IPL 2024 Auction: 19 ವರ್ಷದ ಯುವ ವಿಕೆಟ್ ಕೀಪರ್ಗೆ ಬರೋಬ್ಬರಿ 7.20 ಕೋಟಿ ರೂ.
TV9 Web | Updated By: ಝಾಹಿರ್ ಯೂಸುಫ್
Updated on:
Dec 19, 2023 | 7:16 PM
IPL 2024 Auction: ಕುಮಾರ್ ಕುಶ್ರಾಗ್ರ ದೇಶೀಯ ಅಂಗಳದಲ್ಲಿ ಹೊಸ ಭರವಸೆ ಮೂಡಿಸಿರುವ ಆಟಗಾರ. ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅತ್ಯುತ್ತಮ ವಿಕೆಟ್ ಕೀಪಿಂಗ್ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲರು. ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿ 37 ಎಸೆತಗಳಲ್ಲಿ 67 ರನ್ ಚಚ್ಚಿದ್ದರು.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ಹರಾಜಿನ ಮೂಲಕ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಮಾರ್ ಕುಶಾಗ್ರ ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಕುಮಾರ್ ಕೇವಲ 20 ಲಕ್ಷ ರೂ. ಮೂಲಬೆಲೆ ಘೋಷಿಸಿದ್ದರು.
2 / 6
ಅದರಂತೆ ಆಕ್ಷನ್ನಲ್ಲಿ ಕಾಣಿಸಿಕೊಂಡಿದ್ದ ಕುಮಾರ್ ಕುಶಾಗ್ರ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳು ಮುಂದಾಗಿದ್ದವು. ಇದರಿಂದ ಯುವ ಆಟಗಾರ ಮೌಲ್ಯವು ವೃದ್ಧಿಸಿದೆ.
3 / 6
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೋಟಿ ಮೊತ್ತದೊಂದಿಗೆ ಸಾಗುತ್ತಿದ್ದರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಭರ್ಜರಿ ಪೈಪೋಟಿ ನೀಡಿತು. ಇದರಿಂದ ಕುಮಾರ್ ಕುಶಾಗ್ರ ಅವರ ಮೊತ್ತವು ಬಹುಬೇಗನೆ 5 ಕೋಟಿ ರೂ. ದಾಟಿದೆ.
4 / 6
ಇದಾಗ್ಯೂ ಸಿಎಸ್ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪೈಪೋಟಿ ಮುಂದುವರೆದಿತ್ತು. ಆದರೆ ಅಂತಿಮವಾಗಿ 7.20 ಕೋಟಿ ರೂ. ನೀಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜಾರ್ಖಂಡ್ನ ಯುವ ವಿಕೆಟ್ ಕೀಪರ್ ಕುಮಾರ್ ಕುಶಾಗ್ರ ಅವರನ್ನು ಖರೀದಿಸಿದೆ.
5 / 6
ಕುಮಾರ್ ಕುಶ್ರಾಗ್ರ ದೇಶೀಯ ಅಂಗಳದಲ್ಲಿ ಹೊಸ ಭರವಸೆ ಮೂಡಿಸಿರುವ ಆಟಗಾರ. ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅತ್ಯುತ್ತಮ ವಿಕೆಟ್ ಕೀಪಿಂಗ್ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲರು. ಇತ್ತೀಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿ 37 ಎಸೆತಗಳಲ್ಲಿ 67 ರನ್ ಚಚ್ಚಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಕುಮಾರ್ ಕುಶಾಗ್ರ ಖರೀದಿಗೆ ಸಿಎಸ್ಕೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೆಚ್ಚಿನ ಆಸಕ್ತಿ ಹೊಂದಿತ್ತು. ಅಂತಿಮವಾಗಿ 7.20 ಕೋಟಿ ರೂ. ಕುಮಾರ್ ಕುಶಾಗ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
6 / 6
ಡೆಲ್ಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಮುಕೇಶ್ ಕುಮಾರ್, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಕುಮಾರ್ ಕುಶಾಗ್ರ
Published On - 7:16 pm, Tue, 19 December 23