Updated on: Apr 23, 2023 | 7:53 PM
IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದರು. ಮೊದಲ ಎಸೆತದಲ್ಲೇ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದ ಕಿಂಗ್ ಕೊಹ್ಲಿ ಆ ಬಳಿಕ ಫೀಲ್ಡಿಂಗ್ ಮೂಲಕ ದಾಖಲೆ ಬರೆದಿದ್ದು ವಿಶೇಷ.
ಈ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಎಸೆತದಲ್ಲಿ ದೇವದತ್ ಪಡಿಕ್ಕಲ್ ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಆದರೆ ಬೌಂಡರಿ ಲೈನ್ನಲ್ಲಿ ಅತ್ಯುತ್ತವಾಗಿ ಕ್ಯಾಚ್ ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಹೌದು, ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ದ್ವಿತೀಯ ಸ್ಥಾನದಲ್ಲಿ ಕೀರನ್ ಪೊಲಾರ್ಡ್ ಇದ್ದರು.
ಅಂದರೆ ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. 204 ಇನಿಂಗ್ಸ್ಗಳಲ್ಲಿ ರೈನಾ ಒಟ್ಟು 109 ಕ್ಯಾಚ್ಗಳನ್ನು ಹಿಡಿದು ಇತಿಹಾಸ ನಿರ್ಮಿಸಿಟ್ಟಿದ್ದಾರೆ.
ಹಾಗೆಯೇ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕೀರನ್ ಪೊಲಾರ್ಡ್ ಇದ್ದು, ವಿಂಡೀಸ್ ಆಟಗಾರ 189 ಐಪಿಎಲ್ ಇನಿಂಗ್ಸ್ಗಳಲ್ಲಿ 103 ಕ್ಯಾಚ್ಗಳನ್ನು ಹಿಡಿದಿದ್ದಾರೆ.
ಇದೀಗ 233 ಇನಿಂಗ್ಸ್ಗಳಲ್ಲಿ 104 ಕ್ಯಾಚ್ಗಳನ್ನು ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
ವಿಶೇಷ ಎಂದರೆ ಈ ಮೂವರನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಫೀಲ್ಡರ್ ಐಪಿಎಲ್ನಲ್ಲಿ 100 ಕ್ಯಾಚ್ಗಳನ್ನು ಹಿಡಿದಿಲ್ಲ. ಹೀಗಾಗಿಯೇ ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ಕೀರನ್ ಪೊಲಾರ್ಡ್ರನ್ನು ಐಪಿಎಲ್ನ ಅತ್ಯುತ್ತಮ ಕ್ಷೇತ್ರರಕ್ಷಕರೆಂದು ಬಣ್ಣಿಸಲಾಗುತ್ತದೆ.