IPL 2023: ಐಪಿಎಲ್ ಆಡಿದ ಜಿಂಬಾಬ್ವೆ ಆಟಗಾರರು ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Apr 01, 2023 | 6:31 PM
IPL 2023 Kannada: ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಸಿಕಂದರ್ ರಾಝ. ಜಿಂಬಾಬ್ವೆ ತಂಡದ ಸ್ಟಾರ್ ಆಲ್ರೌಂಡರ್ ಅನ್ನು ಈ ಬಾರಿ ಹರಾಜಿನಲ್ಲಿ 50 ಲಕ್ಷ ರೂ.ಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತ್ತು.
1 / 7
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಐಸಿಸಿ ಸ್ಥಾನಮಾನ ಹೊಂದಿರುವ ಬಹುತೇಕ ದೇಶಗಳ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಜಿಂಬಾಬ್ವೆ ತಂಡದಿಂದ ಇದುವರೆಗೆ 4 ಆಟಗಾರರು ಐಪಿಎಲ್ನ ಭಾಗವಾಗಿದ್ದಾರೆ.
2 / 7
ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಸಿಕಂದರ್ ರಾಝ. ಜಿಂಬಾಬ್ವೆ ತಂಡದ ಸ್ಟಾರ್ ಆಲ್ರೌಂಡರ್ ಅನ್ನು ಈ ಬಾರಿ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತು. ಅಲ್ಲದೆ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ರಾಝ ಐಪಿಎಲ್ಗೆ ಪದಾರ್ಪಣೆ ಮಾಡಿದ್ದಾರೆ.
3 / 7
ಐಪಿಎಲ್ನಲ್ಲಿ ಚೊಚ್ಚಲ ಪಂದ್ಯವಾಡಿದ ಸಿಕಂದರ್ ರಾಝ 13 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ವಿಶೇಷ ಎಂದರೆ ಇದುವರೆಗೆ ಐಪಿಎಲ್ನಲ್ಲಿ 4 ಆಟಗಾರರು ಕಾಣಿಸಿಕೊಂಡರೂ, ಕಣಕ್ಕಿಳಿದಿರುವುದು ಮೂವರು ಆಟಗಾರರು ಮಾತ್ರ. ಹಾಗಿದ್ರೆ ಐಪಿಎಲ್ಗೆ ಆಯ್ಕೆಯಾದ ಆ 4 ಆಟಗಾರರು ಯಾರೆಲ್ಲಾ ಎಂದು ನೋಡೋಣ...
4 / 7
ತಾತೆಂಡ ತೈಬು: ಐಪಿಎಲ್ಗೆ ಆಯ್ಕೆಯಾದ ಮೊದಲ ಜಿಂಬಾಬ್ವೆ ಆಟಗಾರ ತಾತೆಂಡ ತೈಬು. 2008 ರಲ್ಲಿ ಕೆಕೆಆರ್ ಪರ 3 ಪಂದ್ಯಗಳನ್ನಾಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ತಾತೆಂಡ ತೈಬು ಕೇವಲ 31 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
5 / 7
ರೇ ಪ್ರೈಸ್: ಜಿಂಬಾಬ್ವೆ ತಂಡದ ವೇಗಿ ರೇ ಪ್ರೈಸ್ 2011 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕೇವಲ 1 ಪಂದ್ಯವಾಡಿದ್ದರು. ಕೆಕೆಆರ್ ವಿರುದ್ಧದ ಈ ಪಂದ್ಯದಲ್ಲಿ 3 ಓವರ್ ಎಸೆದಿದ್ದ ರೇ 33 ರನ್ ನೀಡಿದರೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.
6 / 7
ಬ್ರೆಂಡನ್ ಟೇಲರ್: 2014 ರಲ್ಲಿ ಜಿಂಬಾಬ್ವೆ ತಂಡದ ಆಲ್ರೌಂಡರ್ ಬ್ರೆಂಡನ್ ಟೇಲರ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡವು ಆಯ್ಕೆ ಮಾಡಿಕೊಂಡಿತು. ಇದಾಗ್ಯೂ ಟೇಲರ್ಗೆ ಐಪಿಎಲ್ ಪಂದ್ಯವಾಡುವ ಅವಕಾಶ ದೊರೆತಿರಲಿಲ್ಲ.
7 / 7
ಸಿಕಂದರ್ ರಾಝ: ಇದೀಗ 9 ವರ್ಷಗಳ ಬಳಿಕ ಜಿಂಬಾಬ್ವೆ ತಂಡದ ಆಟಗಾರ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ ರಾಝ ಐಪಿಎಲ್ ಪಂದ್ಯವಾಡಿದ ಮೂರನೇ ಜಿಂಬಾಬ್ವೆ ಆಟಗಾರ ಎನಿಸಿಕೊಂಡಿದ್ದಾರೆ.