- Kannada News Photo gallery Cricket photos BCCI announced its annual retainer contracts Sanju Samson in Grade C and Ravindra Jadeja in A Plus contract
BCCI Central Contracts: ಜಡೇಜಾಗೆ ಬಂಪರ್: ವರ್ಷಕ್ಕೆ 7 ಕೋಟಿ ರೂ. ಸ್ಯಾಲರಿ: ಸಂಜು ಸ್ಯಾಮ್ಸನ್ಗೆ ಎಷ್ಟು ಗೊತ್ತೇ?
Team India Players Salary: ಬಿಸಿಸಿಐ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಅವಧಿಯನ್ನು ಪ್ರಕಟಿಸಿದೆ. ಇಂಜುರಿಯಿಂದ ಕಮ್ಬ್ಯಾಕ್ ಮಾಡಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾಗೆ ಭಡ್ತಿ ನೀಡಲಾಗಿದೆ. ಸಂಜು ಸ್ಯಾಮ್ಸನ್ ಕೂಡ ಪಟ್ಟಿಯಲ್ಲಿದ್ದಾರೆ.
Updated on:Mar 27, 2023 | 10:56 AM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಅವಧಿಯನ್ನು ಪ್ರಕಟಿಸಿದೆ. ಕೆಲವೊಂದು ಅಚ್ಚರಿ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ. ಐಸಿಸಿ ಏಕದಿನ ವಿಶ್ವಕಪ್ 2023 ದೃಷ್ಟಿಯಿಂದ ಶಿಖರ್ ಧವನ್ ಹಾಗೂ ಸಂಜು ಸ್ಯಾಮ್ಸನ್ ಕಾಂಟ್ರಾಕ್ಟ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ಮೂಲಕ ಏಕದಿನ ವಿಶ್ವಕಪ್ನ ಭಾರತ ತಂಡದಲ್ಲಿ ಧವನ್ ಹಾಗೂ ಸ್ಯಾಮ್ಸನ್ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇವರಿಬ್ಬರು ಉತ್ತಮ ಪ್ರದರ್ಶನ ತೋರಿದರೆ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗುವ ಸಾಧ್ಯತೆ ಇದೆ.

ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಇಂಜುರಿ ಒಂದುಕಡೆಯಾದರೆ ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್ನಲ್ಲಿ ನೀಡಿದ ಕಳಪೆ ಪ್ರದರ್ಶನ ಸಂಜು ಸ್ಯಾಮ್ಸನ್ಗೆ ವರವಾಗಿ ಪರಿಣಮಿಸಿದೆ ಎಂದೇ ಹೇಳಬಹುದು. ನಂಬರ್ 4 ಕ್ರಮಾಂಕದಲ್ಲಿ ಸಂಜು ಮುಂದಿನ ದಿನಗಳಲ್ಲಿ ಆಡುವ ಸಾಧ್ಯತೆ ಇದೆ.

ಇದರ ನಡುವೆ ಇಂಜುರಿಯಿಂದ ಕಮ್ಬ್ಯಾಕ್ ಮಾಡಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾಗೆ ಭಡ್ತಿ ನೀಡಲಾಗಿದೆ. ಇವರು A+ ಗ್ರೇಡ್ನಲ್ಲಿ ಕಾಣಿಸಿಗೊಂಡಿದ್ದು ಬರೋಬ್ಬರಿ 7 ಕೋಟಿ ವರ್ಷಕ್ಕೆ ಪಡೆಯುತ್ತಿದ್ದಾರೆ. ಕೆಎಲ್ ರಾಹುಲ್ ಅವರಿಗೆ ಶಾಕ್ ನೀಡಲಾಗಿದೆ. ಇಲ್ಲಿದೆ ನೋಡಿ ಬಿಸಿಸಿಐ ಬಿಡುಗಡೆ ಮಾಡಿರುವ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿ.

A+ ಗ್ರೇಡ್: 7 ಕೋಟಿ ಪಡೆಯುತ್ತಿರುವ ಆಟಗಾರರು: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.

A ಗ್ರೇಡ್: 5 ಕೋಟಿ ಪಡೆಯುತ್ತಿರುವ ಪ್ಲೇಯರ್ಸ್: ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್, ಅಕ್ಷರ್ ಪಟೇಲ್.

B ಗ್ರೇಡ್: 3 ಕೋಟಿ ಪಡೆಯುತ್ತಿರುವ ಆಟಗಾರರು: ಚೇತೇಶ್ವರ್ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್.

C ಗ್ರೇಡ್: 1 ಕೋಟಿ ಪಡೆಯುತ್ತಿರುವ ಪ್ಲೇಯರ್ಸ್: ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್.
Published On - 10:56 am, Mon, 27 March 23
