IPL 2024: ಕಿಂಗ್ ಕೊಹ್ಲಿಯ ನಂತರದ ಸ್ಥಾನದಲ್ಲಿ ರಾಹುಲ್ ದ್ರಾವಿಡ್..!

| Updated By: ಝಾಹಿರ್ ಯೂಸುಫ್

Updated on: Mar 21, 2024 | 11:24 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಶುಕ್ರವಾರದಿಂದ (ಮಾ.22) ಶುರುವಾಗಲಿರುವ ಐಪಿಎಲ್​ನ 17ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಯಲಿರುವುದು ವಿಶೇಷ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ-ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ 16 ಸೀಸನ್ ಮುಗಿದು, ಇದೀಗ 17ನೇ ಸೀಸನ್ ಆರಂಭದ ಹೊಸ್ತಿಲಲ್ಲಿದ್ದೇವೆ. ಕಳೆದ ಹದಿನಾರು ಸೀಸನ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಅತಿರಥ ಮಹಾರಥರಂತಹ ಆಟಗಾರರು ಕಣಕ್ಕಿಳಿದಿದ್ದಾರೆ. ಈ ಆಟಗಾರರಲ್ಲಿ ಭಾರತದ ಕೆಲ ಲೆಜೆಂಡ್ಸ್ ಕ್ರಿಕೆಟಿಗರು ಕೂಡ ಸೇರಿದ್ದಾರೆ. ಆದರೆ ಅವರಲ್ಲಿ ಸಾವಿರ ರನ್​ಗಳ ಗಡಿದಾಟಿದ್ದು ಕೇವಲ ಇಬ್ಬರು ಆಟಗಾರರು ಎಂದರೆ ನಂಬಲೇಬೇಕು.

2 / 6
ಅಂದರೆ ಆರ್​ಸಿಬಿ ಪರ ಕಣಕ್ಕಿಳಿದು ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿಯನ್ನು ಹೊರತುಪಡಿಸಿ ಆರ್​ಸಿಬಿ ಪರ ಆಡಿದ ಆಟಗಾರರಲ್ಲಿ 1000 ಕ್ಕೂ ಅಧಿಕ ರನ್ ಕಲೆಹಾಕಿರುವುದು ರಾಹುಲ್ ದ್ರಾವಿಡ್ ಮಾತ್ರ. ಉಳಿದ ಯಾವುದೇ ಭಾರತೀಯ ಬ್ಯಾಟರ್​ಗಳು ಆರ್​ಸಿಬಿ ಪರ ಮಿಂಚಿಲ್ಲ ಎಂಬುದೇ ಅಚ್ಚರಿ.

3 / 6
ಆರ್​ಸಿಬಿ ಪರ ಇದುವರೆಗೆ 243 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 7687 ರನ್ ಕಲೆಹಾಕಿದ್ದಾರೆ. ಈ ವೇಳೆ 7 ಶತಕ ಹಾಗೂ 52 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್​ ಎಂಬ ದಾಖಲೆ ಬರೆದಿದ್ದಾರೆ.

4 / 6
ಇನ್ನು ಆರ್​ಸಿಬಿ ಪರ 45 ಇನಿಂಗ್ಸ್ ಆಡಿರುವ ರಾಹುಲ್ ದ್ರಾವಿಡ್ ಒಟ್ಟು 1132 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಅರ್ಧಶತಕಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ 2ನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 6
ಹಾಗೆಯೇ ಆರ್​ಸಿಬಿ ಪರ 29 ಇನಿಂಗ್ಸ್ ಆಡಿರುವ ದೇವದತ್ ಪಡಿಕ್ಕಲ್ (884) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, 32 ಇನಿಂಗ್ಸ್​ಗಳಿಂದ 731 ರನ್ ಕಲೆಹಾಕಿರುವ ಪಾರ್ಥಿವ್ ಪಟೇಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಆರ್​ಸಿಬಿ ಪರ 36 ಇನಿಂಗ್ಸ್ ಆಡಿರುವ ರಾಬಿನ್ ಉತ್ತಪ್ಪ 706 ರನ್ ಕಲೆಹಾಕಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.

6 / 6
ಅಂದರೆ ಇಲ್ಲಿ ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ದೇವದತ್ ಪಡಿಕ್ಕಲ್, ಪಾರ್ಥಿವ್ ಪಟೇಲ್ ಹಾಗೂ ರಾಬಿನ್ ಉತ್ತಪ್ಪ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ ಆರ್​ಸಿಬಿ ಪರ 700 ಕ್ಕಿಂತ ಅಧಿಕ ರನ್ ಕಲೆಹಾಕಿಲ್ಲ ಎಂಬುದೇ ಅಚ್ಚರಿ. ಇದುವೇ ಕಳೆದ 16 ಸೀಸನ್​ಗಳಿಂದ ಆರ್​ಸಿಬಿ ಕಪ್ ಗೆಲ್ಲದಿರಲು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.