ಶಾರುಖ್ ತಂಡಕ್ಕೆ ಮಾಜಿ ಸಿಎಸ್ಕೆ ಆಟಗಾರ; ಡೆಲ್ಲಿಯಿಂದ ಕೋಲ್ಕತ್ತಾ ಸೇರಿದ ಶಾರ್ದೂಲ್ ಠಾಕೂರ್..!
TV9 Web | Updated By: ಪೃಥ್ವಿಶಂಕರ
Updated on:
Nov 14, 2022 | 3:54 PM
IPL 2023: ಶಾರ್ದೂಲ್ ಖರೀದಿಗೆ ಕೋಲ್ಕತ್ತಾ ಜೊತೆ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ರಯತ್ನಿಸಿದವು, ಆದರೆ ಅಂತಿಮವಾಗಿ ಶಾರ್ದೂಲ್ ಕೆಕೆಆರ್ ತಂಡ ಸೇರಿದ್ದಾರೆ.
1 / 5
ಕೋಲ್ಕತ್ತಾ ನೈಟ್ ರೈಡರ್ಸ್ ಶಾರ್ದೂಲ್ ಠಾಕೂರ್ ಅವರನ್ನು ಟ್ರೇಡಿಂಗ್ ಮೂಲಕ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಶಾರ್ದೂಲ್ ಆ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಶಾರ್ದೂಲ್ ಖರೀದಿಗೆ ಕೋಲ್ಕತ್ತಾ ಜೊತೆ, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಪ್ರಯತ್ನಿಸಿದವು, ಆದರೆ ಅಂತಿಮವಾಗಿ ಶಾರ್ದೂಲ್ ಕೆಕೆಆರ್ ತಂಡ ಸೇರಿದ್ದಾರೆ.
2 / 5
ಶಾರ್ದೂಲ್ ಸದ್ಯ ಟೀಂ ಇಂಡಿಯಾ ಜೊತೆ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಐಪಿಎಲ್ 2022 ರಲ್ಲಿ ದೆಹಲಿ ಶಾರ್ದೂಲ್ ಅವರನ್ನು 10.75 ಕೋಟಿ ರೂಪಾಯಿಗೆ ಖರೀದಿಸಿತು. ಆದರೆ ಈ ಬಾರಿ ಅವರು ಕೆಕೆಆರ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
3 / 5
ಐಪಿಎಲ್ 2022ರಲ್ಲಿ ಶಾರ್ದೂಲ್ 14 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಕಬಳಿಸಿದ್ದರು. ಈ ಸಮಯದಲ್ಲಿ ಅವರ ಎಕಾನಮಿ 9.79 ಆಗಿತ್ತು. ಅದೇ ಸಮಯದಲ್ಲಿ, ಅವರು ಬ್ಯಾಟಿಂಗ್ನಲ್ಲಿ 138 ಸ್ಟ್ರೈಕ್ ರೇಟ್ನಲ್ಲಿ 120 ರನ್ ಕಲೆಹಾಕಿದ್ದರು.
4 / 5
ಐಪಿಎಲ್ 2023 ರ ಟ್ರೇಡಿಂಗ್ ವಿಂಡೋ ಮಂಗಳವಾರ ಮುಚ್ಚಲಿದೆ. ಹೀಗಾಗಿ ಎಲ್ಲಾ ತಂಡಗಳು ತಮಗೆ ಬೇಕಾದ ಹಾಗೂ ಬೇಡದ ಆಟಗಾರರ ಪಟ್ಟಿಯನ್ನು ಸಿದ್ದಪಡಿಸಿಕೊಳ್ಳುತ್ತಿವೆ.
5 / 5
ಟ್ರೇಡ್ ಮೂಲಕ ಕೆಕೆಆರ್ ಸೇರಿದ ಮೂರನೇ ಆಟಗಾರ ಶಾರ್ದೂಲ್. ಅವರಿಗಿಂತ ಮೊದಲು, ಲಾಕಿ ಫರ್ಗುಸನ್ ಮತ್ತು ರಹಮತುಲ್ಲಾ ಗುರ್ಬಾಜ್ ಅವರನ್ನು ಕೆಕೆಆರ್ ಗುಜರಾತ್ ಟೈಟಾನ್ಸ್ ತಂಡದಿಂದ ವ್ಯಾಪಾರ ಮಾಡಿತ್ತು.