Updated on: Mar 27, 2023 | 11:43 AM
ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಸೀಸನ್‌ನಲ್ಲಿ ಅನೇಕ ಯುವ ಆಟಗಾರರು ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದರೆ, ಇನ್ನು ಕೆಲವು ಹಿರಿಯ ಆಟಗಾರರಿಗೆ ಇದು ಕೊನೆಯ ಐಪಿಎಲ್ ಆಗುವ ಸಾಧ್ಯತೆಗಳಿವೆ. ಇತ್ತೀಚೆಗೆ ನಡೆದ ಮಿನಿ ಹರಾಜಿನಲ್ಲೂ ಬಹುತೇಕ ಎಲ್ಲ ತಂಡಗಳು ಯುವ ಆಟಗಾರರತ್ತ ಗಮನ ಹರಿಸಿದ್ದವು. ಮತ್ತೊಂದೆಡೆ, ಹಿರಿಯ ಆಟಗಾರರಾದ ಕೀರನ್ ಪೊಲಾರ್ಡ್ ಮತ್ತು ಡ್ವೇನ್ ಬ್ರಾವೋ ಈಗಾಗಲೇ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಈಗ ಅವರ ಜೊತೆಗೆ ಮುಂದಿನ ವರ್ಷ ಲೀಗ್‌ನಿಂದ ದೂರ ಉಳಿಯಲಿರುವ ಇತರ ಐವರು ಆಟಗಾರರ ಪಟ್ಟಿ ಇಲ್ಲಿದೆ.
ಎಂಎಸ್ ಧೋನಿ: 16ನೇ ಆವೃತ್ತಿಯ ಐಪಿಎಲ್ ಮಹೇಂದ್ರ ಸಿಂಗ್ ಧೋನಿಗೆ ಕೊನೆಯ ಸೀಸನ್ ಎಂದು ಈಗಾಗಲೇ ಹೇಳಲಾಗುತ್ತಿದೆ. ಟೀಂ ಇಂಡಿಯಾದಿಂದ ನಿವೃತ್ತಿಯಾಗಿರುವ ಈ ದಿಗ್ಗಜ ಬ್ಯಾಟ್ಸ್‌ಮನ್, ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು ಚೆನ್ನೈನಲ್ಲಿ ಆಡಲು ಬಯಸಿದ್ದಾರೆ. ಅಲ್ಲದೆ, ಧೋನಿ ನಿವೃತ್ತಿಯ ನಂತರ ಬೆನ್ ಸ್ಟೋಕ್ಸ್ ಸಿಎಸ್‌ಕೆ ಸಾರಥ್ಯ ವಹಿಸುವ ಸಾಧ್ಯತೆಯಿದೆ.
ದಿನೇಶ್ ಕಾರ್ತಿಕ್: ದಿನೇಶ್ ಕಾರ್ತಿಕ್ಗೆ ಈಗ 38 ವರ್ಷ. ಟಿ20 ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರೂ ಅವರಿಗೆ ಫಿನಿಶರ್ ಆಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಕಾರ್ತಿಕ್ಗೆ ಇದು ಕೊನೆಯ ಐಪಿಎಲ್ ಆಗುವ ಎಲ್ಲಾ ಸಾಧ್ಯತೆಗಳಿಬೆ. ಏಕೆಂದರೆ ಕಾಮೆಂಟೇಟರ್ ಆಗಿ ಕಾರ್ತಿಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೇವಿಡ್ ವಾರ್ನರ್: ಐಪಿಎಲ್ 2023 ಡೇವಿಡ್ ವಾರ್ನರ್ ಅವರ ಕೊನೆಯ ಐಪಿಎಲ್ ಆಗುವ ಸಾಧ್ಯತೆಗಗಳಿವೆ. ಏಕೆಂದರೆ ಇತ್ತೀಚಿಗೆ ಫಾರ್ಮ್ ಕೊರತೆಯಿಂದ ಕಂಗೆಟ್ಟಿರುವ ವಾರ್ನರ್, ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ.
ಅಮಿತ್ ಮಿಶ್ರಾ: ಮಿಶ್ರಾ ಅವರಿಗೆ 41 ವರ್ಷ. ಅವರ ವಯಸ್ಸಿನ ಕಾರಣ, ಕಳೆದ ವರ್ಷದ ಹರಾಜಿನಲ್ಲಿ ಯಾರೂ ಅವರನ್ನು ಖರೀದಿಸಲಿಲ್ಲ. ಆದರೆ ಈ ಬಾರಿ ಲಕ್ನೋ ತಂಡ ಸೇರಿಕೊಂಡಿರುವ ಮಿಶ್ರಾಗೆ ಮುಂದಿನ ಸೀಸನ್‌ನಲ್ಲಿ ಆಡುವ ಅವಕಾಶ ಸಿಗುವುದು ಭಾಗಶಃ ಅನುಮಾನ.
ಅಂಬಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಅವರಿಗೆ ಇದು ಕೊನೆಯ ಐಪಿಎಲ್ ಆಗಬಹುದು. 38 ವರ್ಷದ ರಾಯುಡು ಕಳೆದ ಆವೃತ್ತಿಯಲ್ಲೇ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದರು. ಹೀಗಾಗಿ ಈ ಸೀಸನ್‌ನಲ್ಲಿ ರಾಯುಡು ಫಾರ್ಮ್ ಕಂಡುಕೊಳ್ಳದಿದ್ದರೆ, ಇದು ಅವರಿಗೆ ಕೊನೆಯ ಐಪಿಎಲ್ ಆಗುವು ಸಾಧ್ಯತೆಗಳಿವೆ.
Published On - 11:40 am, Mon, 27 March 23