IPL 2024: ಲೀಗ್ನಿಂದ ಹೊರಬಿದ್ದ ಸಿಎಸ್ಕೆ ಆರಂಭಿಕ ಬ್ಯಾಟರ್! ಬದಲಿಯಾಗಿ ಬಂದ ಬೌಲರ್
IPL 2024: ಐಪಿಎಲ್ ಆರಂಭಕ್ಕೂ ಮೊದಲು ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಡೆವೊನ್ ಕಾನ್ವೇ, ದ್ವಿತೀಯಾರ್ಧದ ಐಪಿಎಲ್ ವೇಳೆಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಅವರು ಸಂಪೂರ್ಣ ಆವೃತ್ತಿಯಿಂದ ಹೊರಬಿದ್ದಿದ್ದು, ಅವರ ಬದಲಿಯಾಗಿ ಸಿಎಸ್ಕೆ, ಇಂಗ್ಲೆಂಡ್ನ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
1 / 7
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ ಇಂಜುರಿಯಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಇಡೀ ಲೀಗ್ನಿಂದಲೇ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.
2 / 7
ಡೆವೊನ್ ಕಾನ್ವೇ ಐಪಿಎಲ್ ಆರಂಭಕ್ಕೂ ಮೊದಲು ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು, ಅದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರಚಿಕಿತ್ಸೆಯ ನಂತರ, ಅವರು ಕೆಲವು ವಾರಗಳ ಕಾಲ ಕ್ರಿಕೆಟ್‌ನಿಂದ ದೂರವಿರಬೇಕಾಗುತ್ತದೆ ಎಂದು ತಿಳಿದುಬಂದಿತ್ತು. ಹೀಗಾಗಿ ಅವರು ಐಪಿಎಲ್ 2024 ರ ಮೊದಲಾರ್ಧದಲ್ಲಿ ಸಹ ಆಡಲು ಸಾಧ್ಯವಿಲ್ಲ ಎಂದು ವರದಿಯಾಗಿತ್ತು.
3 / 7
ಆ ಬಳಿಕ ಈ ಕಿವೀಸ್ ಬ್ಯಾಟರ್ ದ್ವಿತೀಯಾರ್ಧದ ಐಪಿಎಲ್ ವೇಳೆಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಅವರು ಸಂಪೂರ್ಣ ಆವೃತ್ತಿಯಿಂದ ಹೊರಬಿದ್ದಿದ್ದು, ಅವರ ಬದಲಿಯಾಗಿ ಸಿಎಸ್ಕೆ, ಇಂಗ್ಲೆಂಡ್ನ ರಿಚರ್ಡ್ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
4 / 7
ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಒಬ್ಬ ಬ್ಯಾಟರ್ ಐಪಿಎಲ್ನಿಂದ ಹೊರಬಿದ್ದರೆ ಅವನ ಬದಲಿಯಾಗಿ ಮತ್ತೊಬ್ಬ ಬ್ಯಾಟರ್ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಆದರೆ ವಿಭಿನ್ನವಾಗಿ ಚಿಂತಿಸಿರುವ ಸಿಎಸ್ಕೆ ಫ್ರಾಂಚೈಸಿ ಬ್ಯಾಟರ್ ಬದಲಿಗೆ ಬೌಲರ್ನನ್ನು ತಂಡಕ್ಕೆ ಕರೆತಂದಿದೆ.
5 / 7
ಸದ್ಯ ಸಿಎಸ್ಕೆ ತಂಡವನ್ನು ಸೇರಿಕೊಂಡಿರುವ ರಿಚರ್ಡ್ ಗ್ಲೀಸನ್ ವೇಗದ ಬೌಲರ್ ಆಗಿದ್ದು, 2022 ರಲ್ಲಿ ಭಾರತದ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆಡಿದ ಚೊಚ್ಚಲ ಪಂದ್ಯದಲ್ಲೇ ಗ್ಲೀಸನ್ ಕೇವಲ 4 ಎಸೆತಗಳಲ್ಲಿ ಭಾರತದ ಮೂವರು ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರ ವಿಕೆಟ್‌ಗಳನ್ನು ಕಬಳಿಸಿದ್ದರು.
6 / 7
ರಿಚರ್ಡ್ ಗ್ಲೀಸನ್ಗೆ ಇದು ಚೊಚ್ಚಲ ಐಪಿಎಲ್ ಆವೃತ್ತಿಯಾಗಿದ್ದರೆ, ಅವರಿಗೆ ಟಿ20 ಲೀಗ್‌ನಲ್ಲಿ ಆಡಿದ ಸಾಕಷ್ಟು ಅನುಭವವಿದೆ. ಗ್ಲೀಸನ್ ಐಪಿಎಲ್ಗೂ ಮುನ್ನ BBL, PSL, SA20 ಮತ್ತು BPL ನಂತಹ ಪ್ರತಿ ಪ್ರಮುಖ ಟಿ20 ಲೀಗ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ.
7 / 7
ಪ್ರಸ್ತುತ ಕಾನ್ವೇ ಅನುಪಸ್ಥಿತಿಯಲ್ಲಿ, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಅವರು ನಾಯಕ ರುತುರಾಜ್ ಗಾಯಕ್‌ವಾಡ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಿಚರ್ಡ್ ಗ್ಲೀಸನ್ ಆಗಮನದ ನಂತರ, ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ತಂಡದಲ್ಲಿ ಆಡಿಸುತ್ತಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಾಗಿದೆ.
Published On - 3:47 pm, Thu, 18 April 24