IPL 2023: ಈ ಬಾರಿಯ ಐಪಿಎಲ್ ಪ್ಲೇಆಫ್ಸ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಹೊಸ ಅಭಿಯಾನ ಕೈಗೊಂಡಿತ್ತು. ಈ ಅಭಿಯಾನದಂತೆ ಪ್ಲೇಆಫ್ಸ್ ಪಂದ್ಯಗಳಲ್ಲಿ ಮಾಡುವ ಪ್ರತಿ ಡಾಟ್ ಬಾಲ್ಗೆ ಟಾಟಾ ಕಂಪೆನಿಯ ಸಹಭಾಗಿತ್ವದಲ್ಲಿ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ.
ಇದೇ ಕಾರಣದಿಂದಾಗಿ ಪ್ಲೇಆಫ್ಸ್ ಪಂದ್ಯಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರದ ಗ್ರಾಫಿಕ್ಸ್ ಅನ್ನು ಬಳಸಲಾಗಿತ್ತು. ಇದೀಗ ಐಪಿಎಲ್ ಸೀಸನ್ 16 ಮುಗಿದಿದೆ. ಪ್ಲೇಆಫ್ಸ್ ಹಂತದಲ್ಲಿ ಆಡಲಾದ ಒಟ್ಟು 4 ಪಂದ್ಯಗಳಲ್ಲಿ ಎಷ್ಟು ಡಾಟ್ ಬಾಲ್ ಆಗಿದೆ ಎಂಬುದರ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ಗಳು 40 ಓವರ್ಗಳಲ್ಲಿ ಒಟ್ಟು 84 ಡಾಟ್ ಬಾಲ್ಗಳನ್ನು ಎಸೆದಿದ್ದರು.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ಗಳು ಮಾಡಿದ ಒಟ್ಟು ಡಾಟ್ ಬಾಲ್ 96.
ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೇವಲ 67 ಡಾಟ್ ಬಾಲ್ಗಳನ್ನು ಮಾತ್ರ ಎಸೆಯಲಾಗಿದೆ.
ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಫೈನಲ್ ಪಂದ್ಯದಲ್ಲಿ ಮೂಡಿಬಂದ ಒಟ್ಟು ಡಾಟ್ ಬಾಲ್ 45. ಅಂದರೆ 4 ಪಂದ್ಯಗಳಿಂದ ಒಟ್ಟು 292 ಡಾಟ್ ಬಾಲ್ಗಳು ಮೂಡಿಬಂದಿದೆ.
ಅಂದರೆ 292 x 500 ಲೆಕ್ಕಾಚಾರದಂತೆ ಬಿಸಿಸಿಐ ಟಾಟಾ ಸಹಯೋಗದಲ್ಲಿ ಒಟ್ಟು 1 ಲಕ್ಷದ 46 ಸಾವಿರ ಸಸಿಗಳನ್ನು ನೆಡಲಿದೆ. ಈ ಮೂಲಕ ಐಪಿಎಲ್ ಗ್ರೀ ಡಾಟ್ ಅಭಿಯಾನದ ಅಡಿಯಲ್ಲಿ ಹಸಿರು ಕ್ರಾಂತಿಗೆ ಮುಂದಾಗಿರುವುದು ವಿಶೇಷ.
Published On - 11:06 pm, Tue, 30 May 23