AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 RCB: ದಿಗ್ಗಜರ ಸಮಾಗಮ: ಈ ಸಲ ಕಪ್ ನಮ್ದೇ ಎಂದ RCB ಫ್ಯಾನ್ಸ್

IPL 2023 RCB Kannada: ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್​ಸಿಬಿ ತಂಡವು ಐಪಿಎಲ್ ಅಭಿಯಾನ ಆರಂಭಿಸಲಿದೆ.

TV9 Web
| Edited By: |

Updated on: Apr 01, 2023 | 3:30 PM

Share
IPL 2023 RCB: ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ತಯಾರಿಯಲ್ಲಿದೆ. ಕಳೆದೆರಡು ದಿನಗಳಿಂದ ಬೆವರಿಳಿಸುತ್ತಿರುವ ಆರ್​ಸಿಬಿ ಆಟಗಾರರನ್ನು ಶುಕ್ರವಾರ ವಿಶೇಷ ಅತಿಥಿಯೊಬ್ಬರು ಭೇಟಿಯಾಗಿದ್ದರು. ಅದು ಕೂಡ ಕಿಂಗ್ ಕೊಹ್ಲಿಯ ಜೊತೆಗೆ ಆಗಮಿಸುವ ಮೂಲಕ ಎಂಬುದು ವಿಶೇಷ.

1 / 7
ಹೌದು, ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್​ನ ಕಿಂಗ್ ಆದರೆ, ಭಾರತದ ಫುಟ್​ಬಾಲ್ ಅಂಗಳದ ಕಿಂಗ್ ಸುನಿಲ್ ಛೆಟ್ರಿ. ಇದೀಗ ಭಾರತೀಯ ಫುಟ್​ಬಾಲ್ ತಂಡದ ನಾಯಕ ಆರ್​ಸಿಬಿ ಕ್ಯಾಂಪ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2 / 7
ಶುಕ್ರವಾರ ಆರ್​ಸಿಬಿ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಯೊಂದಿಗೆ ತಂಡ ಜೆರ್ಸಿ ಧರಿಸಿ ಆಗಮಿಸಿದ ಸುನಿಲ್ ಛೆಟ್ರಿ ಆಟಗಾರರೊಂದಿಗೆ ಸಮಾಲೋಚಿಸಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಆರ್​ಸಿಬಿ ಪ್ಲೇಯರ್​ಗಳನ್ನು ಹುರಿದುಂಬಿಸಿದರು.

3 / 7
ಅಷ್ಟೇ ಅಲ್ಲದೆ ಅದ್ಭುತವಾಗಿ ಫೀಲ್ಡಿಂಗ್ ಮಾಡುವ ಮೂಲಕ ಆರ್​ಸಿಬಿ ಆಟಗಾರರೇ ನಿಬ್ಬೆರಗಾಗುವಂತೆ ಮಾಡಿದರು. ಇದೇ ವೇಳೆ ಮಾತನಾಡಿದ ಸುನಿಲ್ ಛೆಟ್ರಿ, ನಾನು ಕೂಡ ಬೆಂಗಳೂರಿಗ, ಆರ್​ಸಿಬಿ ನಮ್ಮ ತಂಡ ಎಂದರು.

4 / 7
ನಾನು ಸಹ ಬೆಂಗಳೂರು ಫುಟ್​ಬಾಲ್ ಕ್ಲಬ್​ನ ಆಟಗಾರ. ಬಿಎಫ್​ಸಿ ಜೊತೆ ಆಡಲಾರಂಭಿಸಿದಾಗಿನಿಂದ ನಾನು ಆರ್​ಸಿಬಿಯನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಬೆಂಗಳೂರು ನಮ್ಮ ನಗರ, ಅಂದ್ರೆ ಬೆಂಗಳೂರಿನ ತಂಡ ನಮ್ಮದಲ್ಲವೇ ಎಂದರು.

5 / 7
ಇದೀಗ ಆರ್​ಸಿಬಿ ಹಂಚಿಕೊಂಡಿರುವ ಸುನಿಲ್ ಛೆಟ್ರಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಆರ್​ಸಿಬಿ ತಂಡದ ಮೇಲಿನ ಅವರ ಅಭಿಮಾನಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

6 / 7
ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್​ಸಿಬಿ ತಂಡವು ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ಬಾರಿ ಹೊಸ ಉತ್ಸಾಹದಲ್ಲಿರುವ ಆರ್​ಸಿಬಿ ಹೋಮ್​ ಗ್ರೌಂಡ್​ ಮೂಲಕ ಐಪಿಎಲ್ ಅಭಿಯಾನ ಆರಂಭಿಸುತ್ತಿರುವುದರಿಂದ ಈ ಸಲ ಕಪ್ ನಮ್ದೇ ಎನ್ನುವ ವಿಶ್ವಾಸದಲ್ಲಿದ್ದಾರೆ ಆರ್​ಸಿಬಿ ಫ್ಯಾನ್ಸ್​.

7 / 7
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!

ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್

ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ

MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್

ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್

ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?

ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ

ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!

56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!

Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?