IPL 2023: ಬರೋಬ್ಬರಿ 3298 ಬೌಂಡರಿಗಳು: ಅತೀ ಹೆಚ್ಚು ಸಿಕ್ಸ್​-ಫೋರ್ ಬಾರಿಸಿದ್ದು ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: May 31, 2023 | 9:21 PM

IPL 2023 Records: ಇಬ್ಬರು ಯುವ ದಾಂಡಿಗರಿಗೆ ಐಪಿಎಲ್​ನ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

1 / 7
ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ಅಬ್ಬರ. ಇದಕ್ಕೆ ಸಾಕ್ಷಿಯೇ ಈ ಸಲ ದಾಖಲಾಗಿರುವ ಬೌಂಡರಿಗಳ ಸಂಖ್ಯೆ. ಅಂದರೆ ಈ ಬಾರಿಯ ಐಪಿಎಲ್​ನ 74 ಪಂದ್ಯಗಳಲ್ಲಿ ಒಟ್ಟು 3298 ಬೌಂಡರಿಗಳು ಮೂಡಿಬಂದಿವೆ.

2 / 7
3298 ಬೌಂಡರಿಗಳಲ್ಲಿ 2174 ಫೋರ್​ಗಳಿದ್ದರೆ, 1124 ಸಿಕ್ಸರ್‌ಗಳಿವೆ.  ಇದು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ದಾಖಲೆಯಾಗಿದೆ. ವಿಶೇಷ ಎಂದರೆ ಈ ಬಾರಿ ಅತಿರಥರನ್ನು ಹಿಂದಿಕ್ಕಿ ಇಬ್ಬರು ಯುವ ಆಟಗಾರರೇ ಬೌಂಡರಿ ಬಾರಿಸುವ ವಿಷಯದಲ್ಲಿ ಮುಂದಿದ್ದಾರೆ.

3 / 7
ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಶ್ರೇಯಸ್ಸು ಶುಭ್​ಮನ್ ಗಿಲ್​ಗೆ ಸಲ್ಲುತ್ತದೆ. ಗುಜರಾತ್ ಟೈಟಾನ್ಸ್ ಪರ ಆರಂಭಿಕರಾಗಿ ಆಡಿದ್ದ ಗಿಲ್ ಒಟ್ಟು 118 ಬೌಂಡರಿಗಳನ್ನು ಬಾರಿಸಿದ್ದಾರೆ. ಇದರಲ್ಲಿ 33 ಸಿಕ್ಸ್​ ಹಾಗೂ 85 ಫೋರ್​ಗಳು ಒಳಗೊಂಡಿವೆ.

4 / 7
ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಯಶಸ್ವಿ ಜೈಸ್ವಾಲ್. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಬ್ಯಾಟ್ ಬೀಸಿರುವ ಜೈಸ್ವಾಲ್ 26 ಸಿಕ್ಸ್ ಹಾಗೂ 82 ಫೋರ್​ಗಳನ್ನು ಒಳಗೊಂಡಂತೆ ಒಟ್ಟು 108 ಬೌಂಡರಿಗಳನ್ನು ಬಾರಿಸಿದ್ದಾರೆ.

5 / 7
ಇದಾಗ್ಯೂ ಇಬ್ಬರು ಯುವ ದಾಂಡಿಗರಿಗೆ ಐಪಿಎಲ್​ನ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್​ ಇತಿಹಾಸದಲ್ಲೇ ಒಂದೇ ಸೀಸನ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ಇರುವುದು ಜೋಸ್ ಬಟ್ಲರ್ ಹೆಸರಿನಲ್ಲಿ.

6 / 7
2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಬ್ಯಾಟ್ ಬೀಸಿದ್ದ ಬಟ್ಲರ್ ಒಟ್ಟು 128 ಬೌಂಡರಿಗಳನ್ನು ಸಿಡಿಸಿದ್ದರು. ಈ ವೇಳೆ 45 ಸಿಕ್ಸ್ ಹಾಗೂ 83 ಫೋರ್​ಗಳನ್ನು ಬಾರಿಸಿದ್ದರು.

7 / 7
ಇನ್ನು ಐಪಿಎಲ್​ ಇತಿಹಾಸದಲ್ಲಿ ಒಂದೇ ಸೀಸನ್​ನಲ್ಲಿ ಅತೀ ಹೆಚ್ಚು ಬೌಂಡರಿ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016 ರಲ್ಲಿ ಕಿಂಗ್ ಕೊಹ್ಲಿ 38 ಸಿಕ್ಸ್ ಹಾಗೂ 83 ಫೋರ್​ನೊಂದಿಗೆ ಒಟ್ಟು 121 ಬೌಂಡರಿಗಳನ್ನು ಬಾರಿಸಿದ್ದರು. ಇದೀಗ 118 ಬೌಂಡರಿಗಳನ್ನು ಬಾರಿಸಿರುವ ಶುಭ್​ಮನ್ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.