IPL 2024 Auction: ಹೇಗಿರಲಿದೆ ಐಪಿಎಲ್ ಮಿನಿ ಹರಾಜು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

IPL 2024 Auction: ಈ ಬಾರಿಯ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 333 ಆಟಗಾರರಲ್ಲಿ 214 ಭಾರತೀಯ ಆಟಗಾರರಿದ್ದರೆ, 119 ವಿದೇಶಿ ಆಟಗಾರರಿದ್ದಾರೆ. ಆದರೆ ಖಾಲಿ ಇರುವ ಸ್ಲಾಟ್​ಗಳು ಕೇವಲ 77 ಮಾತ್ರ. ಹೀಗಾಗಿ 256 ಆಟಗಾರರು ಅವಕಾಶ ವಂಚಿತರಾಗಲಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 18, 2023 | 9:56 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ 17ನೇ ಆವೃತ್ತಿಯ ಆಟಗಾರರ ಹರಾಜಿಗೆ ವೇದಿಕೆ ಸಿದ್ಧವಾಗಿದೆ. ನಾಳೆ (ಡಿ.19) ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ಸಿಗಲಿದೆ.

1 / 9
ಅಂದರೆ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ- RCB ತಂಡವು ಈ ಬಾರಿ 19 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಉಳಿದಿರುವುದು ಕೇವಲ 6 ಸ್ಥಾನಗಳು ಮಾತ್ರ. ಹೀಗಾಗಿ RCB ತಂಡಕ್ಕೆ 6 ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಲಿದೆ.

2 / 9
ಇಲ್ಲಿ ಪ್ರತಿ ತಂಡಗಳಲ್ಲೂ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್ ನಿಯಮದ ಪ್ರಕಾರ 1 ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಒಂದು ವೇಳೆ ಕೆಲ ತಂಡಗಳು ತನ್ನೆಲ್ಲಾ ಹರಾಜು ಮೊತ್ತವನ್ನು ವ್ಯಯಿಸಿ ಒಟ್ಟು 22 ಅಥವಾ 23 ಆಟಗಾರರನ್ನು ಮಾತ್ರ ಖರೀದಿಸಿದರೆ, 77 ಆಟಗಾರರಿಗೆ ಅವಕಾಶ ಸಿಗುವುದು ಕೂಡ ಅನುಮಾನ. ಉದಾಹರಣೆಗೆ...

3 / 9
ಉದಾಹರಣೆಗೆ 2021 ರ ಸೀಸನ್​ ಹರಾಜಿನಲ್ಲಿ ಆರ್​ಸಿಬಿ ತಂಡವು ತನ್ನೆಲ್ಲಾ ಮೊತ್ತ ವ್ಯಯಿಸಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಮೂವರು ಆಟಗಾರರು ಅವಕಾಶ ವಂಚಿತರಾಗಿದ್ದರು. ಅಂದರೆ ಇಲ್ಲಿ ಒಂದು ತಂಡದಲ್ಲಿ 18 ಕ್ಕಿಂತ ಕಡಿಮೆ ಆಟಗಾರರನ್ನು ಹೊಂದುವಂತಿಲ್ಲ. ಹಾಗೆಯೇ 25 ಆಟಗಾರರನ್ನು ಖರೀದಿಸುವುದು ಕೂಡ ಕಡ್ಡಾಯವಲ್ಲ.

4 / 9
ಹೀಗಾಗಿ 18 ಆಟಗಾರರನ್ನು ಖರೀದಿಸಿದ ಬಳಿಕ ಆಯಾ ಫ್ರಾಂಚೈಸಿಗಳು ತಮಗೆ ಬೇಕಿರುವ ಆಟಗಾರರಿಗೆ ಮಾತ್ರ ಬಿಡ್ ಮಾಡಬಹುದು. ಈ ಬಾರಿ ಕೆಲ ತಂಡಗಳ ಹರಾಜು ಮೊತ್ತ ಕಡಿಮೆ ಇರುವುದರಿಂದ ಎಲ್ಲಾ ತಂಡಗಳು 25 ಆಟಗಾರರಿಗೆ ಮಣೆಹಾಕುವುದು ಕೂಡ ಡೌಟ್ ಎನ್ನಬಹುದು.

5 / 9
ಇನ್ನು ಈ ಬಾರಿ ಹರಾಜಿಗಾಗಿ ಒಟ್ಟು 19 ಸೆಟ್​ಗಳನ್ನು ರೂಪಿಸಲಾಗಿದೆ. ಇದರಲ್ಲಿ ಮೊದಲ ಸುತ್ತಿನಲ್ಲಿ 5 ಸೆಟ್​ಗಳ ಆಟಗಾರರಿಗಾಗಿ ಹರಾಜು ನಡೆಯಲಿದೆ. ಅಂದರೆ ಸ್ಟಾರ್ ಬ್ಯಾಟ್ಸ್​ಮನ್, ಸ್ಟಾರ್ ಆಲ್​ರೌಂಡರ್ಸ್​, ಸ್ಟಾರ್ ಬೌಲರ್ಸ್​ ಹಾಗೂ ವಿಕೆಟ್​ ಕೀಪರ್​ಗಳನ್ನು ಒಳಗೊಂಡಂತೆ ಐದು ಸೆಟ್​ಗಳನ್ನಾಗಿ ವಿಂಗಡಿಸಲಾಗಿದೆ. ಈ ಆಟಗಾರರ ಹರಾಜು ಮುಗಿದ ಬಳಿಕವಷ್ಟೇ ಉಳಿದ ಪ್ಲೇಯರ್ಸ್​ ಬಿಡ್ಡಿಂಗ್ ನಡೆಯಲಿದೆ.

6 / 9
ಈ ಬಾರಿಯ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 333 ಆಟಗಾರರಲ್ಲಿ 214 ಭಾರತೀಯ ಆಟಗಾರರಿದ್ದರೆ, 119 ವಿದೇಶಿ ಆಟಗಾರರಿದ್ದಾರೆ. ಆದರೆ ಖಾಲಿ ಇರುವ ಸ್ಲಾಟ್​ಗಳು ಕೇವಲ 77 ಮಾತ್ರ. ಹೀಗಾಗಿ 256 ಆಟಗಾರರು ಅವಕಾಶ ವಂಚಿತರಾಗಲಿರುವುದು ಖಚಿತ ಎನ್ನಬಹುದು.

7 / 9
ಯಾವ ತಂಡದ ಬಳಿ ಎಷ್ಟು ಹರಾಜು ಮೊತ್ತವಿದೆ?: RCB-(23.25 ಕೋಟಿ ರೂ.), CSK-(31.4 ಕೋಟಿ ರೂ.), MI-(17.25 ಕೋಟಿ ರೂ.), GT-(38.15 ಕೋಟಿ ರೂ.), LSG-(13.15 ಕೋಟಿ ರೂ.), KKR-(32.7 ಕೋಟಿ ರೂ.), RR-(14.5 ಕೋಟಿ ರೂ.), DC-(28.9 ಕೋಟಿ ರೂ.), PBKS-(29.1 ಕೋಟಿ ರೂ.), SRH- (34 ಕೋಟಿ ರೂ.).

8 / 9
ಅಂದಹಾಗೆ ಐಪಿಎಲ್ ಸೀಸನ್ 17 ಮಿನಿ ಹರಾಜು ಮಂಗಳವಾರ (ಡಿಸೆಂಬರ್ 19) ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಜಿಯೋ ಸಿನೆಮಾ ಆ್ಯಪ್​ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.

9 / 9
Follow us