IPL 2023: ರಣರೋಚಕ ಘಟ್ಟದಲ್ಲಿ ಪ್ಲೇಆಫ್ ರೇಸ್: 5 ತಂಡಗಳ ನಡುವೆ ನೇರ ಪೈಪೋಟಿ

IPL 2023 Kannada: ಚೆನ್ನೈ, ಮುಂಬೈ ಹಾಗೂ ಲಕ್ನೋ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಇಲ್ಲಿ 4ನೇ ಸ್ಥಾನ ಪಡೆಯುವ ತಂಡದೊಂದಿಗೆ ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿಗೆ ನೆಟ್​ ರನ್​ ರೇಟ್ ಪೈಪೋಟಿ ನೀಡುವ ಉತ್ತಮ ಅವಕಾಶವಿದೆ.

| Updated By: ಝಾಹಿರ್ ಯೂಸುಫ್

Updated on: May 17, 2023 | 3:21 PM

IPL 2023: ಐಪಿಎಲ್​ನ 16ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 64 ಪಂದ್ಯಗಳು ಮುಗಿದರೂ ಪ್ಲೇಆಫ್ ಅನ್ನು ಖಚಿತಪಡಿಸಿಕೊಂಡಿರುವುದು ಗುಜರಾತ್ ಟೈಟಾನ್ಸ್ ಮಾತ್ರ. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ಪ್ಲೇಆಸ್ ರೇಸ್​ನಿಂದ ಹೊರಬಿದ್ದಿದೆ.

1 / 9
ಅಂದರೆ ಇನ್ನುಳಿದ 3 ಸ್ಥಾನಗಳಿಗಾಗಿ ಈಗಲೂ 7 ತಂಡಗಳ ನಡುವೆ ಪೈಪೋಟಿ ಇದೆ. ಆದರೆ ಇಲ್ಲಿ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನ ಪಡೆಯುವ ತಂಡ 14 ಅಂಕಗಳಿಸಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ. ಅಂದರೆ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯದಲ್ಲಿ ಗೆದ್ದರೆ ಕೆಕೆಆರ್ ಹಾಗೂ ಆರ್​ಆರ್​ ತಂಡಗಳು ಪ್ಲೇಆಫ್ ರೇಸ್​ನಿಂದ ಹೊರಬೀಳಲಿದೆ.

2 / 9
ಇದಾಗ್ಯೂ ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಇತರೆ 5 ತಂಡಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಆದರೆ ಈ ಪೈಪೋಟಿ ನಡುವೆ ಇದೀಗ ಸಿಎಸ್​ಕೆ, ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸಂಕಷ್ಟಕ್ಕೆ ಸಿಲುಕಿದೆ.

3 / 9
ಚೆನ್ನೈ, ಮುಂಬೈ ಹಾಗೂ ಲಕ್ನೋ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇಆಫ್ ಪ್ರವೇಶಿಸಬಹುದು. ಆದರೆ ಇಲ್ಲಿ 4ನೇ ಸ್ಥಾನ ಪಡೆಯುವ ತಂಡದೊಂದಿಗೆ ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿಗೆ ನೆಟ್​ ರನ್​ ರೇಟ್ ಪೈಪೋಟಿ ನೀಡುವ ಉತ್ತಮ ಅವಕಾಶವಿದೆ.

4 / 9
ಅಂದರೆ 15 ಅಂಕಗಳನ್ನು ಗಳಿಸಿರುವ ಸಿಎಸ್​ಕೆ ಹಾಗೂ ಲಕ್ನೋ ತಂಡಗಳು ಮುಂದಿನ ಪಂದ್ಯಗಳನ್ನು ಗೆದ್ದರೆ ಮಾತ್ರ 17 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಲಿದೆ. ಇತ್ತ ಮುಂಬೈ ಇಂಡಿಯನ್ಸ್ ಗೆದ್ದರೆ 16 ಅಂಕಗಳನ್ನು ಗಳಿಸಿ 4ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದು.

5 / 9
ಆದರೆ 12 ಅಂಕಗಳನ್ನು ಹೊಂದಿರುವ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಂದಿನ 2 ಪಂದ್ಯಗಳನ್ನು ಗೆದ್ದುಕೊಂಡರೆ 16 ಅಂಕಗಳೊಂದಿಗೆ ನೆಟ್​ ರನ್​ ರೇಟ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್​ಗೆ ಎಂಟ್ರಿ ಕೊಡುವ ಅವಕಾಶ ಹೊಂದಿದೆ.

6 / 9
ಹಾಗೆಯೇ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೆಕೆಆರ್ ವಿರುದ್ಧ ಹಾಗೂ ಸಿಎಸ್​ಕೆ ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋತರೆ ಪ್ಲೇಆಫ್ ರೇಸ್​ನಿಂದ ಹೊರಬೀಳುವ ಸಾಧ್ಯತೆಯಿದೆ. ಏಕೆಂದರೆ ಉಭಯ ತಂಡಗಳು 15 ಅಂಕಗಳನ್ನು ಮಾತ್ರ ಹೊಂದಿದ್ದು, ಇತ್ತ ಮುಂಬೈ ಇಂಡಿಯನ್ಸ್, ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್​ಗೆ 16 ಪಾಯಿಂಟ್ಸ್​ ಕಲೆಹಾಕುವ ಅವಕಾಶ ಇದೆ.

7 / 9
ಅಂದರೆ ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್​, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಅಂಕ ಪಟ್ಟಿಯಲ್ಲಿನ 3 ಸ್ಥಾನಗಳಿಗಾಗಿ ನೇರ ಪೈಪೋಟಿ ಏರ್ಪಟ್ಟಿದೆ.

8 / 9
ಹೀಗಾಗಿಯೇ ಈ ವಾರ ನಡೆಯಲಿರುವ ಈ ತಂಡಗಳ ಪಂದ್ಯಗಳು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಬಹುದು. ಈ ಹೋರಾಟದಲ್ಲಿ ಯಾರು ಗೆದ್ದು, ಯಾರು ಹೊರಬೀಳಲಿದ್ದಾರೆ ಎಂಬುದೇ ಈಗ ಕುತೂಹಲ.

9 / 9
Follow us