IPL 2024: ಮುಂಬೈ ಪಾಳಯದಲ್ಲಿ ಸೋಲಿನ ಭಯ ಹುಟ್ಟಿಸಿದ್ದ ಅಶುತೋಷ್ ಯಾರು ಗೊತ್ತಾ?

Updated on: Apr 19, 2024 | 3:57 PM

IPL 2024: ಪಂಜಾಬ್ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆಶುತೋಷ್ ಶರ್ಮಾ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್​ಗಳ ಮಾರಕ ದಾಳಿಗೆ ತಕ್ಕ ಉತ್ತರ ನೀಡಿದ ಆಶುತೋಷ್, ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು.

1 / 10
ಪಂಜಾಬ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ 33ನೇ ಪಂದ್ಯದಲ್ಲಿ ಆತಿಥೇಯ ತಂಡ 9 ರನ್​ಗಳಿಂದ ಸೋಲೊಪ್ಪಿಕೊಂಡಿತು. ಆದರೂ ಮುಂಬೈ ವಿರುದ್ಧ ಗೆಲುವಿಗಾಗಿ ಪಂಜಾಬ್ ನೀಡಿದ ಹೋರಾಟ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಚೊಚ್ಚಲ ಐಪಿಎಲ್ ಆಡುತ್ತಿರುವ ಅಶುತೋಷ್ ಶರ್ಮಾ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮುಂಬೈ ಪಾಳಯದಲ್ಲಿ ಸೋಲಿನ ಭಯ ಹುಟ್ಟಿಸಿತ್ತು.

ಪಂಜಾಬ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ 33ನೇ ಪಂದ್ಯದಲ್ಲಿ ಆತಿಥೇಯ ತಂಡ 9 ರನ್​ಗಳಿಂದ ಸೋಲೊಪ್ಪಿಕೊಂಡಿತು. ಆದರೂ ಮುಂಬೈ ವಿರುದ್ಧ ಗೆಲುವಿಗಾಗಿ ಪಂಜಾಬ್ ನೀಡಿದ ಹೋರಾಟ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಚೊಚ್ಚಲ ಐಪಿಎಲ್ ಆಡುತ್ತಿರುವ ಅಶುತೋಷ್ ಶರ್ಮಾ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮುಂಬೈ ಪಾಳಯದಲ್ಲಿ ಸೋಲಿನ ಭಯ ಹುಟ್ಟಿಸಿತ್ತು.

2 / 10

ಪಂದ್ಯದಲ್ಲಿ ಮುಂಬೈ ನೀಡಿದ್ದ 192 ರನ್​ಗಳ ಗುರಿ ಬೆನ್ನಟ್ಟಿದ್ದ ಪಂಜಾಬ್ ಕೇವಲ 14 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಉಳಿದ ಎರಡು ವಿಕೆಟ್​ಗಳು ಕೂಡ 77 ರನ್​ಗಳ ವೇಳೆಗೆ ಪತನಗೊಂಡಿದ್ದವು.

3 / 10

ಆದರೆ ಪಂಜಾಬ್ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆಶುತೋಷ್ ಶರ್ಮಾ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್​ಗಳ ಮಾರಕ ದಾಳಿಗೆ ತಕ್ಕ ಉತ್ತರ ನೀಡಿದ ಆಶುತೋಷ್, ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು.

4 / 10

ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್​ಗೆ ಹೆಚ್ಚು ಒತ್ತು ನೀಡಿದ ಅಶುತೋಷ್ ಶರ್ಮಾ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಂದೆಡೆ ವಿಕೆಟ್​ಗಳ ಪತನದ ನಡುವೆಯೂ ಪಂಜಾಬ್ ಗೆಲುವಿಗಾಗಿ ಏಕಾಂಗಿ ಹೋರಾಟ ನೀಡಿದ ಆಶುತೋಷ್, ಅಂತಿಮವಾಗಿ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ ಬರೋಬ್ಬರಿ 7 ಸಿಕ್ಸರ್ ಸಹಿತ 61 ರನ್ ಕಲೆಹಾಕಿದರು.

5 / 10

10ನೇ ಓವರ್​ನಲ್ಲಿ ಜಿತೇಶ್ ಶರ್ಮಾ ಔಟಾದ ಬಳಿಕ ಕ್ರೀಸ್​ಗೆ ಬಂದ ಅಶುತೋಷ್ ಶರ್ಮಾ, ತಾನು ಎದುರಿಸಿದ ತನ್ನ ಎರಡನೇ ಎಸೆತದಲ್ಲಿ ಆಕಾಶ್ ಮಧ್ವಲ್ ಎಸೆತದಲ್ಲಿ ಫೈನ್ ಲೆಗ್ ಮೇಲೆ ಸಿಕ್ಸರ್ ಬಾರಿಸಿದರು. ಇದಾದ ನಂತರ ಅಶುತೋಷ್ ಪ್ರತಿ ಓವರ್‌ನಲ್ಲಿ ಸಿಕ್ಸರ್ ಅಥವಾ ಬೌಂಡರಿ ಬಾರಿಸಿದರು.

6 / 10

ಹೀಗಾಗಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಒಂದು ಹಂತದಲ್ಲಿ ಮುಂಬೈ ಸುಲಭವಾಗಿ ಪಂದ್ಯವನ್ನು ಗೆದ್ದುಕೊಳ್ಳುತ್ತದೆ ಎಂದು ತೊರುತ್ತಿತ್ತು. ಆದರೆ ಬಾಲಂಗೋಚಿಗಳ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದ ಅಶುತೋಷ್ ಶರ್ಮಾ ಮುಂಬೈ ಪಾಳಯಕ್ಕೆ ಸೋಲಿನ ಭಯ ಹುಟ್ಟಿಸಿದ್ದರು.

7 / 10

ಆದರೆ ಈ ಗೆಲುವಿನ ಹೋರಾಟದಲ್ಲಿ ಅಶುತೋಷ್ ಶರ್ಮಾಗೆ ಕೊನೆಗೂ ಯಶ ಸಿಗಲಿಲ್ಲ. ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸುವ ಉದ್ದೇಶದಲ್ಲಿ 18ನೇ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಅಶುತೋಷ್ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಅಶುತೋಷ್ ವಿಕೆಟ್ ಪತನವಾದ ಬಳಿಕವಷ್ಟೇ ಮುಂಬೈ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿದ್ದು.

8 / 10

ಅಷ್ಟಕ್ಕೂ ಪಂಜಾಬ್ ಪರ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್​ಗಳನ್ನು ಆಡಿರುವ ಅಶುತೋಷ್ ಶರ್ಮಾ ಯಾರು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅಶುತೋಷ್ ಶರ್ಮಾ ಅಪ್ಪಟ್ಟ ದೇಸಿ ಪ್ರತಿಭೆ. ಈ ಬಾರಿಯ ಮಿನಿ ಹರಾಜಿನಲ್ಲಿ ಕೇವಲ 20 ಲಕ್ಷ ರೂ ಮೂಲ ಬೆಲೆಗೆ ಅಶುತೋಷ್​ರನ್ನು ಪಂಜಾಬ್ ಕಿಂಗ್ಸ್ ಖರೀದಿಸಿತ್ತು.

9 / 10

ಹೀಗಾಗಿ ಇದು ಅಶುತೋಷ್ ಅವರ ಮೊದಲ ಐಪಿಎಲ್ ಸೀಸನ್. ಇದಕ್ಕು ಮೊದಲು ಅವರು ರೈಲ್ವೇಸ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿದ್ದು, ಕಳೆದ ವರ್ಷವಷ್ಟೇ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದರು. ಆ ನಂತರ ಅವರ ಹೆಸರು ಎಲ್ಲೆಡೆ ಪ್ರಸಿದ್ಧವಾಯಿತು.

10 / 10

ಈಗ ಐಪಿಎಲ್‌ನಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ಅಶುತೋಷ್ ಈ ಸೀಸನ್​ನಲ್ಲಿ ಒಟ್ಟು 13 ಸಿಕ್ಸರ್‌ಗಳ ಸಹಿತ 156 ರನ್ ಬಾರಿಸಿದ್ದಾರೆ, ಅವರ ಸ್ಟ್ರೈಕ್ ರೇಟ್ ಕೂಡ 200 ಕ್ಕಿಂತ ಹೆಚ್ಚಿದೆ. ಅಶುತೋಷ್ ಇದೇ ರೀತಿ ಆಟ ಮುಂದುವರಿಸಿದರೆ ಶೀಘ್ರದಲ್ಲೇ ಈ ಆಟಗಾರ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Loading...
Unable to load recommendations.
Follow Us