Updated on: May 17, 2023 | 5:18 PM
ಐಪಿಎಲ್ 2023 ಪಂದ್ಯಾವಳಿಯು ಇತಿಹಾಸದಲ್ಲಿ ರೋಚಕ ಪಂದ್ಯಾವಳಿಯಾಗಿದೆ. ಪಂದ್ಯಾವಳಿಯು ಅನೇಕ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಇದುವರೆಗೆ 6 ಶತಕಗಳು ದಾಖಲಾಗಿವೆ. ಇದರೊಂದಿಗೆ ಈ ಐಪಿಎಲ್‌ನಲ್ಲಿ ಇದುವರೆಗೆ 5 ಬೌಲರ್‌ಗಳು ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದದ ನಿರಾಶಾದಾಯಕ ದಾಖಲೆಯನ್ನು ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕು ವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಸೇರಿದ್ದಾರೆ. ಅವರುಗಳು ಯಾರು ಎಂಬ ವಿವರ ಇಲ್ಲಿದೆ.
ಅರ್ಜುನ್ ತೆಂಡೂಲ್ಕರ್: ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಜುನ್ ತೆಂಡೂಲ್ಕರ್ ಒಂದೇ ಓವರ್‌ನಲ್ಲಿ 31 ರನ್ ನೀಡಿದರು. ಇದು ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ 15 ನೇ ಓವರ್ ಆಗಿದ್ದು, ಸ್ಯಾಮ್ ಕರನ್ ಮತ್ತು ಹರ್‌ಪ್ರೀತ್ ಸಿಂಗ್, ಅರ್ಜುನ್ ತೆಂಡೂಲ್ಕರ್ ವಿರುದ್ಧ ಬೌಂಡರಿಗಳ ಮಳೆಗರೆದರು.
ಯಶ್ ದಯಾಳ್: ಅರ್ಜುನ್ ತೆಂಡೂಲ್ಕರ್ ಜೊತೆಗೆ ಯಶ್ ದಯಾಲ್ ಕೂಡ ಒಂದು ಓವರ್‌ನಲ್ಲಿ 31 ರನ್ ಬಿಟ್ಟುಕೊಟ್ಟ ನಾಚಿಕೆಗೇಡಿನ ದಾಖಲೆಯನ್ನು ಹೊಂದಿದ್ದಾರೆ. ಗುಜರಾತ್ ಟೈಟಾನ್ಸ್‌ನ ಈ ಬೌಲರ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ 31 ರನ್ ನೀಡಿದರು. ಕೆಕೆಆರ್ ತಂಡದ ರಿಂಕಿ ಸಿಂಗ್ ಅಂತಿಮ ಓವರ್‌ನಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದ್ದು ಇದೇ ಪಂದ್ಯ.
ಅಭಿಷೇಕ್ ಶರ್ಮಾ: ಐಪಿಎಲ್ 2023 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಅಭಿಷೇಕ್ ಶರ್ಮಾ ಕೂಡ ಓವರ್‌ನಲ್ಲಿ 31 ರನ್ ನೀಡಿದರು. ಅಭಿಷೇಕ್ ಶರ್ಮಾ ಅವರ ಈ ಓವರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಕಸ್ ಸ್ಟೋನಿಸ್ ಮತ್ತು ನಿಕೋಲಸ್ ಪೂರನ್ ಐದು ಸಿಕ್ಸರ್ ಬಾರಿಸಿದರು.
ಉಮ್ರಾನ್ ಮಲಿಕ್: ಉಮ್ರಾನ್ ಮಲಿಕ್ ಅವರ ಕಳಪೆ ಪ್ರದರ್ಶನ ಐಪಿಎಲ್ 2023 ರ ಉದ್ದಕ್ಕೂ ಮುಂದುವರೆದಿದೆ. ಕಳೆದ ಸೀಸನ್ನಲ್ಲಿ ಅಗ್ರ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಮಲಿಕ್ ಈ ಆವೃತ್ತಿಯಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ಒಂದು ಓವರ್‌ನಲ್ಲಿ 28 ರನ್ ನೀಡಿದರು. ನಿತೀಶ್ ರಾಣಾ ಒಂದು ಓವರ್‌ನಲ್ಲಿ ನಾಲ್ಕು ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.
ಜೋಫ್ರಾ ಆರ್ಚರ್: ಇಂಗ್ಲೆಂಡ್ ವೇಗಿ ಆರ್ಚರ್ ಗಾಯಗೊಂಡಿರುವ ಕಾರಣ ಮುಂಬೈ ತಂಡದೊಂದಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ ಆಡಿದ ಕೆಲವು ಪಂದ್ಯಗಳಲ್ಲಿ ಆರ್ಚರ್ ಕೂಡ ದುಬಾರಿ ಎಂದು ಸಾಬೀತಾಯಿತು. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ 27 ರನ್ ನೀಡಿದರು. ಈ ಓವರ್‌ನಲ್ಲಿ ಪಂಜಾಬ್‌ನ ಲಿಯಾಮ್ ಲಿವಿಂಗ್‌ಸ್ಟನ್ ಮೂರು ಸಿಕ್ಸರ್‌ಗಳನ್ನು ಬಾರಿಸಿದರು.