IPL 2024: CSK ವಿರುದ್ಧ RCB ಎಷ್ಟು ರನ್ಗಳ ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 13 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ ಸಿಎಸ್ಕೆ 7 ಗೆಲುವು ಸಾಧಿಸಿದರೆ, ಆರ್ಸಿಬಿ 6 ಜಯ ಸಾಧಿಸಿದೆ. ಇದೀಗ ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್ ಹಂತಕ್ಕೇರಬಹುದು.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 62 ಪಂದ್ಯಗಳು ಮುಗಿದಿದೆ. ಈ ಪಂದ್ಯಗಳ ಮುಕ್ತಾಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಹಾಗೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ನೇ ಸ್ಥಾನದಲ್ಲಿದೆ. ಇನ್ನು ಪ್ಲೇಆಫ್ ಹಂತಕ್ಕೇರಲು ಸಿಎಸ್ಕೆ ತಂಡದ ಮುಂದಿರುವುದು ಏಕೈಕ ಪಂದ್ಯ. ಅದು ಕೂಡ ಆರ್ಸಿಬಿ ವಿರುದ್ಧ ಎಂಬುದು ವಿಶೇಷ.
2 / 6
ಅಂದರೆ ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಅದಾಗಲೇ 14 ಪಾಯಿಂಟ್ಸ್ ಹೊಂದಿರುವ ಸಿಎಸ್ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದರೆ ಮಾತ್ರ ಆರ್ಸಿಬಿ ಟಾಪ್-4 ಹಂತಕ್ಕೇರಬಹುದು.
3 / 6
ಏಕೆಂದರೆ ಸಿಎಸ್ಕೆ ತಂಡವು +0.528 ನೆಟ್ ರನ್ ರೇಟ್ ಹೊಂದಿದ್ದು, ಈ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಿ 14 ಅಂಕಗಳನ್ನು ಸಂಪಾದಿಸಬೇಕಾದ ಅನಿವಾರ್ಯತೆ ಆರ್ಸಿಬಿ ತಂಡದ ಮುಂದಿದೆ. ಇತ್ತ +0.387 ನೆಟ್ ರನ್ ರೇಟ್ ಹೊಂದಿರುವ ಆರ್ಸಿಬಿ ಯಾವ ಅಂತರದಲ್ಲಿ ಗೆದ್ದರೆ ಸಿಎಸ್ಕೆ ತಂಡವನ್ನು ಹಿಂದಿಕ್ಕಬಹುದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
4 / 6
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು ಮೊದಲು ಬ್ಯಾಟ್ ಮಾಡಿದರೆ 18 ರನ್ಗಳ ಅಂತರದಿಂದ ಜಯ ಸಾಧಿಸಲೇಬೇಕು. ಉದಾಹರಣೆಗೆ ಆರ್ಸಿಬಿ 200 ರನ್ ಕಲೆಹಾಕಿದರೆ, ಸಿಎಸ್ಕೆ ತಂಡವನ್ನು 182 ರನ್ಗಳಿಗೆ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕು. ಈ ಮೂಲಕ ಕನಿಷ್ಠ 18 ರನ್ಗಳ ಅಂತರದ ಗೆಲುವು ಸಾಧಿಸಬೇಕು.
5 / 6
ಒಂದು ವೇಳೆ ಆರ್ಸಿಬಿ ತಂಡವು ಮೊದಲು ಬೌಲಿಂಗ್ ಮಾಡಿದರೆ, ಸಿಎಸ್ಕೆ ತಂಡ ನೀಡುವ ಗುರಿಯನ್ನು ಕೇವಲ 18.1 ಓವರ್ಗಳಲ್ಲಿ ಚೇಸ್ ಮಾಡಬೇಕು. ಉದಾಹರಣೆಗೆ ಸಿಎಸ್ಕೆ ತಂಡವು 222 ರನ್ಗಳ ಟಾರ್ಗೆಟ್ ನೀಡಿದರೆ, ಆರ್ಸಿಬಿ ಅದನ್ನು 18.1 ಓವರ್ಗಳಲ್ಲಿ ಬೆನ್ನತ್ತಿ ಜಯ ಸಾಧಿಸಬೇಕು.
6 / 6
ಈ ಎರಡು ಲೆಕ್ಕಾಚಾರಗಳೊಂದಿಗೆ ಆರ್ಸಿಬಿ ತಂಡವು ಸಿಎಸ್ಕೆ ವಿರುದ್ಧ ಕಣಕ್ಕಿಳಿಯಲಿದೆ. ಈ ಅಂತರದ ಗೆಲುವು ಸಾಧಿಸಿದರೆ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ ಹಂತಕ್ಕೇರಬಹುದು.