Updated on: May 11, 2023 | 7:32 PM
IPL 2023: ಐಪಿಎಲ್ನ 16ನೇ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 6 ಸೋಲನುಭವಿಸಿರುವ ಆರ್ಸಿಬಿ ಇದೀಗ ಪ್ಲೇಆಫ್ ಪ್ರವೇಶದ ಲೆಕ್ಕಾಚಾರದಲ್ಲಿದೆ. ಮುಂದಿನ 3 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ RCB ಮುಂದಿದೆ.
ಆದರೆ ಇದಕ್ಕೂ ಮುನ್ನ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ 16 ಅಂಕಗಳನ್ನು ಮಾತ್ರ ಪಡೆಯಬೇಕು. ಒಂದು ವೇಳೆ ಅಗ್ರ ನಾಲ್ಕು ತಂಡಗಳು 16 ಕ್ಕಿಂತ ಹೆಚ್ಚಿನ ಅಂಕ ಪಡೆದ ಆರ್ಸಿಬಿ ತಂಡದ ಪ್ಲೇಆಫ್ ಆಸೆ ಅಂತ್ಯಗೊಳ್ಳಲಿದೆ.
ಇತ್ತ ಮುಂದಿನ ಮೂರು ಪಂದ್ಯಗಳಲ್ಲಿ ಆರ್ಸಿಬಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ತಂಡ ಮುಖ್ಯ ಕೋಚ್ ಸಂಜಯ್ ಬಂಗಾರ್. ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಬಂಗಾರ್, ಆರ್ಸಿಬಿ ಉಳಿದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸವಿದೆ. ಅಲ್ಲದೆ ಪ್ಲೇಆಫ್ ಪ್ರವೇಶಿಸುವ ನಂಬಿಕೆಯಿದೆ ಎಂದಿದ್ದಾರೆ.
ಇದೇ ವೇಳೆ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ಬಗ್ಗೆ ಕೂಡ ಸಂಜಯ್ ಬಂಗಾರ್ ಮಾತನಾಡಿದ್ದಾರೆ. ಯುವ ಆಟಗಾರರಿಂದ ಉತ್ತಮ ಪ್ರದರ್ಶನದ ನಿರೀಕ್ಷೆ ಮೇಲೆ ಕೊಂಚ ತಾಳ್ಮೆ ಇರಲಿ. ಅವರು ಕೂಡ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ.
ನೀವು ಕೆಕೆಆರ್ ತಂಡದ ರಿಂಕು ಸಿಂಗ್ ಅವರನ್ನೇ ತೆಗೆದುಕೊಳ್ಳಿ. ರಿಂಕು ಕಳೆದ 3-4 ವರ್ಷಗಳಿಂದ ಕೆಕೆಆರ್ ತಂಡದಲ್ಲಿದ್ದಾರೆ. ಕೆಕೆಆರ್ ತಂಡ ಯುವ ಆಟಗಾರನಿಗೆ ನೀಡಿದ ಸಮಯವಕಾಶದಿಂದಾಗಿ ನೀಡಿದ ಈಗ ಫಲ ಸಿಕ್ಕಿದೆ. ಈ ಸೀಸನ್ನಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಇದೇ ರೀತಿ ಆರ್ಸಿಬಿ ಆಟಗಾರರ ಮೇಲೂ ಕೊಂಚ ತಾಳ್ಮೆ ಇರಲಿ. ನಮ್ಮ ಆಟಗಾರರು ಕೂಡ ಅಬ್ಬರಿಸಲಿದ್ದಾರೆ ಎಂದು ಆರ್ಸಿಬಿ ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ತಿಳಿಸಿದ್ದಾರೆ.
ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್ಸಿಬಿ, ಮುಂದಿನ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಪಡೆಯಲಿದೆ. ಆದರೆ ಅದಕ್ಕೂ ಮುನ್ನ ಇತರೆ ತಂಡಗಳ ಫಲಿತಾಂಶಗಳು ಕೂಡ ಆರ್ಸಿಬಿ ತಂಡದ ಪ್ಲೇಆಫ್ ಹಾದಿಯನ್ನು ನಿರ್ಧರಿಸಲಿದೆ.