IPL 2023: KGF ನ ನಂಬಿರುವ RCB: ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ..!

IPL 2023 Kannada: ಆರ್​ಸಿಬಿ ತಂಡದ ಬ್ಯಾಟಿಂಗ್ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಮೇಲೆ ಅವಲಂಭಿತರಾಗಿರುವುದು ಸ್ಪಷ್ಟ. ಕೇವಲ 3 ಆಟಗಾರರನ್ನು ಅವಲಂಭಿಸಿ ಆರ್​ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವೇ?

TV9 Web
| Updated By: ಝಾಹಿರ್ ಯೂಸುಫ್

Updated on: Apr 27, 2023 | 3:57 PM

IPL 2023: 8 ಪಂದ್ಯ...4 ಸೋಲು...4 ಗೆಲುವು...ಇದು ಪ್ರಸ್ತುತ ಆರ್​ಸಿಬಿ ತಂಡದ ಪ್ರದರ್ಶನ. ಈ ಪ್ರದರ್ಶನದಲ್ಲಿ ಆರ್​ಸಿಬಿ ಪರ ಬ್ಯಾಟಿಂಗ್​ನಲ್ಲಿ ಮೂವರು ಮಾತ್ರ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಉಳಿದ ಬ್ಯಾಟರ್​ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ.

1 / 8
ಹೌದು, ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಸಿಡಿಲಬ್ಬರದ ಪ್ರದರ್ಶನ ನೀಡಿದ್ದಾರೆ.

2 / 8
ಇಲ್ಲಿ ಫಾಫ್ ಡುಪ್ಲೆಸಿಸ್ 422 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 333 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 258 ರನ್ ಕಲೆಹಾಕಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್​ಮನ್​ 100 ರನ್​ ಕೂಡ ಕಲೆಹಾಕಿಲ್ಲ ಎಂಬುದೇ ಅಚ್ಚರಿ.

3 / 8
ತಂಡದ ಅನುಭವಿ ಬ್ಯಾಟರ್​ ದಿನೇಶ್ ಕಾರ್ತಿಕ್ ಇದುವರೆಗೆ 11.86 ಸರಾಸರಿಯಲ್ಲಿ 83 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಮಹಿಪಾಲ್ ಲೊಮ್ರೋರ್ 18.75 ಸರಾಸರಿಯಲ್ಲಿ 75 ರನ್ ಗಳಿಸಿದ್ದೇ ಹೆಚ್ಚು. ಮತ್ತೊಂದೆಡೆ ಆಲ್​ರೌಂಡರ್​ ಆಗಿ ಕಾಣಿಸಿಕೊಳ್ಳುತ್ತಿರುವ ಶಹಬಾಝ್ ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದರೆ, ಬ್ಯಾಟಿಂಗ್​ 10.42 ಸರಾಸರಿಯಲ್ಲಿ ಕೇವಲ 42 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

4 / 8
ಇನ್ನು  ಸುಯಶ್ ಪ್ರಭುದೇಸಾಯಿ 10 ರ ಸರಾಸರಿಯನ್ನೂ ಕೂಡ ಹೊಂದಿಲ್ಲ. ಅಂದರೆ ಅವರು ಇದುವರೆಗೆ ಕಲೆಹಾಕಿರುವುದು ಕೇವಲ 29 ರನ್ ಮಾತ್ರ. ಇದಲ್ಲದೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದಿರುವ ಅನೂಜ್ ರಾವತ್ ಮೂರು ಪಂದ್ಯಗಳಲ್ಲಿ ಕಲೆಹಾಕಿದ್ದು ಕೇವಲ 16 ರನ್ ಎಂದರೆ ನಂಬಲೇಬೇಕು.

5 / 8
ಅಂದರೆ ಆರ್​ಸಿಬಿ ತಂಡದ ಬ್ಯಾಟಿಂಗ್ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಮೇಲೆ ಅವಲಂಭಿತರಾಗಿರುವುದು ಸ್ಪಷ್ಟ. ಕೇವಲ 3 ಆಟಗಾರರನ್ನು ಅವಲಂಭಿಸಿ ಆರ್​ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವೇ? ಎಂಬುದೇ ಈಗ ದೊಡ್ಡ ಪ್ರಶ್ನೆ.

6 / 8
ಒಟ್ಟಿನಲ್ಲಿ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ್ದ ಆರ್​ಸಿಬಿ ಇದೀಗ ಕೇವಲ ಮೂವರು ಬ್ಯಾಟರ್​ಗಳನ್ನು ಮಾತ್ರ ನೆಚ್ಚಿಕೊಂಡಿದ್ದಾರೆ. ಇನ್ನು ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಅಂದರೆ ನಾಲ್ವರ ಭರ್ಜರಿ ಪ್ರದರ್ಶನದೊಂದಿಗೆ ಆರ್​ಸಿಬಿ 4 ಪಂದ್ಯಗಳನ್ನು ಗೆದ್ದಿದ್ದು, ಇವರ ಈ ಅತ್ಯುತ್ತಮ ಪ್ರದರ್ಶನದಿಂದ ಈ ಸಲ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.

7 / 8
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.

RCB TEAM

8 / 8
Follow us
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್

ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು

ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ

ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ

Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ

ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು

Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ

ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು