IPL 2024: ಚೆನ್ನೈ ವಿರುದ್ಧ ಸೋತು ಐಪಿಎಲ್ ಇತಿಹಾಸದಲ್ಲೇ ಅನಗತ್ಯ ದಾಖಲೆ ಬರೆದ ಗುಜರಾತ್..!

|

Updated on: Mar 27, 2024 | 3:12 PM

IPL 2024: ಇದು ಈ ಆವೃತ್ತಿಯಲ್ಲಿ ಗುಜರಾತ್ ತಂಡದ ಮೊದಲ ಸೋಲಾಗಿದ್ದರೆ, ಸಿಎಸ್​ಕೆ ತಂಡದ ಸತತ ಎರಡನೇ ಗೆಲುವಾಗಿದೆ. ಈ ಗೆಲುವಿನೊಂದಿಗೆ ಸಿಎಸ್​​ಕೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ಈ ಸೋಲಿನೊಂದಿಗೆ ಗುಜರಾತ್ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೋಲುಂಡ ಅನಗತ್ಯ ದಾಖಲೆಗೆ ಕೊರಳ್ಳೊಡ್ಡಿದೆ.

1 / 7
17ನೇ ಆವೃತ್ತಿಯ ಐಪಿಎಲ್​ನಲ್ಲಿ ಯುವ ನಾಯಕ ಶುಭ್​ಮನ್ ಗಿಲ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿರುವ ಗುಜರಾತ್ ಟೈಟಾನ್ಸ್ ತಂಡ ಆಡಿದ ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಗೆಲುವಿನ ಶುಭಾರಂಭ ಮಾಡಿತ್ತು. ಆದರೆ ಸಿಎಸ್​ಕೆ ವಿರುದ್ಧ ಆಡಿದ ಎರಡನೇ ಪಂದ್ಯದಲ್ಲಿ ಗುಜರಾತ್ 63 ರನ್​ಗಳಿಂದ ಸೋಲನುಭವಿಸಬೇಕಾಯಿತು.

2 / 7
ಇದು ಈ ಆವೃತ್ತಿಯಲ್ಲಿ ಗುಜರಾತ್ ತಂಡದ ಮೊದಲ ಸೋಲಾಗಿದ್ದರೆ, ಸಿಎಸ್​ಕೆ ತಂಡದ ಸತತ ಎರಡನೇ ಗೆಲುವಾಗಿದೆ. ಈ ಗೆಲುವಿನೊಂದಿಗೆ ಸಿಎಸ್​​ಕೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ಈ ಸೋಲಿನೊಂದಿಗೆ ಗುಜರಾತ್ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೋಲುಂಡ ಅನಗತ್ಯ ದಾಖಲೆಗೆ ಕೊರಳ್ಳೊಡ್ಡಿದೆ.

3 / 7
ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೂರನೇ ಸೀಸನ್ ಇದಾಗಿದೆ. ಆಡಿದ ಮೊದಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದಿದ್ದ ಗುಜರಾತ್ ಮೊದಲ 2 ಸೀಸನ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಆದರೆ ಐಪಿಎಲ್ 17 ನೇ ಸೀಸನ್‌ನಲ್ಲಿ ಸಿಎಸ್‌ಕೆ ವಿರುದ್ಧ 63 ರನ್‌ಗಳಿಂದ ಸೋತ ಗುಜರಾತ್ ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಸೋಲನ್ನು ಎದುರಿಸಿದೆ.

4 / 7
ಇದಕ್ಕೂ ಮೊದಲು 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 23 ರನ್‌ಗಳಿಂದ ಸೋತಿದ್ದ ಗುಜರಾತ್​ಗೆ ಇದು ಲೀಗ್​ನಲ್ಲಿ ಅತಿ ದೊಡ್ಡ ಸೋಲಾಗಿತ್ತು. ಆದರೀಗ 63 ರನ್​ಗಳಿಂದ ಸೋತಿರುವ ಗುಜರಾತ್​ ಲೀಗ್​ನಲ್ಲಿ ಬೃಹತ್ ಅಂತರದಿಂದ ಸೋತ ಅನಗತ್ಯ ದಾಖಲೆ ಬರೆದಿದೆ.

5 / 7
ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಈ ಹಿಂದೆ 2022 ರಿಂದ 2024 ರವರೆಗೆ ಐಪಿಎಲ್‌ನ ಗುಂಪು ಹಂತದಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದವು. ಆದರೆ ಪ್ರತಿ ಬಾರಿಯೂ ಚೆನ್ನೈ ಸೋಲನ್ನು ಎದುರಿಸಬೇಕಾಯಿತು. ಆದರೆ ಮೊದಲ ಬಾರಿಗೆ ಗ್ರೂಪ್ ಹಂತದಲ್ಲಿ ಹಳದಿ ಸೇನೆ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದೆ.

6 / 7
ಲೀಗ್​ ಹಂತವನ್ನು ಹೊರತುಪಡಿಸಿದರೆ, ಉಳಿದಂತೆ ಸಿಎಸ್​ಕೆ ತಂಡ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದೆ. ಕಳೆದ ಬಾರಿ ನಡೆದ ಕ್ವಾಲಿಫೈಯರ್ 1 ಹಾಗೂ ಫೈನಲ್ ಪಂದ್ಯದಲ್ಲಿ ಚೆನ್ನೈ ಎರಡು ಬಾರಿ ಗುಜರಾತ್ ತಂಡವನ್ನು ಸೋಲಿಸಿತ್ತು.

7 / 7
ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ನೆಲ ಚೆಪಾಕ್‌ನಲ್ಲಿ ಮೊದಲ ಎರಡು ಪಂದ್ಯಗಳನ್ನು ಆಡಿದೆ. ಎರಡರಲ್ಲೂ ತಂಡ ಗೆದ್ದಿದೆ. ಸಿಎಸ್‌ಕೆ ಮೊದಲ ಪಂದ್ಯದಲ್ಲಿ ಆರ್‌ಸಿಬಿಯನ್ನು ಸೋಲಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದೆ. ಯುವ ನಾಯಕ ರುತುರಾಜ್ ಗಾಯಕ್ವಾಡ್ ನಾಯಕತ್ವವು ಉತ್ತಮವಾಗಿ ಆರಂಭವಾಗಿದೆ. ಈ ಗೆಲುವಿನೊಂದಿಗೆ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.