ತು. ಅಷ್ಟೇ ಅಲ್ಲದೆ ಆರ್​ಸಿಬಿಯನ್ನು ಕೇವಲ 113 ರನ್​ಗಳಿಗೆ ಆಲೌಟ್ ಮಾಡಿ ಭರ್ಜರಿ ಜಯ ಸಾಧಿಸಿತ್ತು.

6 / 7
ಹಾಗೆಯೇ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡವು ಕೊನೆಯ ಬಾರಿ ಜಯ ಸಾಧಿಸಿದ್ದು 2015 ರಲ್ಲಿ. ಅದು ಕೂಡ ಡಕ್​ವರ್ಥ್ ಲೂಯಿಸ್ ನಿಯಮದ ಪ್ರಕಾರ. ಹೀಗಾಗಿಯೇ ಎಸ್​​ಆರ್​ಹೆಚ್​ ಮೈದಾನವು ಆರ್​ಸಿಬಿ ಪಾಲಿಗೆ ನತದೃಷ್ಟ ಎಂದು ಬಣ್ಣಿಸಲಾಗುತ್ತದೆ.

7 / 7
ಇದೀಗ ಇದೇ ಮೈದಾನದಲ್ಲಿ ನಿರ್ಣಾಯಕ ಪಂದ್ಯದಲ್ಲಿ ಆರ್​ಸಿಬಿ ತಂಡವು ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿರುವುದು ಹೊಸ ಚಿಂತೆಗೆ ಕಾರಣವಾಗಿದೆ. ಇದಾಗ್ಯೂ ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೇವಲ 59 ರನ್​ಗಳಿಗೆ ಆಲೌಟ್ ಮಾಡಿ ಹೊಸ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ಈ ಪಂದ್ಯವನ್ನು ಕೂಡ ಗೆಲ್ಲಲಿದೆಯಾ ಕಾದು ನೋಡಬೇಕಿದೆ.