AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಈ ಬಾರಿಯ ಐಪಿಎಲ್​ನಲ್ಲಿ ದಾಖಲಾದ ಟಾಪ್-10 ದಾಖಲೆಗಳಿವು..!

IPL 2023 Records: ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್​ಕೆ ಪಾಲಾಯಿತು. ಈ ದಾಖಲೆಯಲ್ಲದೆ ಈ ಬಾರಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಅವುಗಳಲ್ಲಿನ ಟಾಪ್-10 ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

TV9 Web
| Edited By: |

Updated on: May 30, 2023 | 9:21 PM

Share
ಚಾಂಪಿಯನ್ಸ್ ದಾಖಲೆ: ಐಪಿಎಲ್ 2023 ರ ಫೈನಲ್​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್​ ಪ್ರಶಸ್ತಿ ಗೆದ್ದುಕೊಂಡಿತ್ತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್​ಕೆ ಪಾಲಾಯಿತು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಈ ಸಾಧನೆ ಮಾಡಿತ್ತು.

1 / 11
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 5 ಬಾರಿ ಪ್ರಶಸ್ತಿ ಗೆದ್ದ 2ನೇ ತಂಡ ಎಂಬ ದಾಖಲೆ ಸಿಎಸ್​ಕೆ ಪಾಲಾಯಿತು. ಈ ದಾಖಲೆಯಲ್ಲದೆ ಈ ಬಾರಿ ಹಲವು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಅವುಗಳಲ್ಲಿನ ಟಾಪ್-10 ದಾಖಲೆಗಳಾವುವು ಎಂದು ನೋಡುವುದಾದರೆ...

2 / 11
ಐಪಿಎಲ್ ಸಿಕ್ಸರ್ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಮೂಡಿಬಂದಿದ್ದು 2023 ರಲ್ಲಿ. ಅಂದರೆ ಐಪಿಎಲ್ ಸೀಸನ್ 16 ರಲ್ಲಿ ಒಟ್ಟು 1124 ಸಿಕ್ಸರ್‌ಗಳು ಸಿಡಿದಿದ್ದವು. ಇದಕ್ಕೂ ಮುನ್ನ 2022 ರಲ್ಲಿ 1062 ಸಿಕ್ಸರ್‌ಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು.

3 / 11
ಫೋರ್​ಗಳ ದಾಖಲೆ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಫೋರ್​ಗಳು ಮೂಡಿಬಂದಿರುವುದು ಸೀಸನ್ 16 ರಲ್ಲಿ ಎಂಬುದು ವಿಶೇಷ. 2022 ರಲ್ಲಿ 2018 ಫೋರ್​ಗಳನ್ನು ಬಾರಿಸಿದ್ದರೆ, ಕಳೆದ ಬಾರಿ ಬರೋಬ್ಬರಿ 2174 ಬೌಂಡರಿಗಳನ್ನು ಸಿಡಿಸಿದ್ದರು.

4 / 11
ಶತಕಗಳ ದಾಖಲೆ: ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿಗಳನ್ನು ಬಾರಿಸಿರುವುದು ಕಳೆದ ಬಾರಿ ಎಂಬುದು ವಿಶೇಷ. 2022 ರಲ್ಲಿ 8 ಶತಕಗಳನ್ನು ಬಾರಿಸಿದ್ದು ದಾಖಲೆಯಾಗಿತ್ತು. ಆದರೆ ಐಪಿಎಲ್ 2023 ರಲ್ಲಿ 12 ಶತಕಗಳು ಮೂಡಿಬಂದಿದ್ದವು.

5 / 11
ಅರ್ಧಶತಕಗಳ ದಾಖಲೆ: ಐಪಿಎಲ್ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ್ದು ಕೂಡ 2023 ರಲ್ಲಿ. ಐಪಿಎಲ್ ಸೀಸನ್​ 16 ರಲ್ಲಿ ಒಟ್ಟು 153 ಅರ್ಧ ಶತಕಗಳು ಮೂಡಿಬಂದಿವೆ. ಇದಕ್ಕೂ ಮುನ್ನ ಐಪಿಎಲ್ 2022ರ ಸೀಸನ್​ನಲ್ಲಿ 118 ಅರ್ಧಶತಕ ಬಾರಿಸಿದ್ದು ದಾಖಲೆಯಾಗಿತ್ತು.

6 / 11
ಸರಾಸರಿ ಸ್ಕೋರ್ ದಾಖಲೆ: ಐಪಿಎಲ್‌ನ 16ನೇ ಸೀಸನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 183 ಎಂಬುದು ವಿಶೇಷ. ಇದು ಯಾವುದೇ ಐಪಿಎಲ್ ಸೀಸನ್​ನ ಗರಿಷ್ಠ ಮೊತ್ತವಾಗಿದೆ. 2018ರಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 172 ಆಗಿತ್ತು.

7 / 11
ಬ್ಯಾಟ್ಸ್​ಮನ್​ಗಳ ಅಬ್ಬರದ ದಾಖಲೆ: ಕಳೆದ ಬಾರಿಯ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳು ಪ್ರತಿ ಓವರ್​ಗೆ 8.99 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. 2018 ರಲ್ಲಿ ಪ್ರತಿ ಓವರ್‌ಗೆ 8.65 ಸರಾಸರಿಯಲ್ಲಿ ರನ್‌ ಕಲೆಹಾಕಿದ್ದು ಅತ್ಯುತ್ತಮ ದಾಖಲೆಯಾಗಿತ್ತು. ಆದರೆ ಕಳೆದ ಬಾರಿ ಈ ದಾಖಲೆಯನ್ನು ಮುರಿಯಲಾಗಿದೆ.

8 / 11
ಡಬಲ್ ಸೆಂಚುರಿ ಚೇಸಿಂಗ್: ಐಪಿಎಲ್ 2023 ರಲ್ಲಿ 8 ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗುರಿ ಬೆನ್ನತ್ತಲಾಗಿದೆ. ಅದು ಐಪಿಎಲ್​ ಇತಿಹಾಸದಲ್ಲೇ ಗರಿಷ್ಠ ಬಾರಿ ಎಂಬುದು ವಿಶೇಷ. ಈ ಹಿಂದೆ 2014 ರಲ್ಲಿ 3 ಬಾರಿ 200+ ಸ್ಕೋರ್​ ಅನ್ನು ಚೇಸ್ ಮಾಡಿದ್ದು ದಾಖಲೆಯಾಗಿತ್ತು.

9 / 11
ಬೌಲರ್​ಗಳ ದಾಖಲೆ: ಐಪಿಎಲ್ ಸೀಸನ್​ವೊಂದರಲ್ಲಿ ಒಂದೇ ತಂಡದ ಮೂವರು ಬೌಲರ್‌ಗಳು 25 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಮೊದಲ ಬಾರಿ. ಗುಜರಾತ್ ಟೈಟಾನ್ಸ್ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ ಮತ್ತು ರಶೀದ್ ಖಾನ್ ಐಪಿಎಲ್ 2023 ರಲ್ಲಿ ಈ ಸಾಧನೆ ಮಾಡಿದ್ದಾರೆ.

10 / 11
ಅನ್​ಕ್ಯಾಪ್ಡ್ ಆಟಗಾರರ ಸೆಂಚುರಿ: ಕಳೆದ ಬಾರಿ ಇಬ್ಬರು ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಶತಕ ಬಾರಿಸಿ ದಾಖಲೆ ಬರೆದಿದ್ದರು. ಇದು ಕೂಡ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯಾಗಿತ್ತು. ಯಶಸ್ವಿ ಜೈಸ್ವಾಲ್ ಮತ್ತು ಪ್ರಭ್​ಸಿಮ್ರಾನ್ ಸಿಂಗ್ ಸೆಂಚುರಿ ಸಿಡಿಸಿ ಈ ವಿಶೇಷ ದಾಖಲೆ ನಿರ್ಮಿಸಿದ್ದರು.

11 / 11
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ

ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?

ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ

ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ

ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!

ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್