RCB vs CSK, IPL 2024: ಇಂದು ಆರ್​ಸಿಬಿ ಪರ ಮಿಂಚು ಹರಿಸಲಿದ್ದಾರೆ ಈ 4 ಆಟಗಾರರು

Royal Challengers Bengaluru (RCB): ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಗೆ ಇಂದು ಚಾಲನೆ ಸಿಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ-ಆರ್​ಸಿಬಿ ಮುಖಾಮುಖಿ ಆಗಲಿದೆ. ಹಾಗಾದರೆ, ಇಂದು ಆರ್​ಸಿಬಿ ಪರ ಮಿಂಚು ಹರಿಸಲಿರುವ ಆಟಗಾರರು ಯಾರು ನೋಡೋಣ.

Vinay Bhat
|

Updated on: Mar 22, 2024 | 10:28 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂದು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಅಭಿಯಾನವನ್ನು ಪ್ರಾರಂಭಿಸಲಿದೆ. ಹಾಲಿ ಚಾಂಪಿಯನ್ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್  ವಿರುದ್ಧ ಚೆಪಾಕ್‌ನಲ್ಲಿ ಹೈವೋಲ್ಟೇಜ್ ಮ್ಯಾಚ್ ಆಯೋಜಿಸಲಾಗಿದೆ.

1 / 6
ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಸುಯಶ್ ಪ್ರಭುದೇಸಾಯಿ ಮುಂತಾದ ದೇಶೀಯ ಆಟಗಾರರೊಂದಿಗೆ ಆರ್​ಸಿಬಿ ಸಮತೋಲದಿಂದ ಕೂಡಿದೆ. ಅಲ್ಜಾರಿ ಜೋಸೆಫ್ ಮತ್ತು ಲಾಕಿ ಫರ್ಗುಸನ್‌ ಪ್ರಮುಖ ವಿದೇಶಿ ವೇಗಿಗಳಾಗಿದ್ದಾರೆ. ಇಂದು ಆರ್​ಸಿಬಿಯ ಕೆಲ ಆಟಗಾರರು ಮಿಂಚುವ ಸಾಧ್ಯತೆ ಇದೆ ಅವರು ಯಾರು ನೋಡೋಣ.

2 / 6
ರಜತ್ ಪಾಟಿದಾರ್: ರಜತ್ ಪಾಟಿದಾರ್ 2022 ರಲ್ಲಿ RCB ಜೊತೆಗೆ 40.40 ರ ಸರಾಸರಿಯಲ್ಲಿ ಎಂಟು ಪಂದ್ಯಗಳಲ್ಲಿ 333 ರನ್ ಮತ್ತು 152.75 ರ ಸ್ಟ್ರೈಕ್ ರೇಟ್ ಜೊತೆಗೆ 1 ಶತಕ ಮತ್ತು ಎರಡು ಅರ್ಧಶತಕ ಸಿಡಿಸಿದ್ದರು. ಗಾಯದ ಕಾರಣ ಅವರು 2023 ರ ಋತುವಿನಿಂದ ಹೊರಗುಳಿದಿದ್ದರು. ಅತ್ಯುತ್ತಮ ಟಿ20 ದಾಖಲೆಯನ್ನು ಹೊಂದಿರುವ ಇವರ ಮೇಲೆ ಇಂದು ಸಾಕಷ್ಟು ನಿರೀಕ್ಷೆಯಿದೆ.

3 / 6
ಕ್ಯಾಮರೂನ್ ಗ್ರೀನ್ : RCB ಯ ಹೊಸ ಆಟಗಾರ, ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಆಲ್-ರೌಂಡ್ ಸಾಮರ್ಥ್ಯದಿಂದ ಗುರುತಿಸಿರುವ ಕ್ಯಾಮರೂನ್ ಗ್ರೀನ್ ಯಾವುದೇ ಸ್ಥಾನದಲ್ಲಿ ಬ್ಯಾಟ್ ಮಾಡಬಹುದು. ಇವರು 50.22 ರ ಸರಾಸರಿಯಲ್ಲಿ 452 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 160.28 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

4 / 6
ಆಕಾಶ್ ದೀಪ್ : ಆಕಾಶ್ ದೀಪ್ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ತಮ್ಮ ಆರಂಭಿಕ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳೊಂದಿಗೆ ಇಂಗ್ಲಿಷ್ ಅಗ್ರ ಕ್ರಮಾಂಕವನ್ನು ಪುಡಿಮಾಡಿದರು. ಕೊಂಚ ಅನುಭವ ಹೊಂದಿರುವ ಇವರು ಇಂದು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ.

5 / 6
ಗ್ಲೆನ್ ಮ್ಯಾಕ್ಸ್‌ವೆಲ್ : ಗ್ಲೆನ್ ಮ್ಯಾಕ್ಸ್‌ವೆಲ್ ಮೈದಾನದಲ್ಲಿ ಎಲ್ಲಾ ಮೂರು ವಿಭಾಗಗಳಲ್ಲಿ ತಂಡಕ್ಕೆ ಕೊಡುಗೆ ನೀಡುವ ಆಟಗಾರ. ಸ್ಫೋಟಕ ಹಿಟ್ಟರ್, ಹ್ಯಾಂಡಿ ಆಫ್ ಸ್ಪಿನ್ನರ್, ಗನ್ ಫೀಲ್ಡರ್ ಮತ್ತು ಮ್ಯಾಚ್ ವಿನ್ನರ್ ಕೂಡ ಹೌದು. ODI ವಿಶ್ವಕಪ್ 2023 ರಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಮ್ಯಾಕ್ಸಿ, ಅದೇ ಫಾರ್ಮ್ ಅನ್ನು ಐಪಿಎಲ್ 2024 ರಲ್ಲಿ ಮುಂದುವರೆಸುವ ನಿರೀಕ್ಷೆಯಿದೆ.

6 / 6
Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್