IPL 2023: RCB ತಂಡದ ಮುಂದಿನ ಎದುರಾಳಿ ಯಾರು? ಈಗಲೇ ಚಿಂತೆ ಶುರುವಾಗಿದ್ದೇಕೆ?

| Updated By: ಝಾಹಿರ್ ಯೂಸುಫ್

Updated on: Apr 18, 2023 | 10:07 PM

IPL 2023 Kannada: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಆರ್​ಸಿಬಿ ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸಿಎಸ್​ಕೆ ವಿರುದ್ಧ ಸೋಲನುಭವಿಸಿದೆ. ಇದೀಗ RCB ತಂಡವು ಮುಂದಿನ ಪಂದ್ಯಕ್ಕಾಗಿ ಸಜ್ಜಾಗಿದೆ.

1 / 7
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯನ್ನು ಭರ್ಜರಿ ಜಯದೊಂದಿಗೆ ಶುರು ಮಾಡಿದ್ದ ಆರ್​ಸಿಬಿ ಇದೀಗ ಸೋಲುಗಳಿಂದ ಕಂಗೆಟ್ಟಿದೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 2 ಬಾರಿ ಮಾತ್ರ.

2 / 7
ಅಂದರೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಆರ್​ಸಿಬಿ ಕೆಕೆಆರ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸಿಎಸ್​ಕೆ ವಿರುದ್ಧ ಸೋಲನುಭವಿಸಿದೆ. ಇದೀಗ ಆರ್​ಸಿಬಿ ತಂಡವು ಮುಂದಿನ ಪಂದ್ಯಕ್ಕಾಗಿ ಸಜ್ಜಾಗಿದೆ.

3 / 7
ಆರ್​ಸಿಬಿ ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್. ಅತ್ತ ಆಡಿರುವ 5 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 3 ರಲ್ಲಿ ಜಯ ಸಾಧಿಸಿದೆ. ಆದರೆ ಇಲ್ಲಿ ಆರ್​ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿರುವುದು ಅವೇ ಮ್ಯಾಚ್.

4 / 7
ಅಂದರೆ ಆರ್​ಸಿಬಿ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡದ ಹೋಮ್​ ಗ್ರೌಂಡ್ ಮೊಹಾಲಿಯಲ್ಲಿ ಆಡಬೇಕಿದೆ. ಇತ್ತ ಹೋಮ್ ಗ್ರೌಂಡ್​ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಆರ್​​ಸಿಬಿ 2 ರಲ್ಲಿ ಸೋತು, 2 ರಲ್ಲಿ ಗೆದ್ದಿದೆ.

5 / 7
ಇನ್ನು ಕೆಕೆಆರ್ ವಿರುದ್ದ ಕೊಲ್ಕತ್ತಾದಲ್ಲಿ ನಡೆದ ಪಂದ್ಯ ಹೀನಾಯವಾಗಿ ಸೋಲನುಭವಿಸಿತ್ತು. ಅಂದರೆ ಹೋಮ್​ ಗ್ರೌಂಡ್​ನಲ್ಲೇ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಆರ್​ಸಿಬಿಗೆ ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಿಂದ ಭರ್ಜರಿ ಪೈಪೋಟಿ ಎದುರಾಗಲಿದೆ.

6 / 7
ಏಕೆಂದರೆ ಪಂಜಾಬ್ ಕಿಂಗ್ಸ್​ ಮೊಹಾಲಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇಲ್ಲಿ ಆಡಿರುವ 2 ಪಂದ್ಯಗಳಲ್ಲಿ 1 ರಲ್ಲಿ ಜಯ ಸಾಧಿಸಿದೆ, ಮತ್ತೊಂದು ಪಂದ್ಯದಲ್ಲಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತು. ಹಾಗೆಯೇ ಎದುರಾಳಿಗಳ ತವರಿನಲ್ಲಿ ನಡೆದ 3 ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದೆ. ಇದೇ ಆತ್ಮ ವಿಶ್ವಾಸದೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ತವರಿನಲ್ಲಿ ಕಣಕ್ಕಿಳಿಯಲಿದೆ.

7 / 7
ಇತ್ತ ತವರು ಮೈದಾನದಲ್ಲಿನ 3ನೇ ಸೋಲಿನ ಬಳಿಕ ಆರ್​ಸಿಬಿ ಮೊಹಾಲಿಯಲ್ಲಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಹೀಗಾಗಿ ಏಪ್ರಿಲ್ 20 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.