Virat Kohli: ದೇವರನ್ನೇ ನಂಬದಿದ್ದ ವಿರಾಟ್ ಕೊಹ್ಲಿ ಬದಲಾಗಿದ್ದು ಹೇಗೆ?

| Updated By: ಝಾಹಿರ್ ಯೂಸುಫ್

Updated on: Apr 09, 2023 | 5:30 PM

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು.

1 / 7
ಟೀಮ್ ಇಂಡಿಯಾದ ಮಾಜಿ ನಾಯಕ, ಆರ್​ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ಐಪಿಎಲ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲೇ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ. ಅತ್ತ ಪಂಜಾಬ್ ಕಿಂಗ್ಸ್​ ತಂಡದ ಶಿಖರ್ ಧವನ್ ಕೂಡ ಕೊಹ್ಲಿಯ ದಾಖಲೆಯನ್ನು ಮುರಿಯುತ್ತಾ ಐಪಿಎಲ್​ನಲ್ಲಿ ಅಬ್ಬರಿಸುತ್ತಿದ್ದಾರೆ.

2 / 7
ವಿಶೇಷ ಎಂದರೆ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಪಾದರ್ಪಣೆ ಮಾಡಿದ್ದರು. ಇದೀಗ ಕೊಹ್ಲಿ ಭಾರತ ತಂಡದ ಖಾಯಂ ಸದಸ್ಯರಾಗಿದ್ದರೆ, ಧವನ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಯತ್ನದಲ್ಲಿದ್ದಾರೆ. ಇದರ ನಡುವೆ ತಮ್ಮ ಹಳೆಯ ಸಹಪಾಠಿ ವಿರಾಟ್ ಕೊಹ್ಲಿ ಜೊತೆಗಿನ ಒಡನಾಟದ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ಶಿಖರ್ ಧವನ್.

3 / 7
‘ದಿ ರಣವೀರ್ ಶೋ' ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ ಶಿಖರ್ ಧವನ್, ನಾನು ಹಾಗೂ ಕೊಹ್ಲಿ ಜೊತೆಗಿದ್ದಾಗ ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳ ಬಗ್ಗೆನೇ ಚರ್ಚಿಸುತ್ತಿದ್ದೆವು. ಅದು ಅವರು ಕಟ್ಟಾ ನಾಸ್ತಿಕರಂತೆ ಮಾತನಾಡುತ್ತಿದ್ದರು. ಅಂದರೆ ಅವರಿಗೆ ದೇವರ ಮೇಲೆ ನಂಬಿಕೆ ಇರಲಿಲ್ಲ ಎಂದು ಧವನ್ ತಿಳಿಸಿದ್ದಾರೆ.

4 / 7
ಆದರೀಗ ವಿರಾಟ್ ಕೊಹ್ಲಿ ಬದಲಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಲೋಚನೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಅವರ ಪತ್ನಿ ಅನುಷ್ಕಾ ಶರ್ಮಾ ಎಂದಿದ್ದಾರೆ ಶಿಖರ್ ಧವನ್.

5 / 7
ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ ಮದುವೆಯಾದ ಬಳಿಕ ಕೊಹ್ಲಿಯ ಆಲೋಚನೆಯಲ್ಲಿ ಬದಲಾವಣೆಯಾಯ್ತು. ಅವರಲ್ಲೂ ದೇವರ ಮೇಲೆ ನಂಬಿಕೆ ಹೆಚ್ಚಾಯಿತು. ಕಳೆದ ಐದರಿಂದ ಏಳು ವರ್ಷಗಳಲ್ಲಿ ಅವರು ಆಧ್ಯಾತ್ಮಿಕತೆಯತ್ತ ಸಾಕಷ್ಟು ಒಲವು ತೋರಿದ್ದಾರೆ. ಸದ್ಯ ಅವರು ಇಂದಿನ ಯುವಪೀಳಿಗೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಶಿಖರ್  ಧವನ್ ಹೇಳಿದ್ದಾರೆ.

6 / 7
ಶಿಖರ್ ಧವನ್ ಅವರ ಹೇಳಿಕೆಯನ್ನು ಪುಷ್ಠೀಕರಿಸುವಂತೆ ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಹಲವು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಕಾಣಿಸಿಕೊಂಡಿದ್ದರು. ಉತ್ತರಾಖಂಡ್​​ನ ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮ, ಮಥುರಾದಲ್ಲಿರುವ ವೃಂದಾವನ, ಕಾನ್ಪುರದ ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಆಶ್ರಮಕ್ಕೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಭೇಟಿ ನೀಡಿದ್ದರು.

7 / 7
ಅಲ್ಲದೆ ಈ ಭೇಟಿಯ ಬಳಿಕ ವಿರಾಟ್ ಕೊಹ್ಲಿ ಮೂರು ವರ್ಷಗಳ ನಂತರ ಶತಕವನ್ನೂ ಕೂಡ ಬಾರಿಸಿದ್ದರು. ಅಲ್ಲದೆ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಕಿಂಗ್ ಕೊಹ್ಲಿ ಇದೀಗ ತಮ್ಮ ಹಳೆಯ ಖದರ್​ಗೆ ಮರಳಿದ್ದಾರೆ. ಈ ಭರ್ಜರಿ ಫಾರ್ಮ್ ಈ ಬಾರಿಯ​ ಐಪಿಎಲ್​ನಲ್ಲೂ ಮುಂದುವರೆಯಲಿದೆ ಎಂಬುದರ ಸೂಚನೆ ನೀಡಿದ್ದಾರೆ.