IPL 2023: ಮಂಕಾದ ಸೂರ್ಯಕುಮಾರ್ ಯಾದವ್: 6 ಇನಿಂಗ್ಸ್ನಲ್ಲಿ 4 ಸೊನ್ನೆ..!
TV9 Web | Updated By: ಝಾಹಿರ್ ಯೂಸುಫ್
Updated on:
Apr 12, 2023 | 7:22 PM
IPL 2023 Kannada: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಜವಾಬ್ದಾರಿಯುತ ಬ್ಯಾಟಿಂಗ್ ಮೂಡಿ ಬಂದಿದೆ. ಇನ್ನು ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಕೂಡ ಅತ್ಯಮೂಲ್ಯ ಕಾಣಿಕೆ ನೀಡಿದ್ದಾರೆ.
1 / 6
IPL 2023: 0,0,0,15,1,0...ಇದು ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಸೂರ್ಯಕುಮಾರ್ ಕಳೆದ 6 ಇನಿಂಗ್ಸ್ಗಳಲ್ಲಿ ಕಲೆಹಾಕಿದ ಸ್ಕೋರ್. ಅಂದರೆ ಸಿಡಿಲಬ್ಬರದ ಸೂರ್ಯನ ಬ್ಯಾಟ್ನಿಂದ ಕಳೆದ 6 ಇನಿಂಗ್ಸ್ಗಳಿಂದ ಮೂಡಿಬಂದಿರುವುದು ಕೇವಲ 16 ರನ್ಗಳು. ಇದರಲ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್ಗೆ ಔಟಾಗಿದ್ದಾರೆ ಎಂಬುದೇ ಅಚ್ಚರಿ.
2 / 6
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸತತ ಮೂರು ಬಾರಿ ಗೋಲ್ಡನ್ ಡಕ್ಗೆ ಔಟಾಗಿದ್ದ ಸೂರ್ಯಕುಮಾರ್ ಯಾದವ್ ಐಪಿಎಲ್ಗೆ ಬಂದ ಬಳಿಕ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ಪರ ಆಡಿದ ಮೂರು ಪಂದ್ಯಗಳಲ್ಲೂ ಸೂರ್ಯ ಬ್ಯಾಟ್ನಿಂದ ಪ್ರಕಾಶ ಹೊರಹೊಮ್ಮಲೇ ಇಲ್ಲ.
3 / 6
ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 15 ರನ್ ಬಾರಿಸಿದ್ದು ಬಿಟ್ಟರೆ, ಉಳಿದೆರೆಡು ಪಂದ್ಯಗಳಲ್ಲೂ ಸಂಪೂರ್ಣ ವಿಫಲರಾಗಿದ್ದಾರೆ. ಸಿಎಸ್ಕೆ ವಿರುದ್ಧ 2 ಎಸೆತಗಳಲ್ಲಿ 1 ರನ್ಗಳಿಸಿ ಔಟಾದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತದೇ ಗೋಲ್ಡನ್ ಡಕ್ನೊಂದಿಗೆ ಹಿಂತಿರುಗಿದ್ದಾರೆ.
4 / 6
ಕಳೆದ ಸೀಸನ್ನಲ್ಲಿ ಕೇವಲ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ 303 ರನ್ ಬಾರಿಸಿ ಅಬ್ಬರಿಸಿದ್ದರು. ಆದರೆ ಈ ಬಾರಿ 3 ಪಂದ್ಯ ಮುಗಿದರೂ ಸೂರ್ಯನ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 16 ರನ್ಗಳು ಮಾತ್ರ.
5 / 6
ಇದುವೇ ಈಗ ಮುಂಬೈ ಇಂಡಿಯನ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ತಂಡದ ಸ್ಟಾರ್ ಆಟಗಾರನಾಗಿರುವ ಸೂರ್ಯಕುಮಾರ್ ಮಧ್ಯಮ ಕ್ರಮಾಂಕದಲ್ಲಿ ಕೈ ಕೊಡುತ್ತಿರುವುದು ಮುಂಬೈ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ. ಇದೇ ಕಾರಣದಿಂದಾಗಿ ನಾಯಕ ರೋಹಿತ್ ಶರ್ಮಾ ತಂಡದಲ್ಲಿರುವ ಹಿರಿಯ ಆಟಗಾರರು ಜವಾಬ್ದಾರಿಯುತವಾಗಿ ಆಡಿದ್ರೆ ಮಾತ್ರ ಪಂದ್ಯಗಳನ್ನು ಗೆಲ್ಲಬಹುದು ಅಂದಿದ್ದರು.
6 / 6
ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರಿಂದ ಜವಾಬ್ದಾರಿಯುತ ಬ್ಯಾಟಿಂಗ್ ಮೂಡಿ ಬಂದಿದೆ. ಇನ್ನು ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಕೂಡ ಅತ್ಯಮೂಲ್ಯ ಕಾಣಿಕೆ ನೀಡಿದ್ದಾರೆ. ಇದಾಗ್ಯೂ ದೆಹಲಿ ಮೈದಾನದಲ್ಲಿ ಸೂರ್ಯ ಮಾತ್ರ ಪ್ರಜ್ವಲಿಸಲೇ ಇಲ್ಲ. ಅದೇ ಗೋಲ್ಡನ್ ಡಕ್ನೊಂದಿಗೆ ಪೆವಿಲಿಯನ್ಗೆ ಹಿಂತಿರುಗಿರುವುದು ಇದೀಗ ಮುಂಬೈ ಇಂಡಿಯನ್ಸ್ ತಂಡ ಚಿಂತೆಗೆ ಕಾರಣವಾಗಿದೆ.