IPL 2024: ಸ್ಟಾರ್ಕ್ ಟು ಜೋಸೆಫ್; ಕೋಟಿ ಸಂಭಾವನೆ ಪಡೆದ ಈ 10 ಆಟಗಾರರ ಪ್ರದರ್ಶನ ಹೇಗಿತ್ತು?
IPL 2024: ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನೊಂದಿಗೆ ಐಪಿಎಲ್ 17ನೇ ಸೀಸನ್ ಅಂತ್ಯಗೊಂಡಿದೆ. ಆದರೆ ಈ ಸೀಸನ್ ಆರಂಭಕ್ಕೂ ಮುನ್ನ ನಡೆದಿದ್ದ ಮಿನಿ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ರೇಸಿಗೆ ಬಿದ್ದವರಂತೆ ಕೆಲವು ಆಟಗಾರರ ಮೇಲೆ ಕೋಟಿ ಕೋಟಿ ಸುರಿದ ತಂಡಕ್ಕೆ ಸೇರಿಸಿಕೊಂಡಿದ್ದರು. ಅದರಲ್ಲಿ ಪ್ರಮುಖವಾಗಿ 10 ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದರ ವಿವರ ಇಲ್ಲಿದೆ.
1 / 11
ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನೊಂದಿಗೆ ಐಪಿಎಲ್ 17ನೇ ಸೀಸನ್ ಅಂತ್ಯಗೊಂಡಿದೆ. ಆದರೆ ಈ ಸೀಸನ್ ಆರಂಭಕ್ಕೂ ಮುನ್ನ ನಡೆದಿದ್ದ ಮಿನಿ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ರೇಸಿಗೆ ಬಿದ್ದವರಂತೆ ಕೆಲವು ಆಟಗಾರರ ಮೇಲೆ ಕೋಟಿ ಕೋಟಿ ಸುರಿದ ತಂಡಕ್ಕೆ ಸೇರಿಸಿಕೊಂಡಿದ್ದರು. ಅದರಲ್ಲಿ ಪ್ರಮುಖವಾಗಿ 10 ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದರ ವಿವರ ಇಲ್ಲಿದೆ.
2 / 11
ಮಿಚೆಲ್ ಸ್ಟಾರ್ಕ್: ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024 ಹರಾಜಿನಲ್ಲಿ ಆಸ್ಟ್ರೇಲಿಯಾದ ಮಾರಕ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು 24.75 ಕೋಟಿ ರೂ.ಗೆ ಖರೀದಿಸಿತ್ತು. ಈ ಸೀಸನ್ ಆರಂಭದಲ್ಲಿ ಸ್ಟಾರ್ಕ್ ತುಂಬಾ ದುಬಾರಿಯಾಗಿದ್ದರು. ಆದಾಗ್ಯೂ ನಿರ್ಣಾಯಕ ಪಂದ್ಯಗಳಲ್ಲಿ ತಮ್ಮ ಅನುಭವವನ್ನು ಧಾರೆ ಎರೆದ ಸ್ಟಾರ್ಕ್ ಕೆಕೆಆರ್ ಪರ 14 ಪಂದ್ಯಗಳಲ್ಲಿ ಸ್ಟಾರ್ಕ್ 17 ವಿಕೆಟ್ ಕಬಳಿಸಿ ತಾವು ಪಡೆದ ಹಣಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದರು.
3 / 11
ಪ್ಯಾಟ್ ಕಮ್ಮಿನ್ಸ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ಯಾಟ್ ಕಮಿನ್ಸ್ ಅವರನ್ನು 20.75 ಕೋಟಿ ರೂ.ಗೆ ಖರೀದಿಸಿ ನಾಯಕತ್ವದ ಜವಬ್ದಾರಿ ನೀಡಿತ್ತು. ತಾವು ಪಡೆದ ಬೆಲೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ ಕಮ್ಮಿನ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ದರು. ಅಲ್ಲದೆ ಬೌಲಿಂಗ್‌ನಲ್ಲಿ 18 ವಿಕೆಟ್ಗಳನ್ನು ಪಡೆದರು.
4 / 11
ಡ್ಯಾರಿಲ್ ಮಿಚೆಲ್: ಚೆನ್ನೈ ಸೂಪರ್ ಕಿಂಗ್ಸ್ 14 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವ್ಯಯಿಸಿ ಡೇರಿಲ್ ಮಿಚೆಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಈ ಸೀಸನ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ 142.60 ಸ್ಟ್ರೈಕ್ ರೇಟ್‌ನಲ್ಲಿ 318 ರನ್ ಬಾರಿಸಿದರು. ಇದರಲ್ಲಿ 2 ಅರ್ಧಶತಕಗಳು ಸೇರಿದ್ದವು.
5 / 11
ಹರ್ಷಲ್ ಪಟೇಲ್: ಪಂಜಾಬ್ ಕಿಂಗ್ಸ್, ಹರ್ಷಲ್ ಪಟೇಲ್ರನ್ನು 11.75 ಕೋಟಿ ರೂ.ಗೆ ಖರೀದಿಸಿತ್ತು. ಹರ್ಷಲ್ ಕೂಡ ತಮ್ಮ ಬೆಲೆಗೆ ನ್ಯಾಯ ಸಲ್ಲಿಸಿದ್ದು, 24 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಕೂಡ ಗೆದ್ದರು.
6 / 11
ಅಲ್ಜಾರಿ ಜೋಸೆಫ್: ಕೆರಿಬಿಯನ್ ಆಟಗಾರ ಅಲ್ಜಾರಿ ಜೋಸೆಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 11.5 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ವ್ಯಯಿಸಿ ಖರೀದಿಸಿತ್ತು. ಆದರೆ, ಜೋಸೆಫ್ ತಾವು ಪಡೆದ ಬೆಲೆಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಈ ಸೀಸನ್‌ನಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದ ಅವರು ಕೇವಲ ಒಂದು ವಿಕೆಟ್ ಮಾತ್ರ ಪಡೆದರು.
7 / 11
ಸ್ಪೆನ್ಸರ್ ಜಾನ್ಸನ್: ಐಪಿಎಲ್ 2024 ರ ಹರಾಜಿನಲ್ಲಿ, ಗುಜರಾತ್ ಟೈಟಾನ್ಸ್ ಈ ಆಸ್ಟ್ರೇಲಿಯಾದ ಬೌಲರ್‌ಗಾಗಿ 10 ಕೋಟಿ ರೂ. ವ್ಯಯಿಸಿತ್ತು. ಆದರೆ ನಿರಸ ಪ್ರದರ್ಶನ ನೀಡಿದ ಸ್ಪೆನ್ಸರ್ ಜಾನ್ಸನ್ ಕೇವಲ ನಾಲ್ಕು ವಿಕೆಟ್ ಪಡೆಯಲ್ಲಷ್ಟೇ ಶಕ್ತರಾದರು.
8 / 11
ಸಮೀರ್ ರಿಜ್ವಿ: ಚೆನ್ನೈ ಸೂಪರ್ ಕಿಂಗ್ಸ್ 8.4 ಕೋಟಿ ರೂ.ಗೆ ಅನ್ ಕ್ಯಾಪ್ಡ್ ಸಮೀರ್ ರಿಜ್ವಿಯನ್ನು ಖರೀದಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತು. ಆದರೆ, ತಂಡದ ಮ್ಯಾನೇಜ್‌ಮೆಂಟ್‌ನ ಈ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿಯಾಗಲಿಲ್ಲ. ಆಡಿದ ಎಂಟು ಪಂದ್ಯಗಳಲ್ಲಿ ಅವರು ಕೇವಲ 51 ರನ್ ಮಾತ್ರ ಕಲೆಹಾಕಿದರು.
9 / 11
ರಿಲೆ ರೂಸೋ: 8 ಕೋಟಿ ರೂಗಳಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡಿದ್ದ ರಿಲೆ ರೂಸೋ, ತಮ್ಮ ಬೆಲೆಗೆ ನ್ಯಾಉ ಒದಗಿಸಿದರು. ಎಂಟು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ಅವರು 181.90 ಸ್ಟ್ರೈಕ್ ರೇಟ್‌ನಲ್ಲಿ 211 ರನ್ ಗಳಿಸಿದರು.
10 / 11
ಶಾರುಖ್ ಖಾನ್: ಶಾರುಖ್ ಖಾನ್ ಅವರನ್ನು ಐಪಿಎಲ್ 2024 ರ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವು 7.4 ಕೋಟಿ ರೂ. ನೀಡಿ ಖರೀದಿಸಿತ್ತು. ಆದಾಗ್ಯೂ, ಈ ಸೀಸನ್‌ನಲ್ಲಿ ಏಳು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ಅವರು ಕೇವಲ 127 ರನ್ ಬಾರಿಸಲಷ್ಟೇ ಶಕ್ತರಾದರು.
11 / 11
ರೋವ್‌ಮನ್ ಪೊವೆಲ್: ರಾಜಸ್ಥಾನ್ ರಾಯಲ್ಸ್ ಕೆರಿಬಿಯನ್ ಬ್ಯಾಟ್ಸ್‌ಮನ್ ರೋವ್‌ಮನ್ ಪೊವೆಲ್ ಅವರನ್ನು 7.4 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ, ತಂಡದ ಮ್ಯಾನೇಜ್‌ಮೆಂಟ್‌ನ ಲೆಕ್ಕಾಚಾರಕ್ಕೆ ತಕ್ಕಂತೆ ಆಡುವಲ್ಲಿ ಪೊವೆಲ್ ವಿಫಲರಾದರು. ಆಡಿದ ಒಂಬತ್ತು ಪಂದ್ಯಗಳಲ್ಲಿ ಪೊವೆಲ್ ಕೇವಲ 103 ರನ್ ಬಾರಿಸಿದರು.