IPL 2024: ಮುಂಬೈ ಇಂಡಿಯನ್ಸ್ ಸೇರಿದ 12ನೇ ಕ್ಲಾಸ್ ಓದುತ್ತಿರುವ ಹುಡುಗ: ಮೊದಲ ಪಂದ್ಯದಲ್ಲೇ ಕಣಕ್ಕೆ?

Who is Kwena Maphaka: ಗಾಯದ ಸಮಸ್ಯೆಯಿಂದ ಐಪಿಎಲ್​ 2024ರಿಂದ ಹೊರಬಿದ್ದಿರುವ ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ ಬದಲಿಗೆ ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮಪಾಕಾ ಅವರನ್ನು ಆಯ್ಕೆ ಮಾಡಿದೆ. ಅಚ್ಚರಿ ಎಂದರೆ ಇವರಿಗೆ ಕೇವಲ 17 ವರ್ಷ ಪ್ರಾಯ. ಪ್ರಸ್ತುತ 12 ನೇ ತರಗತಿ ವಿದ್ಯಾರ್ಥಿ.

Vinay Bhat
|

Updated on: Mar 21, 2024 | 9:40 AM

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಆರಂಭ ಹತ್ತಿರವಾಗುತ್ತಿದ್ದಂತೆ ಕೆಲ ತಂಡಗಳಲ್ಲಿ ದೊಡ್ಡ ಬದಲಾವಣೆ ಆಗುತ್ತಿವೆ. ಫ್ರಾಂಚೈಸಿಗಳು ಈ ವರ್ಷ ಗಾಯ ಅಥವಾ ಇತರ ಕಾರಣಗಳಿಂದ ಲೀಗ್‌ನಿಂದ ಹೊರಗುಳಿದ ಆಟಗಾರರನ್ನು ಬದಲಾಯಿಸಲು ಬಯಸುತ್ತಿವೆ. ಇದೀಗ ಮುಂಬೈ ಇಂಡಿಯನ್ಸ್ ತನ್ನ ತಂಡಕ್ಕೆ ಹೊಸ ಆಟಗಾರನನ್ನು ಆಯ್ಕೆ ಮಾಡಿದೆ.

1 / 6
ಗಾಯದ ಸಮಸ್ಯೆಯಿಂದ ಐಪಿಎಲ್​ 2024ರಿಂದ ಹೊರಬಿದ್ದಿರುವ ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ ಬದಲಿಗೆ ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮಪಾಕಾ ಅವರನ್ನು ಆಯ್ಕೆ ಮಾಡಿದೆ. ಅಚ್ಚರಿ ಎಂದರೆ ಇವರಿಗೆ ಕೇವಲ 17 ವರ್ಷ ಪ್ರಾಯ. ಇತ್ತೀಚೆಗೆ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಮಪಾಕಾ ಬೊಂಬಾಟ್ ಪ್ರದರ್ಶನ ನೀಡಿ 6 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದರು.

2 / 6
ಕ್ವೆನಾ ಮಪಾಕಾ ಕೂಡ ಜಸ್​ಪ್ರಿತ್ ಬುಮ್ರಾ ಅವರಂತಹ ಅತ್ಯುತ್ತಮ ಯಾರ್ಕರ್ ಎಸೆಯುವುದರಲ್ಲಿ ನಿಪುಣರು. ಜೊತೆಗೆ ಚೆಂಡನ್ನು ಉತ್ತಮ ವೇಗದಲ್ಲಿ ಸ್ವಿಂಗ್ ಮಾಡುತ್ತಾರೆ. ಮಪಾಕಾ ಕೇವಲ 17 ವರ್ಷ ವಯಸ್ಸಿನವನಾಗಿದ್ದು, ಪ್ರಸ್ತುತ 12 ನೇ ತರಗತಿ ವಿದ್ಯಾರ್ಥಿ. ಆದರೆ ಅಪಾರ ಪ್ರತಿಭೆ ಹೊಂದಿರುವ ಇವರು ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಇದೆ.

3 / 6
ಮಪಾಕ ದಕ್ಷಿಣ ಆಫ್ರಿಕಾ ಎ ಮತ್ತು ದಕ್ಷಿಣ ಆಫ್ರಿಕಾ ಯುವ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆಡುವ ಅತ್ಯಂತ ಕಿರಿಯ ಆಟಗಾರರಲ್ಲಿ ಮಪಾಕಾ ಪ್ರಮುಖರಾಗಿದ್ದಾರೆ. ಇವರು 2006 ಏಪ್ರಿಲ್ 8 ರಂದು ಜೊಹಾನ್ಸ್​ಬರ್ಗ್​ನಲ್ಲಿ ಜನಿಸಿದರು. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇವರು ಭಾಗವಹಿಸಿದ್ದರು, ಆದರೆ ಯಾರೂ ಅವರನ್ನು ಖರೀದಿಸಲಿಲ್ಲ.

4 / 6
ಇನ್ನು ಗುಜರಾತ್ ಟೈಟಾನ್ಸ್ ಕೂಡ ಮೊಹಮ್ಮದ್ ಶಮಿ ಬದಲಿಗೆ ವೇಗದ ಬೌಲರ್ ಸಂದೀಪ್ ವಾರಿಯರ್ ಅವರನ್ನು ತೆಗೆದುಕೊಂಡಿದೆ. ಇವರು ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ್ದರು. ಸಂದೀಪ್ 2019 ರಲ್ಲಿ ಐಪಿಎಲ್ ಪ್ರವೇಶಿಸಿದರು, ಇಲ್ಲಿಯವರೆಗೆ ಕೇವಲ 5 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 2 ವಿಕೆಟ್ ಪಡೆದಿದ್ದಾರೆ.

5 / 6
ಶಮಿ ಪಾದದ ಗಾಯದಿಂದ ಬಳಲುತ್ತಿದ್ದಾರೆ. ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಜೂನ್‌ನಲ್ಲಿ ನಡೆಯಲಿರುವ 2024 ರ ಟಿ20 ವಿಶ್ವಕಪ್‌ನಲ್ಲಿ ಕೂಡ ಆಡಲು ಸಾಧ್ಯವಾಗುವುದಿಲ್ಲ. ಗುಜರಾತ್ ಫ್ರಾಂಚೈಸಿ ಶಮಿ ಬದಲಿಗೆ ಸಂದೀಪ್ ಅವರನ್ನು 50 ಲಕ್ಷ ರೂ. ಮೂಲ ಬೆಲೆಗೆ ತೆಗೆದುಕೊಂಡಿದೆ. ಕೆಕೆಆರ್ ಐಪಿಎಲ್ 2022 ಮೆಗಾ ಹರಾಜಿನ ಮೊದಲು ಸಂದೀಪ್ ಅವರನ್ನು ಬಿಡುಗಡೆ ಮಾಡಿತ್ತು.

6 / 6
Follow us
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ

ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ

ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್

ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ