IPL 2023: ದೇವ್ದತ್ ಪಡಿಕ್ಕಲ್ನ ಆಡುವ ಬಳಗದಿಂದ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್..!
TV9 Web | Updated By: ಝಾಹಿರ್ ಯೂಸುಫ್
Updated on:
Apr 08, 2023 | 8:30 PM
Devdutt Padikkal IPL Stats: ಪಂಜಾಬ್ ಕಿಂಗ್ಸ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಯುವ ಬ್ಯಾಟರ್ ಧ್ರುವ್ ಜುರೇಲ್ ಕೇವಲ 15 ಎಸೆತಗಳಲ್ಲಿ 32 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.
1 / 9
IPL 2023: ಗುವಾಹಟಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 11ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ ಪರ ಸ್ಟಾರ್ ಆಟಗಾರ ದೇವ್ದತ್ ಪಡಿಕ್ಕಲ್ ಕಾಣಿಸಿಕೊಂಡಿರಲಿಲ್ಲ.
2 / 9
ಅಂದರೆ ರಾಜಸ್ಥಾನ್ ರಾಯಲ್ಸ್ ತಂಡವು ದೇವ್ದತ್ ಪಡಿಕ್ಕಲ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಟ್ಟಿದ್ದರು. ಈ ಬಗ್ಗೆ ಮಾತನಾಡಿದ ಆರ್ಆರ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕವನ್ನು ಬಲಪಡಿಸುವ ಸಲುವಾಗಿ ತಂಡದಲ್ಲಿ ಬದಲಾವಣೆ ತರಲಾಗಿದೆ ಎಂದು ತಿಳಿಸಿದ್ದಾರೆ.
3 / 9
ಇದಕ್ಕೆ ಮುಖ್ಯ ಕಾರಣ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಎಂದರೆ ತಪ್ಪಾಗಲಾರದು. ಏಕೆಂದರೆ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 5 ರನ್ಗಳಿಂದ ಸೋಲನುಭವಿಸಿತ್ತು. ಇದಕ್ಕೆ ಒಂದು ಕಾರಣ 5ನೇ ಕ್ರಮಾಂಕದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ದೇವ್ದತ್ ಪಡಿಕ್ಕಲ್.
4 / 9
ಪಡಿಕ್ಕಲ್ ಪಂಜಾಬ್ ಕಿಂಗ್ಸ್ ವಿರುದ್ಧ 26 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಕೇವಲ 21 ರನ್ಗಳಿಸಿದ್ದರು. ಈ ವೇಳೆ ಕೇವಲ 1 ಫೋರ್ ಮಾತ್ರ ಬಾರಿಸಿದ್ದರು. ಅತ್ತ 198 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಡಿಕ್ಕಲ್ ಅವರ ನಿಧಾನಗತಿಯ ಬ್ಯಾಟಿಂಗ್ ಮುಳುವಾಯಿತು.
5 / 9
ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಯುವ ಬ್ಯಾಟರ್ ಧ್ರುವ್ ಜುರೇಲ್ ಕೇವಲ 15 ಎಸೆತಗಳಲ್ಲಿ 32 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು.
6 / 9
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದೇವ್ದತ್ ಪಡಿಕ್ಕಲ್ ಅವರನ್ನು ತಂಡದಿಂದ ಕೈ ಬಿಟ್ಟು ಧ್ರುವ್ ಜುರೇಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಲಾಗಿದೆ. ಅತ್ತ ಸಿಕ್ಕ ಅವಕಾಶದಲ್ಲಿ ಧ್ರುವ್ 3 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 8 ರನ್ ಬಾರಿಸಿದ್ದಾರೆ.
7 / 9
ಅಂದಹಾಗೆ ಈ ಹಿಂದೆ ದೇವ್ದತ್ ಪಡಿಕ್ಕಲ್ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಓಪನರ್ ಆಗಿದ್ದ ವೇಳೆಯು ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿತ್ತು. ಇದಕ್ಕೆ ಸಾಕ್ಷಿಯೇ ಅವರ ಅಂಕಿ ಅಂಶಗಳು.
8 / 9
ಐಪಿಎಲ್ನಲ್ಲಿ 48 ಪಂದ್ಯಗಳನ್ನಾಡಿರುವ ದೇವ್ದತ್ ಪಡಿಕ್ಕಲ್ 1044 ಎಸೆತಗಳಲ್ಲಿ ಕಲೆಹಾಕಿರುವುದು ಕೇವಲ 1283 ರನ್ ಮಾತ್ರ. ಅಂದರೆ ಅವರ ಅವರೇಜ್ ಸ್ಕೋರ್ 27.3. ಇದಾಗ್ಯೂ ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ದೇವ್ದತ್ ಪಡಿಕ್ಕಲ್ಗೆ ಸತತ ಅವಕಾಶ ನೀಡಿತ್ತು.
9 / 9
ಈ ಬಾರಿ ಕೂಡ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ನೀಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 5 ಎಸೆತಗಳಲ್ಲಿ 2 ರನ್ ಗಳಿಸಿದರೆ, 2ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 26 ಎಸೆತಗಳಲ್ಲಿ ಕೇವಲ 21 ರನ್ ಕಲೆಹಾಕಿದ್ದಾರೆ. ಈ ಕಳಪೆ ಬ್ಯಾಟಿಂಗ್ ಪರಿಣಾಮ ಇದೀಗ ಪ್ಲೇಯಿಂಗ್ ಇಲೆವೆನ್ನಿಂದಲೇ ದೇವ್ದತ್ ಪಡಿಕ್ಕಲ್ ಹೊರಬಿದ್ದಿದ್ದಾರೆ.