Ruturaj Gaikwad: ಧೋನಿ ಬದಲು ನಾಯಕನಾದ ಬೆನ್ನಲ್ಲೇ ರುತುರಾಜ್ ಗಾಯಕ್ವಾಡ್ ಮೊದಲ ಪ್ರತಿಕ್ರಿಯೆ: ಏನು ಹೇಳಿದ್ರು ನೋಡಿ

Ruturaj Gaikwad New Captain CSK, IPL 2024: ಐಪಿಎಲ್ 2024 ನಾಯಕರ ಅಧಿಕೃತ ಫೋಟೋಶೂಟ್ ನಂತರ ರುತುರಾಜ್ ಗಾಯಕ್ವಾಡ್ ಅವರನ್ನು ನಾಯಕನನ್ನಾಗಿ ನೇಮಿಸುವ ನಿರ್ಧಾರವನ್ನು ಸಿಎಸ್​ಕೆ ಘೋಷಿಸಿತು. ಇದೀಗ ಗಾಯಕ್ವಾಡ್ ಕ್ಯಾಪ್ಟನ್ ಹುದ್ದೆಗೆ ನೇಮಕಗೊಂಡ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ.

Vinay Bhat
|

Updated on: Mar 22, 2024 | 7:36 AM

ಐಪಿಎಲ್ 2024 ರಲ್ಲಿ ರುತುರಾಜ್ ಗಾಯಕ್ವಾಡ್ ಅವರ ಹೊಸ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧದ ನಡೆಯಲಿರುವ ಆರಂಭಿಕ ಪಂದ್ಯಕ್ಕೆ ಒಂದು ದಿನ ಇರುವಾಗ 27 ವರ್ಷದ ಬಲಗೈ ಆರಂಭಿಕ ಬ್ಯಾಟರ್ ಸಿಎಸ್‌ಕೆ ನಾಯಕರಾಗಿ ನೇಮಕಗೊಂಡರು.

1 / 5
ಧೋನಿ ಮತ್ತೊಮ್ಮೆ ಸಿಎಸ್‌ಕೆಯನ್ನು ಮುನ್ನಡೆಸುತ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ, ದಿಢೀರ್ ಆಗಿ ಬಂದ ಈ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತು. ಆದರೆ, ನಾಯಕತ್ವ ತ್ಯಜಿಸಲು ಧೋನಿ ನಿರ್ಧರಿಸಿದ್ದು ಇದೇ ಮೊದಲಲ್ಲ. ಐಪಿಎಲ್ 2022 ಪ್ರಾರಂಭವಾಗುವ ಮೊದಲು, ಧೋನಿ ಸಿಎಸ್‌ಕೆ ನಾಯಕತ್ವವನ್ನು ತೊರೆದು ರವೀಂದ್ರ ಜಡೇಜಾಗೆ ವರ್ಗಾಯಿಸಿದರು. ಆದರೆ, ಇದು ಹಿನ್ನಡೆಯಾಯಿತು ಮತ್ತು ಎಂಟು ಪಂದ್ಯಗಳ ನಂತರ, ಧೋನಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡರು.

2 / 5
ಐಪಿಎಲ್ 2024 ನಾಯಕರ ಅಧಿಕೃತ ಫೋಟೋಶೂಟ್ ನಂತರ ಗಾಯಕ್ವಾಡ್ ಅವರನ್ನು ನಾಯಕನನ್ನಾಗಿ ನೇಮಿಸುವ ನಿರ್ಧಾರವನ್ನು ಸಿಎಸ್​ಕೆ ಘೋಷಿಸಿತು. ಇದೀಗ ಗಾಯಕ್ವಾಡ್ ಕ್ಯಾಪ್ಟನ್ ಹುದ್ದೆಗೆ ನೇಮಕಗೊಂಡ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ''ಖುಷಿ ಆಗುತ್ತಿದೆ. ನಿಸ್ಸಂಶಯವಾಗಿ ಇದೊಂದು ದೊಡ್ಡ ಜವಾಬ್ದಾರಿ ಎಂದು ರುತುರಾಜ್ ಹೇಳಿದ್ದಾರೆ.

3 / 5
''ನಾನು ಈ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ. ಪ್ರತಿಯೊಬ್ಬರೂ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ, ಆದ್ದರಿಂದ ನನಗೆ ಮಾಡಲು ಹೆಚ್ಚು ಕೆಲಸ ಇರುವುದಿಲ್ಲ. ಜೊತೆಗೆ, ನನ್ನ ತಂಡದಲ್ಲಿ ಮಾಹಿ ಭಾಯ್, ಜಡ್ಡು ಮತ್ತು ಅಜಿಂಕ್ಯ ರಹಾನೆ ಇದ್ದಾರೆ. ಅವರು ನನಗೆ ಮಾರ್ಗದರ್ಶನ ನೀಡುವ ಅತ್ಯುತ್ತಮ ನಾಯಕರಾಗಿದ್ದಾರೆ, ಆದ್ದರಿಂದ ಹೆಚ್ಚು ಚಿಂತಿಸಬೇಕಾಗಿಲ್ಲ, ಆನಂದಿಸಲು ಎದುರು ನೋಡುತ್ತಿದ್ದೇನೆ, ”ಎಂಬುದು ಗಾಯಕ್ವಾಡ್ ಮಾತು.

4 / 5
2019 ರ ಐಪಿಎಲ್​ನಲ್ಲಿ ಸಿಎಸ್​ಕೆ ಸೇರಿಕೊಂಡ ಗಾಯಕ್ವಾಡ್, 2020 ರಲ್ಲಿ ಚೆನ್ನೈ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದರು. ಅವರು 2021 ರಲ್ಲಿ ಪ್ರಮುಖ ರನ್ ಗಳಿಸಿದ ಆಟಗಾರನಾದರು. ಧೋನಿ ನೇತೃತ್ವದ ತಂಡವು ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು. ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಸಿಎಸ್‌ಕೆ ಉಳಿಸಿಕೊಂಡ ನಾಲ್ಕು ಆಟಗಾರರಲ್ಲಿ ಇವರು ಒಬ್ಬರಾಗಿದ್ದರು.

5 / 5
Follow us
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ

ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್

ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ