Updated on: May 03, 2023 | 10:20 PM
IPL 2023: ಐಪಿಎಲ್ನ 43ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ವಿರಾಟ್ ಕೊಹ್ಲಿಗೆ 1.07 ಕೋಟಿ ರೂ. ದಂಡ ವಿಧಿಸಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಗೌತಮ್ ಗಂಭೀರ್ ನಡುವೆ ವಾಕ್ಸಮರ ನಡೆದಿತ್ತು. ಈ ಅಹಿತಕರ ಘಟನೆಯ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಗಂಭೀರ್ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಲಾಗಿತ್ತು.
ಅದರಂತೆ ವಿರಾಟ್ ಕೊಹ್ಲಿ ತಮ್ಮ ಪಂದ್ಯದ ಶುಲ್ಕವಾದ 1.07 ಕೋಟಿ ರೂ. ದಂಡ ಪಾವತಿಸಿದ್ದರು. ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಈ ದಂಡ ಪಾವತಿ ಬೆನ್ನಲ್ಲೇ ಕಿಂಗ್ ಕೊಹ್ಲಿ 8.9 ಕೋಟಿ ರೂ. ಕೂಡ ಪಡೆದಿದ್ದಾರೆ.
ಅತ್ತ ಫೈನ್ ಕಟ್ಟುತ್ತಿದ್ದಂತೆ ಇತ್ತ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಗ್ರೇಟ್ ಲರ್ನಿಂಗ್ ಆಫೀಷಿಯಲ್ ಜಾಹೀರಾತಿನ ವಿಡಿಯೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಇನ್ಸ್ಟಾಗ್ರಾಮ್ನಲ್ಲಿ ವಿರಾಟ್ ಕೊಹ್ಲಿ ಒಂದು ಪೋಸ್ಟ್ಗೆ ಪಡೆಯುವ ಮೊತ್ತ ಬರೋಬ್ಬರಿ 8.9 ಕೋಟಿ ಎಂದು ಹೇಳಲಾಗಿದೆ.
ಅಂದರೆ ಒಂದೆಡೆ ಜಾಹೀರಾತಿನ ದುಡ್ಡು ಹಾಗೂ ಇನ್ನೊಂದೆಡೆ ಇನ್ಸ್ಟಾಗ್ರಾಮ್ ಪೋಸ್ಟ್ನ ಹಣವನ್ನು ವಿರಾಟ್ ಕೊಹ್ಲಿ ಜೇಬಿಗಿಳಿಸಿಕೊಂಡಿದ್ದಾರೆ. ಅಂದರೆ ಅತ್ತ 1.07 ಕೋಟಿ ರೂ. ದಂಡ ಕಟ್ಟುತ್ತಿದ್ದಂತೆ ಇತ್ತ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ 8.9 ಕೋಟಿ ರೂ. ಸಂಪಾದಿಸಿರುವುದು ವಿಶೇಷ.
Published On - 8:29 pm, Tue, 2 May 23