IPL 2024: ಐದಕ್ಕೆ ಐದು ಗೆಲುವು; ತವರಿನ ಲಾಭ ಪಡೆದ 5 ತಂಡಗಳು

|

Updated on: Mar 25, 2024 | 4:37 PM

IPL 2024: 17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಈಗಾಗಲೇ ಲೀಗ್​ನಲ್ಲಿ ಐದು ಪಂದ್ಯಗಳು ನಡೆದಿದ್ದು, ಈ ಐದೂ ಪಂದ್ಯಗಳು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಆಡಿದ ಐದು ಪಂದ್ಯಗಳಲ್ಲಿ ತವರು ತಂಡಗಳೇ ಗೆಲುವು ಸಾಧಿಸಿರುವುದು ಪ್ರವಾಸಿ ತಂಡದ ಅಭಿಮಾನಿಗಳಿಗೆ ಕೊಂಚ ನಿರಾಸೆಯನ್ನುಂಟು ಮಾಡಿದೆ.

1 / 8
17ನೇ ಆವೃತ್ತಿಯ ಐಪಿಎಲ್​ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಈಗಾಗಲೇ ಲೀಗ್​ನಲ್ಲಿ ಐದು ಪಂದ್ಯಗಳು ನಡೆದಿದ್ದು, ಈ ಐದೂ ಪಂದ್ಯಗಳು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಆಡಿದ ಐದು ಪಂದ್ಯಗಳಲ್ಲಿ ತವರು ತಂಡಗಳೇ ಗೆಲುವು ಸಾಧಿಸಿರುವುದು ಪ್ರವಾಸಿ ತಂಡದ ಅಭಿಮಾನಿಗಳಿಗೆ ಕೊಂಚ ನಿರಾಸೆಯನ್ನುಂಟು ಮಾಡಿದೆ.

2 / 8
ವಾಸ್ತವವಾಗಿ ಐಪಿಎಲ್​ನಲ್ಲಿ ಇದುವರೆಗೆ ಆಡಿರುವ ಐದೂ ಪಂದ್ಯಗಳಲ್ಲಿ ಆತಿಥೇಯ ತಂಡವೇ ಗೆಲುವು ಸಾಧಿಸಿದೆ. ಅಲ್ಲದೆ ಗುರಿ ಬೆನ್ನಟ್ಟಿದ ತಂಡಗಳಿಗಿಂತ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೆ ಹೆಚ್ಚು ಗೆಲುವು ಸಾಧಿಸಿವೆ. ಅದರ ಸಂಪೂರ್ಣ ಅಂಕಿಅಂಶಗಳು ಹೀಗಿವೆ.

3 / 8
ಲೀಗ್​ನ ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆದಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 176 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಸಿಎಸ್​ಕೆ ತವರಿನ ಲಾಭ ಪಡೆದು 6 ವಿಕೆಟ್​ಗಳಿಂದ ಗೆದ್ದುಬೀಗಿತ್ತು.

4 / 8
ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 174 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆತಿಥೇಯ ಪಂಜಾಬ್ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.

5 / 8
ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವೆ ನಡೆದ ಮೂರನೇ ಪಂದ್ಯದಲ್ಲೂ ಆತಿಥೇಯ ಕೋಲ್ಕತ್ತಾ, ಪ್ರವಾಸಿ ಹೈದರಾಬಾದ್ ತಂಡವನ್ನು 4 ರನ್​ಗಳಿಂದ ಮಣಿಸಿತು.

6 / 8
ನಾಲ್ಕನೇ ಪಂದ್ಯದಲ್ಲೂ ತವರು ತಂಡವೇ ಗೆಲುವು ಸಾಧಿಸಿತು. ರಾಜಸ್ಥಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಆತಿಥೇಯ ರಾಜಸ್ಥಾನ ತಂಡ 20 ರನ್​ಗಳ ಗೆಲುವು ದಾಖಲಿಸಿತು.

7 / 8
ನಿನ್ನೆ ಅಹಮದಾಬಾದ್​ನಲ್ಲಿ ನಡೆದ ಐಪಿಎಲ್ ಐದನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್​ಗಳಿಂದ ಮಣಿಸಿ ತವರು ನೆಲದ ಲಾಭ ಪಡೆದುಕೊಂಡಿದೆ.

8 / 8
ಇನ್ನು ಇಂದಿನ ಪಂದ್ಯದಲ್ಲಿ ಆರ್​ಸಿಬಿ ತನ್ನ ತವರು ನೆಲದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಈ ಹಿಂದಿನ ಐದು ಪಂದ್ಯಗಳ ಫಲಿತಾಂಶದಂತೆ ಇಂದಿನ ಪಂದ್ಯದ ಫಲಿತಾಂಶವೂ ತವರು ತಂಡದ ಪರ ವಾಲುತ್ತಾ ಎಂಬುದನ್ನು ಕಾದುನೋಡಬೇಕಿದೆ.

Published On - 4:35 pm, Mon, 25 March 24