- Kannada News Photo gallery Cricket photos IPL 2023 Most Wickets Nine Indian bowlers in the list of top 10 bowlers with most wickets
IPL 2023: ಒಬ್ಬ ಮಾತ್ರ ವಿದೇಶಿ ಪ್ಲೇಯರ್; ಈ ಐಪಿಎಲ್ನಲ್ಲಿ ಭಾರತೀಯ ಬೌಲರ್ಗಳದ್ದೇ ಪಾರುಪತ್ಯ..!
IPL 2023 Most Wickets: ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ನಲ್ಲಿರುವ ಟಾಪ್ 10 ಬೌಲರ್ಗಳಲ್ಲಿ ಬರೋಬ್ಬರಿ 9 ಬೌಲರ್ಗಳು ಭಾರತೀಯರೇ ಆಗಿದ್ದಾರೆ.
Updated on: May 11, 2023 | 3:55 PM

16ನೇ ಆವೃತ್ತಿಯ ಐಪಿಎಲ್ನಲ್ಲಿ ಇದುವರೆಗೆ 55 ಪಂದ್ಯಗಳು ಮುಗಿದಿದ್ದು, ಇವರೆಗಿನ ಪಂದ್ಯಗಳಲ್ಲಿ ಭಾರತೀಯ ಬೌಲರ್ಗಳೇ ತಮ್ಮ ಪಾರುಪತ್ಯ ಮೆರೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ನಲ್ಲಿರುವ ಟಾಪ್ 10 ಬೌಲರ್ಗಳಲ್ಲಿ ಬರೋಬ್ಬರಿ 9 ಬೌಲರ್ಗಳು ಭಾರತೀಯರೇ ಆಗಿದ್ದಾರೆ. ಹಾಗಿದ್ದರೆ ಯಾವ ಬೌಲರ್ ಎಷ್ಟು ವಿಕೆಟ್ಗಳೊಂದಿಗೆ ಎಷ್ಟನೇ ಸ್ಥಾನದಲ್ಲಿದ್ದಾರೆ ಎಂಬುದನ್ನು ನೋಡುವುದಾದರೆ...

ಮೊದಲ ಸ್ಥಾನದಲ್ಲಿ ಮೊಹಮ್ಮದ್ ಶಮಿ ಇದ್ದು, ಇಲ್ಲಿಯವರೆಗೆ 19 ವಿಕೆಟ್ ಪಡೆದಿರುವ ಶಮಿ 7.23ರ ಎಕಾನಮಿಯೊಂದಿಗೆ ರನ್ ಬಿಟ್ಟುಕೊಟ್ಟಿದ್ದಾರೆ.

ಗುಜರಾತ್ನ ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದು, 19 ವಿಕೆಟ್ ಪಡೆದಿರುವ ರಶೀದ್ 8.09ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

3ನೇ ಸ್ಥಾನದಲ್ಲಿರುವ ಚೆನ್ನೈನ ತುಷಾರ್ ದೇಶಪಾಂಡೆ ಕೂಡ 19 ವಿಕೆಟ್ ಪಡೆದಿದ್ದು, 10.01ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

ಮುಂಬೈ ಪರ ಆಡುತ್ತಿರುವ ಪಿಯೂಷ್ ಚಾವ್ಲಾ 17 ವಿಕೆಟ್ ಪಡೆದಿದ್ದು, 7.46 ರ ಎಕಾನಮಿಯಲ್ಲಿ ರನ್ ನೀಡಿ 4ನೇ ಸ್ಥಾನದಲ್ಲಿದ್ದಾರೆ.

ಕೆಕೆಆರ್ನ ವರುಣ್ ಚಕ್ರವರ್ತಿ ಕೂಡ 17 ವಿಕೆಟ್ ಉರುಳಿಸಿದ್ದು, 7.84ರ ಎಕಾನಮಿಯಲ್ಲಿ ರನ್ ನೀಡಿ 5ನೇ ಸ್ಥಾನದಲ್ಲಿದ್ದಾರೆ.

ರಾಜಸ್ಥಾನ್ ಬೌಲರ್ ಯುಜ್ವೇಂದ್ರ ಚಹಲ್ ಖಾತೆಗೂ 17 ವಿಕೆಟ್ ಸೇರಿದ್ದು, 6ನೇ ಸ್ಥಾನದಲ್ಲಿರುವ ಚಹಲ್ 8.08ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

7ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ 16 ವಿಕೆಟ್ ಪಡೆದಿದ್ದು, 7.13 ಎಕಾನಮಿಯಲ್ಲಿ ರನ್ ನೀಡಿದ್ದಾರೆ.

ಪಂಜಾಬ್ನ ಅರ್ಷದೀಪ್ ಸಿಂಗ್ ಕೂಡ 16 ವಿಕೆಟ್ ಪಡೆದಿದ್ದು, 8 ನೇ ಸ್ಥಾನದಲ್ಲಿದ್ದರೆ, 9.79 ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ.

ಇನ್ನು ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ 15 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದಾರೆ.

10ನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ 14 ವಿಕೆಟ್ ಪಡೆದಿದ್ದಾರೆ.
























