Updated on: Apr 14, 2023 | 8:30 PM
ಐಪಿಎಲ್ನ 20ನೇ ಪಂದ್ಯದಲ್ಲಿ ಎರಡು ಸೋತ ತಂಡಗಳು ಮುಖಾಮುಖಿಯಾಗುತ್ತಿವೆ. ಡಬಲ್ ಹೆಡರ್ ದಿನವಾದ ಶನಿವಾರದಂದು ಮೊದಲ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದೆ.
ಇನ್ನು ಉಭಯ ತಂಡಗಳು ಈ ಟೂರ್ನಿಯಲ್ಲಿ ಸೋಲಿನ ಸರಪಳಿಗೆ ಸಿಲುಕಿದ್ದು, ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1ರಲ್ಲಿ ಗೆದ್ದು 2ರಲ್ಲಿ ಸೋತಿದೆ. ಮತ್ತೊಂದೆಡೆ, ವಾರ್ನರ್ ನಾಯಕತ್ವದ ಡೆಲ್ಲಿ ತಂಡ ಆಡಿದ 4 ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. ಹೀಗಾಗಿ ಉಭಯ ತಂಡಗಳಿಗೂ ಗೆಲುವು ಅವಶ್ಯಕವಾಗಿದೆ.
ಅದರಲ್ಲೂ ಆಡಿರುವ 4 ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿರದ ಡೆಲ್ಲಿ ತಂಡಕ್ಕೆ ಗೆಲುವು ಅಗತ್ಯವಾಗಿದೆ. ಹೀಗಾಗಿ ತಂಡವನ್ನು ಹುರಿದುಂಬಿಸುವ ಸಲುವಾಗಿ ತಂಡದ ಮಾಜಿ ನಾಯಕ ರಿಷಭ್ ಪಂತ್ ಇಂಜುರಿಯ ನಡುವೆಯೂ ಡೆಲ್ಲಿ ಇಂದ ಬೆಂಗಳೂರಿಗೆ ಬಂದಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಂತ್, ಕ್ರಿಕೆಟ್ನಿಂದ ಕೆಲವು ತಿಂಗಳು ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಆದರೆ ಕ್ರಿಕೆಟ್ ಮೇಲಿನ ವ್ಯಾಮೋಹದಿಂದಾಗಿ ಪಂತ್ ತನ್ನ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸುವ ಕೆಲವನ್ನು ಮಾಡುತ್ತಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತಂಡದ ತರಬೇತಿಯ ಅವಧಿಯಲ್ಲಿ ತಂಡದೊಂದಿಗೆ ಕಾಣಿಸಿಕೊಂಡ ಪಂತ್ ಪಂದ್ಯಕ್ಕೂ ಮುನ್ನ ತಂಡವನ್ನು ಗೆಲ್ಲುವಂತೆ ಪ್ರೋತ್ಸಾಹಿಸಿದರು.
ಈ ಹಿಂದೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಪ್ರೋತ್ಸಾಹಿಸಲು ಪಂತ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ. ಪಂದ್ಯದ ಟಾಸ್ 3 ಗಂಟೆಗೆ ನಡೆಯಲಿದೆ.
Published On - 8:30 pm, Fri, 14 April 23