IPL 2023: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸೋಲು ಕಂಡ ಆಟಗಾರ ಯಾರು ಗೊತ್ತಾ?
IPL 2023 Kannada: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸೋಲು ಕಂಡಂತಹ ಆಟಗಾರರ ಪಟ್ಟಿ ಇಲ್ಲಿದೆ...
Updated on: May 12, 2023 | 7:22 PM

ಈ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿಯುವ ಕೆಲ ಆಟಗಾರರು ಈವರೆಗೂ ನೂರಕ್ಕೂ ಅಧಿಕ ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿದ್ದಾರೆ. ಅಂದರೆ ಕಳೆದ 15 ಸೀಸನ್ಗಳಲ್ಲಿ ಅತೀ ಹೆಚ್ಚು ಸೋಲು ಕಂಡು ಆಟಗಾರರು ಮುಂದಿನ ಪಂದ್ಯಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹಾಗಿದ್ರೆ 16 ಐಪಿಎಲ್ ಸೀಸನ್ಗಳ ಮೂಲಕ ಅತೀ ಹೆಚ್ಚು ಸೋಲು ಕಂಡಂತಹ ತಂಡಗಳ ಭಾಗವಾದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ...

1- ವಿರಾಟ್ ಕೊಹ್ಲಿ: ಕಳೆದ 16 ಸೀಸನ್ಗಳಿಂದ ಆರ್ಸಿಬಿ ಪರ 234 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಒಟ್ಟು 116 ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿದ್ದಾರೆ. ಅಂದರೆ ಐಪಿಎಲ್ನಲ್ಲಿ ಅತೀ ಹೆಚ್ಚು ಸೋಲು ಕಂಡಂತಹ ಆಟಗಾರ ವಿರಾಟ್ ಕೊಹ್ಲಿ.

2- ದಿನೇಶ್ ಕಾರ್ತಿಕ್: ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಲಯನ್ಸ್, ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ಪರ ಒಟ್ಟು 240 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ ಒಟ್ಟು 114 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

3- ರೋಹಿತ್ ಶರ್ಮಾ: ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿರುವ ರೋಹಿತ್ ಶರ್ಮಾ 238 ಪಂದ್ಯಗಳಲ್ಲಿ 107 ಮ್ಯಾಚ್ನಲ್ಲಿ ಸೋಲು ಕಂಡಿದ್ದಾರೆ.

4- ರಾಬಿನ್ ಉತ್ತಪ್ಪ: ಸಿಎಸ್ಕೆ, ಕೆಕೆಆರ್, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್, ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 205 ಪಂದ್ಯಗಳನ್ನಾಡಿರುವ ರಾಬಿನ್ ಉತ್ತಪ್ಪ ಒಟ್ಟು 106 ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

5- ಶಿಖರ್ ಧವನ್: ಡೆಲ್ಲಿ ಕ್ಯಾಪಿಟಲ್ಸ್, ಎಸ್ಆರ್ಹೆಚ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ 214 ಪಂದ್ಯಗಳನ್ನು ಆಡಿರುವ ಶಿಖರ್ ಧವನ್ 102 ಮ್ಯಾಚ್ನಲ್ಲಿ ಸೋಲು ಕಂಡಿದ್ದಾರೆ.

6- ಎಂಎಸ್ ಧೋನಿ: ಸಿಎಸ್ಕೆ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಪರ ಆಡಿರುವ ಧೋನಿ 246 ಪಂದ್ಯಗಳಲ್ಲಿ 102 ಪಂದ್ಯಗಳಲ್ಲಿ ಸೋತ ತಂಡ ಭಾಗವಾಗಿದ್ದಾರೆ.



















