ಐಪಿಎಲ್ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ಆ ಪ್ರಕಾರ 17ನೇ ಆವೃತ್ತಿಯ ಪೂರ್ಣ ವೇಳಾಪಟ್ಟಿ ಹೊರಬಿದ್ದಂತ್ತಾಗಿದೆ. ಇನ್ನು ಮೊದಲಾರ್ಧದಲ್ಲಿ ಆರ್ಸಿಬಿಯ ಮೊದಲ ಐದು ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿತ್ತು. ಇದೀಗ ಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ.
ಅದರಂತೆ ಆರ್ಸಿಬಿ ಲೀಗ್ನ ಮೊದಲ ಪಂದ್ಯವನ್ನು ಈಗಾಗಲೇ ಆಡಿ ಮುಗಿಸಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ಮನು ಎದುರಿಸಿದ್ದ ಆರ್ಸಿಬಿ 6 ವಿಕೆಟ್ಗಳ ಸೋಲುಕಂಡಿತ್ತು. ಈ ಪಂದ್ಯ ಚೆನ್ನೈ ಎಂ ಚಿದಂಬರಂ ಮೈದಾನದಲ್ಲಿ ನಡೆದಿತ್ತು.
ಇದೀಗ ಆರ್ಸಿಬಿಯ ಎರಡನೇ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಇಂದು ಅಂದರೆ ಮಾರ್ಚ್ 25 ರಂದು ಆರ್ಸಿಬಿಯ ತವರು ನೆಲವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಮೂರನೇ ಪಂದ್ಯವನ್ನು ಆರ್ಸಿಬಿ ಮಾರ್ಚ್ 29 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಇದೇ ಬೆಂಗಳೂರಿನಲ್ಲಿ ಆಡಲಿದೆ. ಈ ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ.
ಆ ನಂತರ ಏಪ್ರಿಲ್ 2 ರಂದು ತನ್ನ ನಾಲ್ಕನೇ ಪಂದ್ಯವನ್ನು ಆಡಲಿರುವ ಆರ್ಸಿಬಿ, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತನ್ನ ತವರು ಮೈದಾನದಲ್ಲೇ ಎದುರಿಸಲಿದೆ. ಈ ಪಂದ್ಯ ಕೂಡ ಸಂಜೆ 7:30 ಕ್ಕೆ ಆರಂಭವಾಗಲಿದೆ.
ಐದನೇ ಪಂದ್ಯವನ್ನು ಏಪ್ರಿಲ್ 6 ರಂದು ಆಡಲಿರುವ ಆರ್ಸಿಬಿ, ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅವರ ನೆಲದಲ್ಲಿ ಅಂದರೆ ಜೈಪುರದಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಸಂಜೆ 7:30 ಕ್ಕೆ ಆರಂಭವಾಗಲಿದೆ.
ಏಪ್ರಿಲ್ 11 ರಂದು ತನ್ನ ಆರನೇ ಪಂದ್ಯವನ್ನು ಆಡಲಿರುವ ಆರ್ಸಿಬಿ, ಈ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮುಂಬೈನಲ್ಲಿ ಎದುರಿಸಲಿದೆ. ಈ ಪಂದ್ಯ ಕೂಡ ಸಂಜೆ 7:30 ಕ್ಕೆ ಆರಂಭವಾಗಲಿದೆ.
ಏಪ್ರಿಲ್ 15 ರಂದು ಆರ್ಸಿಬಿ ಹಾಗೂ ಸನ್ರೈಸರ್ಸ್ ನಡುವೆ ಏಳನೇ ಪಂದ್ಯ ನಡೆಯಲ್ಲಿದೆ. ಈ ಪಂದ್ಯಕ್ಕೆ ಮತ್ತೆ ಬೆಂಗಳೂರು ಆತಿಥ್ಯವಹಿಸುತ್ತಿದ್ದು, ಸಂಜೆ 7:30 ಕ್ಕೆ ಪಂದ್ಯ ಆರಂಭವಾಗಲಿದೆ.
ಆ ನಂತರ ಏಪ್ರಿಲ್ 21 ರಂದು ತನ್ನ ಎಂಟನೇ ಪಂದ್ಯವನ್ನು ಆಡಲಿರುವ ಆರ್ಸಿಬಿ, ಈ ಪಂದ್ಯದಲ್ಲಿ ಎರಡನೇ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅವರ ನೆಲದಲ್ಲಿ ಅಂದರೆ ಕೋಲ್ಕತ್ತಾದಲ್ಲಿ ಮಧ್ಯಾಹ್ನ 3:30 ಕ್ಕೆ ಎದುರಿಸಲಿದೆ.
ಏಪ್ರಿಲ್ 25 ರಂದು ನಡೆಯಲ್ಲಿರುವ ತನ್ನ ಒಂಬತ್ತನೇ ಪಂದ್ಯದಲ್ಲಿ ಮತ್ತೊಮ್ಮೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಆರ್ಸಿಬಿ ಅವರ ನೆಲದಲ್ಲಿ ಅಂದರೆ ಹೈದರಾಬಾದ್ನಲ್ಲಿ ಸಂಜೆ 7:30 ಕ್ಕೆ ಎದುರಿಸಲಿದೆ.
ಏಪ್ರಿಲ್ 28 ರಂದು ನಡೆಯಲ್ಲಿರುವ ತನ್ನ 10ನೇ ಪಂದ್ಯದಲ್ಲಿ ಆರ್ಸಿಬಿ, ಕಳೆದ ಬಾರಿಯ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ತಂಡವನ್ನು ಅಹಮದಾಬಾದ್ನಲ್ಲಿ ಎದುರಿಸಲಿದೆ. ಈ ಪಂದ್ಯ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ.
ಆರ್ಸಿಬಿಯ 11ನೇ ಪಂದ್ಯ ಮತ್ತೆ ಇದೇ ಗುಜರಾತ್ ಟೈಟಾನ್ಸ್ ವಿರುದ್ಧ ಮೇ 4 ರಂದು ಬೆಂಗಳೂರಿನಲ್ಲಿ ನಡೆಯಲ್ಲಿದೆ. ಈ ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ.
ತನ್ನ 12ನೇ ಪಂದ್ಯವನ್ನು ಮೇ 9 ರಂದು ಆಡಲಿರುವ ಆರ್ಸಿಬಿ, ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ ತಂಡವನ್ನು ಧರ್ಮಶಾಲಾದಲ್ಲಿ ಸಂಜೆ 7:30 ಕ್ಕೆ ಎದುರಿಸಲಿದೆ.
ಆರ್ಸಿಬಿಯ 13ನೇ ಪಂದ್ಯ ಮೇ 12 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲ್ಲಿದ್ದು, ಈ ಪಂದ್ಯಕ್ಕೆ ಬೆಂಗಳೂರು ಆತಿಥ್ಯವಹಿಸುತ್ತಿದೆ. ಈ ಪಂದ್ಯ ಕೂಡ ಸಂಜೆ 7:30 ಕ್ಕೆ ಆರಂಭವಾಗಲಿದೆ.
ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಉದ್ಘಾಟನಾ ಪಂದ್ಯದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಮೇ 18 ರಂದು ಬೆಂಗಳೂರಿನಲ್ಲಿ ನಡೆಯಲ್ಲಿದೆ. ಈ ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ.
Published On - 8:40 pm, Mon, 25 March 24