IPL 2023: KGF ತೂಫಾನ್: ಬರೋಬ್ಬರಿ 108 ರನ್ಗಳು..!
TV9 Web | Updated By: ಝಾಹಿರ್ ಯೂಸುಫ್
Updated on:
Apr 10, 2023 | 11:33 PM
IPL 2023 Kannada: ಈ ಪಂದ್ಯದಲ್ಲಿ 4 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಟಾಪ್-5 ಆಟಗಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.
1 / 8
IPL 2023 RCB vs LSG Highlights: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ KGF ಬಿರುಗಾಳಿ ಎಬ್ಬಿಸಿದ್ದಾರೆ. ಈ ಬಿರುಗಾಳಿಗೆ ಸಿಕ್ಸ್ಗಳ ಸುರಿಮಳೆಯಾಗಿರುವುದು ವಿಶೇಷ.
2 / 8
ಹೌದು, ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಕನ್ನಡಿಗನ ನಿರ್ಧಾರ ತಪ್ಪು ಎಂಬುದನ್ನು ವಿರಾಟ್ ಕೊಹ್ಲಿ ಆರಂಭದಲ್ಲೇ ನಿರೂಪಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಆರ್ಸಿಬಿಗೆ ಸ್ಪೋಟಕ ಆರಂಭ ಒದಗಿಸಿದರು.
3 / 8
ಪವರ್ಪ್ಲೇನಲ್ಲೇ ಲಕ್ನೋ ಬೌಲರ್ಗಳ ಬೆಂಡೆತ್ತಿದ ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್ ಜೋಡಿ 56 ರನ್ ಕಲೆಹಾಕಿದ್ದರು. ಆ ಬಳಿಕ 44 ಎಸೆತಗಳಲ್ಲಿ 61 ರನ್ ಬಾರಿಸಿ ಕೊಹ್ಲಿ ನಿರ್ಗಮಿಸಿದರು. ಇದಾದ ಬಳಿಕ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ 7 ಓವರ್ಗಳಲ್ಲಿ 48 ರನ್ ಕಲೆಹಾಕಿದರು.
4 / 8
ಇನ್ನು ಆರ್ಸಿಬಿ ತಂಡದ ಅಸಲಿ ಆಟ ಶುರುವಾಗಿದ್ದೇ ಕೊನೆಯ 7 ಓವರ್ಗಳಿರುವಾಗ..ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
5 / 8
ಪರಿಣಾಮ ಕೊನೆಯ 42 ಎಸೆತಗಳಲ್ಲಿ ಆರ್ಸಿಬಿ ತಂಡ ಕಲೆಹಾಕಿದ್ದು ಬರೋಬ್ಬರಿ 108 ರನ್ಗಳು. ಅಂದರೆ ಪ್ರತಿ ಓವರ್ಗೆ 15.42 ಸರಾಸರಿಯಲ್ಲಿ ರನ್ ಬಾರಿಸಿದ್ದರು.
6 / 8
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 4 ಸಿಕ್ಸ್ ಸಿಡಿಸಿದರೆ, ಫಾಫ್ ಡುಪ್ಲೆಸಿಸ್ 5 ಸಿಕ್ಸ್ ಬಾರಿಸಿದರು. ಹಾಗೆಯೇ ಗ್ಲೆನ್ ಮ್ಯಾಕ್ಸ್ವೆಲ್ 6 ಸಿಕ್ಸ್ ಸಿಡಿಸುವ ಮೂಲಕ ಒಂದೆಜ್ಜೆ ಮುಂದೆ ಹೋದರು.
7 / 8
K (ಕೊಹ್ಲಿ) G (ಗ್ಲೆನ್ ಮ್ಯಾಕ್ಸ್ವೆಲ್) F (ಫಾಫ್ ಡುಪ್ಲೆಸಿಸ್)..ತ್ರಿಮೂರ್ತಿಗಳ ಈ ತೂಫಾನ್ ಬ್ಯಾಟಿಂಗ್ ಪರಿಣಾಮ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಆರ್ಸಿಬಿ 212 ರನ್ ಕಲೆಹಾಕಿತು.
8 / 8
ಇನ್ನು ಈ ಪಂದ್ಯದಲ್ಲಿ KGF 212 ರನ್ ಬಾರಿಸಿದರೂ ಆರ್ಸಿಬಿ ತಂಡಕ್ಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ.