Updated on:May 31, 2023 | 6:23 PM
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ 7 ಮತ್ತು 11 ರ ನಡುವೆ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದ ಭಾರತ ಇದೀಗ ಈ ತಂಡದ ವಿರುದ್ಧವೇ ಫೈನಲ್ ಆಡಲಿದೆ.
ಈ ಫೈನಲ್‌ಗಾಗಿ ಈಗಾಗಲೇ ಟೀಂ ಇಂಡಿಯಾ ಲಂಡನ್ ತಲುಪಿದ್ದು, ಮೂರನೇ ಬ್ಯಾಚ್ನಲ್ಲಿ ಅಜಿಂಕ್ಯ ರಹಾನೆ ಜೊತೆಗೆ ಕೆಎಸ್ ಭರತ್, ಶುಭ್ಮನ್ ಗಿಲ್, ಶಮಿ ಮತ್ತು ರವೀಂದ್ರ ಜಡೇಜಾ ಐಪಿಎಲ್ 2023 ರ ಫೈನಲ್ ಮುಕ್ತಾಯದ ನಂತರ ಲಂಡನ್ ತಲುಪಿದ್ದಾರೆ.
ಇನ್ನು ಐಪಿಎಲ್ನಲ್ಲಿ ಸಿಎಸ್‌ಕೆ ಪರ ಆಡಿದ್ದ ಅಜಿಂಕ್ಯ ರಹಾನೆ 14 ಪಂದ್ಯಗಳಲ್ಲಿ 172.49 ಸ್ಟ್ರೈಕ್ ರೇಟ್‌ನೊಂದಿಗೆ 326 ರನ್ ಬಾರಿಸಿದರು. ಈ ಅದ್ಭುತ ಪ್ರದರ್ಶನವೇ ರಹಾನೆಗೆ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ಸಿಗುವಂತೆ ಮಾಡಿತು.
ಹೀಗಾಗಿ ರಹಾನೆ ಈಗ ಡಬ್ಲ್ಯುಟಿಸಿ ಫೈನಲ್‌ಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಿದ್ದು, ಇದೀಗ ರಹಾನೆಗೆ ಹಲವು ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಸಿಕ್ಕಿದೆ.
ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ರಹಾನೆ ಇದುವರೆಗೆ 4931 ರನ್ ಬಾರಿಸಿದ್ದುಇನ್ನು 69 ರನ್ ಸಿಡಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಲಿದ್ದಾರೆ. ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಶತಕ ಹಾಗೂ 25 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.
ಇನ್ನು ಟೀಂ ಇಂಡಿಯಾದ ಉತ್ತಮ ಫೀಲ್ಡರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಹಾನೆ ಇದುವರೆಗೆ ಆಡಿರುವ ವ 82 ಪಂದ್ಯಗಳಲ್ಲಿ 99 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇನ್ನೂ ಒಂದು ಕ್ಯಾಚ್ ಹಿಡಿದರೆ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.
ಒಟ್ಟಾರೆಯಾಗಿ ರಹಾನೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 12,865 ರನ್ ಕಲೆಹಾಕಿದ್ದು, ಇನ್ನೂ 135 ರನ್ ಬಾರಿಸಿದರೆ ತಮ್ಮ 13,000 ರನ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.
Published On - 6:21 pm, Wed, 31 May 23