IPL 2023: ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆಯನ್ನು ಸರಿಗಟ್ಟಿದ ಶಿಖರ್ ಧವನ್
TV9 Web | Updated By: ಝಾಹಿರ್ ಯೂಸುಫ್
Updated on:
Apr 06, 2023 | 3:58 PM
IPL 2023 Kannada: ಈ ಪಂದ್ಯದಲ್ಲಿ 56 ಎಸೆತಗಳನ್ನು ಎದುರಿಸುವ ಮೂಲಕ ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ 5 ಸಾವಿರಕ್ಕೂ ಅಧಿಕ ಬಾಲ್ಗಳನ್ನು ಎದುರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
1 / 6
IPL 2023 Records: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ 56 ಎಸೆತಗಳಲ್ಲಿ ಅಜೇಯ 86 ರನ್ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಧವನ್ ವಿರಾಟ್ ಕೊಹ್ಲಿಯ 2 ದಾಖಲೆಯನ್ನು ಸರಿಗಟ್ಟಿದ್ದಾರೆ. ಅದರಲ್ಲೊಂದು ವಿಶೇಷ ದಾಖಲೆ ಎಂಬುದು ಇಲ್ಲಿ ವಿಶೇಷ.
2 / 6
ಅಂದರೆ ಈ ಪಂದ್ಯದಲ್ಲಿ 56 ಎಸೆತಗಳನ್ನು ಎದುರಿಸುವ ಮೂಲಕ ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ 5 ಸಾವಿರಕ್ಕೂ ಅಧಿಕ ಬಾಲ್ಗಳನ್ನು ಎದುರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ್ದು ವಿರಾಟ್ ಕೊಹ್ಲಿ ಮಾತ್ರ.
3 / 6
ಕಿಂಗ್ ಕೊಹ್ಲಿ ಐಪಿಎಲ್ನ 216 ಇನಿಂಗ್ಸ್ಗಳ ಮೂಲಕ ಒಟ್ಟು 5178 ಎಸೆತಗಳನ್ನು ಎದುರಿಸಿದ್ದಾರೆ. ಅಲ್ಲದೆ ಈ ವೇಳೆ 6706 ರನ್ ಕಲೆಹಾಕಿ ಅತ್ಯಧಿಕ ರನ್ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
4 / 6
ಇದೀಗ ಐಪಿಎಲ್ನಲ್ಲಿ ಅತ್ಯಧಿಕ ಎಸೆತಗಳನ್ನು ಎದುರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶಿಖರ್ ಧವನ್ 2ನೇ ಸ್ಥಾನಕ್ಕೇರಿದ್ದಾರೆ. ಧವನ್ 207 ಇನಿಂಗ್ಸ್ಗಳಲ್ಲಿ 5027 ಎಸೆತಗಳನ್ನು ಎದುರಿಸಿ 6369 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 5 ಸಾವಿರಕ್ಕೂ ಅಧಿಕ ಎಸೆತಗಳನ್ನು ಎದುರಿಸಿ 2ನೇ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
5 / 6
ಇದಲ್ಲದೆ ಐಪಿಎಲ್ನಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿರುವ ವಿರಾಟ್ ಕೊಹ್ಲಿಯ ದಾಖಲೆಯನ್ನು ಕೂಡ ಧವನ್ ಸರಿಗಟ್ಟಿದ್ದಾರೆ. ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ 50 ಬಾರಿ ಫಿಫ್ಟಿ ಪ್ಲಸ್ ರನ್ ಕಲೆಹಾಕಿದ್ದಾರೆ.
6 / 6
ಇದೀಗ ಶಿಖರ್ ಧವನ್ ಕೂಡ 50 ಬಾರಿ ಅರ್ಧಶತಕಕ್ಕಿಂತ ಹೆಚ್ಚು ರನ್ ಕಲೆಹಾಕಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಕೊಹ್ಲಿಯ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಧವನ್ ಪಾತ್ರರಾಗಿದ್ದಾರೆ.