Updated on: May 12, 2023 | 6:02 PM
IPL 2023: ಐಪಿಎಲ್ನ 57ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ಹಂತಕ್ಕೇರಲು ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ.
ಏಕೆಂದರೆ 16 ಪಾಯಿಂಟ್ಸ್ ಹೊಂದಿರುವ ಗುಜರಾತ್ ಟೈಟಾನ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಇಂದು ಗೆದ್ದರೆ ತನ್ನ ಅಂಕಗಳನ್ನು 14 ಕ್ಕೇರಿಸಲಿದೆ. ಇದರಿಂದ ಮುಂಬೈ ತಂಡದ ಪ್ಲೇಆಫ್ ಹಾದಿ ಸುಗಮವಾಗಲಿದೆ.
ಆದರೆ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತರೆ ಅದು ಆರ್ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನು 3 ಪಂದ್ಯಗಳಿದ್ದು, ಇದರಲ್ಲಿ ಒಂದರಲ್ಲಿ ಸೋತರೆ ಒಟ್ಟು 16 ಪಾಯಿಂಟ್ಸ್ ಮಾತ್ರ ಆಗಲಿದೆ. ಇದೀಗ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ಅನ್ನು ಹಿಂದಿಕ್ಕುವ ಅವಕಾಶ ಕೂಡ ಆರ್ಸಿಬಿ ಮುಂದಿದೆ.ಆದರೆ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತರೆ ಅದು ಆರ್ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನು 3 ಪಂದ್ಯಗಳಿದ್ದು, ಇದರಲ್ಲಿ ಒಂದರಲ್ಲಿ ಸೋತರೆ ಒಟ್ಟು 16 ಪಾಯಿಂಟ್ಸ್ ಮಾತ್ರ ಆಗಲಿದೆ. ಇದೀಗ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಮುಂಬೈ ಅನ್ನು ಹಿಂದಿಕ್ಕುವ ಅವಕಾಶ ಕೂಡ ಆರ್ಸಿಬಿ ಮುಂದಿದೆ.
ಒಂದು ವೇಳೆ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಸೋತರೆ, ಆರ್ಸಿಬಿ ತಂಡವು ಮುಂದಿನ 3 ಪಂದ್ಯಗಳಲ್ಲಿ ಗೆದ್ದು ಒಟ್ಟು 16 ಪಾಯಿಂಟ್ಸ್ ಕಲೆಹಾಕಿ ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಶಿಸಲು ಅವಕಾಶ ದೊರೆಯಲಿದೆ.
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಗುಜರಾತ್ ಟೈಟಾನ್ಸ್ ತಂಡದ ಗೆಲುವು ಆರ್ಸಿಬಿ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಗೆಲುವನ್ನು ಆರ್ಸಿಬಿ ಎದುರು ನೋಡಬೇಕು. ಇದರಿಂದ ಆರ್ಸಿಬಿ ತಂಡದ ಪ್ಲೇಆಫ್ ಹಾದಿಯು ಕೊಂಚ ಸುಗಮವಾಗಲಿದೆ.