IPL 2023: ಈ ಬಾರಿಯ ಐಪಿಎಲ್ನಲ್ಲಿ ದಾಖಲಾದ ಟಾಪ್-10 ದಾಖಲೆಗಳಿವು..!
TV9 Web | Updated By: ಝಾಹಿರ್ ಯೂಸುಫ್
Updated on:
May 30, 2023 | 9:21 PM
IPL 2023 Records: ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್ಕೆ ಪಾಲಾಯಿತು. ಈ ದಾಖಲೆಯಲ್ಲದೆ ಈ ಬಾರಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಅವುಗಳಲ್ಲಿನ ಟಾಪ್-10 ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
1 / 11
ಚಾಂಪಿಯನ್ಸ್ ದಾಖಲೆ: ಐಪಿಎಲ್ 2023 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್ಕೆ ಪಾಲಾಯಿತು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಈ ಸಾಧನೆ ಮಾಡಿತ್ತು.
2 / 11
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್ಕೆ ಪಾಲಾಯಿತು. ಈ ದಾಖಲೆಯಲ್ಲದೆ ಈ ಬಾರಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಅವುಗಳಲ್ಲಿನ ಟಾಪ್-10 ದಾಖಲೆಗಳಾವುವು ಎಂದು ನೋಡುವುದಾದರೆ...
3 / 11
ಐಪಿಎಲ್ ಸಿಕ್ಸರ್ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಮೂಡಿಬಂದಿದ್ದು 2023 ರಲ್ಲಿ. ಅಂದರೆ ಐಪಿಎಲ್ ಸೀಸನ್ 16 ರಲ್ಲಿ ಒಟ್ಟು 1124 ಸಿಕ್ಸರ್‌ಗಳು ಸಿಡಿದಿದ್ದವು. ಇದಕ್ಕೂ ಮುನ್ನ 2022 ರಲ್ಲಿ 1062 ಸಿಕ್ಸರ್‌ಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು.
4 / 11
ಫೋರ್ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಫೋರ್ಗಳು ಮೂಡಿಬಂದಿರುವುದು ಸೀಸನ್ 16 ರಲ್ಲಿ ಎಂಬುದು ವಿಶೇಷ. 2022 ರಲ್ಲಿ 2018 ಫೋರ್ಗಳನ್ನು ಬಾರಿಸಿದ್ದರೆ, ಕಳೆದ ಬಾರಿ ಬರೋಬ್ಬರಿ 2174 ಬೌಂಡರಿಗಳನ್ನು ಸಿಡಿಸಿದ್ದರು.
5 / 11
ಶತಕಗಳ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿಗಳನ್ನು ಬಾರಿಸಿರುವುದು ಕಳೆದ ಬಾರಿ ಎಂಬುದು ವಿಶೇಷ. 2022 ರಲ್ಲಿ 8 ಶತಕಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು. ಆದರೆ ಐಪಿಎಲ್ 2023 ರಲ್ಲಿ 12 ಶತಕಗಳು ಮೂಡಿಬಂದಿದ್ದವು.
6 / 11
ಅರ್ಧಶತಕಗಳ ದಾಖಲೆ: ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ್ದು ಕೂಡ 2023 ರಲ್ಲಿ. ಐಪಿಎಲ್ ಸೀಸನ್ 16 ರಲ್ಲಿ ಒಟ್ಟು 153 ಅರ್ಧ ಶತಕಗಳು ಮೂಡಿಬಂದಿವೆ. ಇದಕ್ಕೂ ಮುನ್ನ ಐಪಿಎಲ್ 2022ರ ಸೀಸನ್‌ನಲ್ಲಿ 118 ಅರ್ಧಶತಕ ಬಾರಿಸಿದ್ದು ದಾಖಲೆಯಾಗಿತ್ತು.
7 / 11
ಸರಾಸರಿ ಸ್ಕೋರ್ ದಾಖಲೆ: ಐಪಿಎಲ್‌ನ 16ನೇ ಸೀಸನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 183 ಎಂಬುದು ವಿಶೇಷ. ಇದು ಯಾವುದೇ ಐಪಿಎಲ್ ಸೀಸನ್ನ ಗರಿಷ್ಠ ಮೊತ್ತವಾಗಿದೆ. 2018ರಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 172 ಆಗಿತ್ತು.
8 / 11
ಬ್ಯಾಟ್ಸ್ಮನ್ಗಳ ಅಬ್ಬರದ ದಾಖಲೆ: ಕಳೆದ ಬಾರಿಯ ಐಪಿಎಲ್ನಲ್ಲಿ ಬ್ಯಾಟ್ಸ್ಮನ್ಗಳು ಪ್ರತಿ ಓವರ್‌ಗೆ 8.99 ಸರಾಸರಿಯಲ್ಲಿ ರನ್ಗಳಿಸಿದ್ದಾರೆ. 2018 ರಲ್ಲಿ ಪ್ರತಿ ಓವರ್‌ಗೆ 8.65 ಸರಾಸರಿಯಲ್ಲಿ ರನ್ ಕಲೆಹಾಕಿದ್ದು ಅತ್ಯುತ್ತಮ ದಾಖಲೆಯಾಗಿತ್ತು. ಆದರೆ ಕಳೆದ ಬಾರಿ ಈ ದಾಖಲೆಯನ್ನು ಮುರಿಯಲಾಗಿದೆ.
9 / 11
ಡಬಲ್ ಸೆಂಚುರಿ ಚೇಸಿಂಗ್: ಐಪಿಎಲ್ 2023 ರಲ್ಲಿ 8 ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗುರಿ ಬೆನ್ನತ್ತಲಾಗಿದೆ. ಅದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಬಾರಿ ಎಂಬುದು ವಿಶೇಷ. ಈ ಹಿಂದೆ 2014 ರಲ್ಲಿ 3 ಬಾರಿ 200+ ಸ್ಕೋರ್ ಅನ್ನು ಚೇಸ್ ಮಾಡಿದ್ದು ದಾಖಲೆಯಾಗಿತ್ತು.
10 / 11
ಬೌಲರ್ಗಳ ದಾಖಲೆ: ಐಪಿಎಲ್ ಸೀಸನ್ವೊಂದರಲ್ಲಿ ಒಂದೇ ತಂಡದ ಮೂವರು ಬೌಲರ್‌ಗಳು 25 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಮೊದಲ ಬಾರಿ. ಗುಜರಾತ್ ಟೈಟಾನ್ಸ್ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಮತ್ತು ರಶೀದ್ ಖಾನ್ ಐಪಿಎಲ್ 2023 ರಲ್ಲಿ ಈ ಸಾಧನೆ ಮಾಡಿದ್ದಾರೆ.
11 / 11
ಅನ್ಕ್ಯಾಪ್ಡ್ ಆಟಗಾರರ ಸೆಂಚುರಿ: ಕಳೆದ ಬಾರಿ ಇಬ್ಬರು ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಶತಕ ಬಾರಿಸಿ ದಾಖಲೆ ಬರೆದಿದ್ದರು. ಇದು ಕೂಡ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯಾಗಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಸೆಂಚುರಿ ಸಿಡಿಸಿ ಈ ವಿಶೇಷ ದಾಖಲೆ ನಿರ್ಮಿಸಿದ್ದರು.