IPL 2024: ಅರ್ಧಕ್ಕಿಂತ ಹೆಚ್ಚು ತಂಡಗಳ ನಾಯಕರ ಬದಲಾವಣೆ

Updated on: Mar 21, 2024 | 8:07 PM

IPL 2024: ಐಪಿಎಲ್ ಆರಂಭಕ್ಕೂ ಮೊದಲು ಈ ಲೀಗ್​ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ನಾಯಕನನ್ನು ಬದಲಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕನನ್ನು ಬದಲಿಸಿದ ಆರನೇ ತಂಡ ಎನಿಸಿಕೊಂಡಿದೆ.

1 / 7
ಐಪಿಎಲ್ ಆರಂಭಕ್ಕೂ ಮೊದಲು ಈ ಲೀಗ್​ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ನಾಯಕನನ್ನು ಬದಲಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕನನ್ನು ಬದಲಿಸಿದ ಆರನೇ ತಂಡ ಎನಿಸಿಕೊಂಡಿದೆ.

ಐಪಿಎಲ್ ಆರಂಭಕ್ಕೂ ಮೊದಲು ಈ ಲೀಗ್​ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ನಾಯಕನನ್ನು ಬದಲಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ತಂಡದ ನಾಯಕನನ್ನು ಬದಲಿಸಿದ ಆರನೇ ತಂಡ ಎನಿಸಿಕೊಂಡಿದೆ.

2 / 7

ಚೆನ್ನೈ ಸೂಪರ್ ಕಿಂಗ್ಸ್​ಗೂ ಮೊದಲು ಮುಂಬೈ ಇಂಡಿಯನ್ಸ್ , ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗಳು ಕೂಡ ತಮ್ಮ ತಂಡದ ನಾಯಕರನ್ನು ಬದಲಿಸಿವೆ.

3 / 7

ಮುಂಬೈ ಇಂಡಿಯನ್ಸ್: 17 ನೇ ಆವೃತ್ತಿಗೂ ಮೊದಲು ತಂಡದ ನಾಯಕನನ್ನು ಬದಲಿಸಿದ ಮೊದಲ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ದುಬೈನಲ್ಲಿ ನಡೆದ ಮಿನಿ ಹರಾಜಿನ ನಂತರ ಹಾರ್ದಿಕ್ ಪಾಂಡ್ಯರನ್ನು ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಂಡ ಮುಂಬೈ, ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಅಂದೇ ನಾಯಕತ್ವವನ್ನು ಹಸ್ತಾಂತರಿಸಿತು.

4 / 7

ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರಿಕೊಂಡ ನಂತರ ಗುಜರಾತ್ ಟೈಟಾನ್ಸ್ ಫ್ರಾಂಚೈಸ್ ತನ್ನ ತಂಡದ ನಾಯಕತ್ವವನ್ನು ಯುವ ಆರಂಭಿಕ ಆಟಗಾರ ಶುಭ್​ಮನ್​ ಗಿಲ್​ಗೆ ಹಸ್ತಾಂತರಿಸಿತು.

5 / 7

ಸನ್ ರೈಸರ್ಸ್ ಹೈದರಾಬಾದ್: ಮಿನಿ ಹರಾಜಿನಲ್ಲಿ ಬರೋಬ್ಬರಿ 20.50 ಕೋಟಿ ನೀಡಿ ಖರೀದಿಸಿದ್ದ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ತಂಡದ ನೂತನ ನಾಯಕನಾಗಿ ನೇಮಿಸಿತು. ಕಮಿನ್ಸ್​ಗೂ ಮೊದಲು ಈ ತಂಡದ ನಾಯಕತ್ವ ಐಡೆನ್ ಮಾರ್ಕ್ರಾಮ್ ಕೈನಲ್ಲಿತ್ತು.

6 / 7

ದೆಹಲಿ ಕ್ಯಾಪಿಟಲ್ಸ್: 2022 ರ ಅಂತ್ಯದಲ್ಲಿ ರಸ್ತೆ ಅಪಘಾತಕ್ಕೀಡಾಗಿ ಕ್ರಿಕೆಟ್​ನಿಂದ ದೂರ ಉಳಿದಿದ್ದ ರಿಷಬ್ ಪಂತ್ ಇದೀಗ ಚೇತರಿಸಿಕೊಂಡು ಮತ್ತೆ ಐಪಿಎಲ್ ಅಖಾಡಕ್ಕಿಳಿದಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ಕಳೆದ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ತಂಡದ ನಾಯಕತ್ವ ನಿರ್ವಹಿಸಿದ್ದರು. ಆದರೀಗ ಪಂತ್ ವಾಪಸ್ಸಾತಿಯಿಂದಾಗಿ ವಾರ್ನರ್ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

7 / 7

ಕೋಲ್ಕತ್ತಾ ನೈಟ್ ರೈಡರ್ಸ್: ಗಾಯದ ಸಮಸ್ಯೆಯಿಂದಾಗಿ ಶ್ರೇಯಸ್ ಅಯ್ಯರ್ ಕಳೆದ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡವನ್ನು ಮುನ್ನಡೆಸಿದ್ದರು. ರಾಣಾ ನಾಯಕತ್ವದಲ್ಲಿ ತಂಡದ ಪ್ರದರ್ಶನವು ಸರಾಸರಿಯಾಗಿತ್ತು. ತಂಡವು ಆಡಿದ 14 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮತ್ತೊಮ್ಮೆ ಕೆಕೆಆರ್ ತಂಡವನ್ನು ಸೇರಿಕೊಂಡಿರುವ ಶ್ರೇಯಸ್ ಅಯ್ಯರ್​ಗೆ ನಾಯಕತ್ವ ಹಸ್ತಾಂತರಿಸಲಾಗಿದೆ.

Loading...
Unable to load recommendations.
Follow Us