IPL 2023: 3 ವಿಶೇಷ ಪ್ರಶಸ್ತಿಗಳನ್ನು ಪಡೆದ RCB ಆಟಗಾರರು
IPL 2023 Kannada; ಈ ಅದ್ಭುತ ಪ್ರದರ್ಶನದ ಫಲವಾಗಿ ಇದೀಗ ಆರ್ಸಿಬಿ ತಂಡದ ಇಬ್ಬರು ಆಟಗಾರರಿಗೆ ಒಟ್ಟು 3 ಪ್ರಶಸ್ತಿಗಳು ಒಲಿದಿವೆ. ಈ ಅವಾರ್ಡ್ಗಳಾವುವು ಎಂಬುದರ ಮಾಹಿತಿ ಈ ಕೆಳಗಿನಂತಿದೆ...
Updated on: May 30, 2023 | 7:21 PM

IPL 2023: ಐಪಿಎಲ್ ಸೀಸನ್ 16 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಸಿಎಸ್ಕೆ ತಂಡವು 5ನೇ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಇನ್ನು ಟೂರ್ನಿಯುದ್ಧಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಹಲವು ಆಟಗಾರರು ಕೂಡ ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ ಆರ್ಸಿಬಿ ಆಟಗಾರರು ಕೂಡ ಇರುವುದು ವಿಶೇಷ.

ಈ ಬಾರಿಯ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಕೇವಲ 7 ರಲ್ಲಿ ಮಾತ್ರ ಜಯ ಸಾಧಿಸಿದ್ದ ಆರ್ಸಿಬಿ ತಂಡವು ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದಾಗ್ಯೂ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ಹಾಗೂ ಮೊಹಮ್ಮದ್ ಸಿರಾಜ್ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು.

ಈ ಅದ್ಭುತ ಪ್ರದರ್ಶನದ ಫಲವಾಗಿ ಇದೀಗ ಆರ್ಸಿಬಿ ತಂಡದ ಇಬ್ಬರು ಆಟಗಾರರಿಗೆ ಒಟ್ಟು 3 ಪ್ರಶಸ್ತಿಗಳು ಒಲಿದಿವೆ. ಈ ಅವಾರ್ಡ್ಗಳಾವುವು ಎಂಬುದರ ಮಾಹಿತಿ ಈ ಕೆಳಗಿನಂತಿದೆ...

ಅತೀ ಹೆಚ್ಚು ಸಿಕ್ಸ್: ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯು ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪಾಲಾಗಿದೆ. ಡುಪ್ಲೆಸಿಸ್ 14 ಪಂದ್ಯಗಳಲ್ಲಿ ಒಟ್ಟು 36 ಸಿಕ್ಸ್ ಸಿಡಿಸುವ ಮೂಲಕ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ಟ್ರೈಕರ್ ಆಫ್ ದಿ ಸೀಸನ್: ಈ ಬಾರಿಯ ಐಪಿಎಲ್ನಲ್ಲಿ ಸೂಪರ್ ಸ್ಟ್ರೈಕರ್ ಆಗಿ ಹೊರಹೊಮ್ಮಿದ್ದು ಆರ್ಸಿಬಿ ತಂಡದ ಗ್ಲೆನ್ ಮ್ಯಾಕ್ಸ್ವೆಲ್ ಎಂಬುದು ವಿಶೇಷ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್ವೆಲ್ ಈ ಬಾರಿ 14 ಇನಿಂಗ್ಸ್ಗಳಲ್ಲಿ 400 ರನ್ ಬಾರಿಸಿದ್ದರು. ಅದು ಕೂಡ 183.48 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಸೂಪರ್ ಸ್ಟ್ರೈಕರ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅತೀ ದೂರ ಸಿಕ್ಸ್: ಈ ಬಾರಿಯ ಐಪಿಎಲ್ನಲ್ಲಿ ಅತೀ ದೂರ ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿ ಕೂಡ ಫಾಫ್ ಡುಪ್ಲೆಸಿಸ್ ಪಾಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 115 ಮೀಟರ್ ಸಿಕ್ಸ್ ಸಿಡಿಸಿದ್ದ ಡುಪ್ಲೆಸಿಸ್ ಲಾಂಗೆಸ್ಟ್ ಸಿಕ್ಸ್ ಆಫ್ ದಿ ಸೀಸನ್ ಅವಾರ್ಡ್ ಪಡೆದಿದ್ದಾರೆ.
