IPL 2024 Jersey: 10 ತಂಡಗಳ ನೂತನ ಜೆರ್ಸಿ ಅನಾವರಣ
TV9 Web | Updated By: ಝಾಹಿರ್ ಯೂಸುಫ್
Updated on:
Mar 20, 2024 | 9:08 AM
IPL 2024 All Teams Jersey: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಗಾಗಿ 10 ತಂಡಗಳು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹತ್ತು ತಂಡಗಳೂ ಕೂಡ ಐಪಿಎಲ್ಗಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿ ನಿಂತಿದೆ. ಅದರಂತೆ ಮಾರ್ಚ್ 22 ರಿಂದ IPL 2024 ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಸಿಎಸ್ಕೆ ಮತ್ತು ಆರ್ಸಿಬಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
1 / 11
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಕ್ಕಾಗಿ ಎಲ್ಲಾ ತಂಡಗಳು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹತ್ತು ತಂಡಗಳಲ್ಲಿ ಬಹುತೇಕ ಟೀಮ್ಗಳು ಈ ಹಿಂದಿನ ಜೆರ್ಸಿ ಬಣ್ಣವನ್ನೇ ಮುಂದುವರೆಸಿದೆ. ಇದಾಗ್ಯೂ ಸನ್ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮಾತ್ರ ತಮ್ಮ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಐಪಿಎಲ್ 2024 ರಲ್ಲಿ 10 ತಂಡಗಳು ಧರಿಸಲಿರುವ ಜೆರ್ಸಿಯ ಝಲಕ್ ಇಲ್ಲಿದೆ...
2 / 11
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ದೆಹಲಿ ಮೆಟ್ರೊ ರೂಟ್ ಅನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವುದು ವಿಶೇಷ. ಈ ಒಂದು ಪುಟ್ಟ ಚೇಂಜ್ ಮಾಡಿದ್ದು ಬಿಟ್ಟರೆ, ಜೆರ್ಸಿಯ ಬಣ್ಣಗಳಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.
3 / 11
ರಾಜಸ್ಥಾನ್ ರಾಯಲ್ಸ್: ಪಿಂಕ್ ಸಿಟಿಯನ್ನು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್ ಈ ಸಲ ಕೂಡ ಪಿಂಕ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ತೊಳ್ಭಾಗದಲ್ಲಿ ನೀಲಿ ಬಣ್ಣ ನೀಡಲಾಗಿರುವ ಈ ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ.
4 / 11
ಸನ್ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡವು ಈ ಬಾರಿ ನೂತನ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಸನ್ರೈಸರ್ಸ್ ಕೇಪ್ ಈಸ್ಟರ್ನ್ ತಂಡ ಧರಿಸಿದ್ದ ಜೆರ್ಸಿ ವಿನ್ಯಾಸವನ್ನೇ ಎಸ್ಆರ್ಹೆಚ್ ಐಪಿಎಲ್ಗೂ ಪರಿಚಯಿಸುತ್ತಿರುವುದು ವಿಶೇಷ.
5 / 11
ಚೆನ್ನೈ ಸೂಪರ್ ಕಿಂಗ್ಸ್: ಯೆಲ್ಲೊ ಆರ್ಮಿ ಖ್ಯಾತಿಯ ಸಿಎಸ್ಕೆ ತಂಡವು ಕಳೆದ ಬಾರಿಯಂತೆ ಈ ಸಲ ಕೂಡ ಹಳದಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ 2023 ರ ಸಿಎಸ್ಕೆ ಜೆರ್ಸಿಗೆ ಹೋಲಿಸಿದರೆ, ಈ ಬಾರಿ ಕೂಡ ಜೆರ್ಸಿ ವಿನ್ಯಾಸದಲ್ಲಿ ಅಂತಹ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.
6 / 11
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ ಮುನ್ನಡೆಸಲಿರುವ ಗುಜರಾತ್ ಟೈಟಾನ್ಸ್ ತಂಡದ ಜೆರ್ಸಿಯಲ್ಲೂ ಅಂತಹ ಬದಲಾವಣೆ ಕಂಡು ಬಂದಿದೆ. ಈ ಹಿಂದಿನ ಜೆರ್ಸಿ ವಿನ್ಯಾಸವನ್ನೇ ಜಿಟಿ ಫ್ರಾಂಚೈಸಿ ಮುಂದುವರೆಸಿದ್ದು, ಅದರಂತೆ ಈ ಬಾರಿ ಕೂಡ ಚಾರ್ಕೊಲ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
7 / 11
ಪಂಜಾಬ್ ಕಿಂಗ್ಸ್: ಐಪಿಎಲ್ 2023 ರಲ್ಲಿ ಫುಲ್ ರೆಡ್ ಬಣ್ಣದಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ಪಡೆ ಈ ಬಾರಿ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಕೆಂಪು ಬಣ್ಣದ ಜೊತೆ ಪಂಜಾಬ್ ಈ ಬಾರಿ ಜ್ವಾಲೆಯ ವಿನ್ಯಾಸವನ್ನು ಬಳಸಿದೆ. ಹಾಗೆಯೇ ಈ ಹಿಂದೆ ಜೆರ್ಸಿಯ ಮುಂಭಾಗದಲ್ಲಿ ಕಾಣಿಸುತ್ತಿದ್ದ ದೊಡ್ಡದಾದ ಸಿಂಹದ ಲೋಗೋವನ್ನು ಈ ಬಾರಿ ಕೈ ಬಿಟ್ಟಿದೆ.
8 / 11
ಮುಂಬೈ ಇಂಡಿಯನ್ಸ್: ಕಳೆದ ಸೀಸನ್ನಂತೆ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ರಾಯಲ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಸಲ ಜೆರ್ಸಿ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಅದರಂತೆ ಜೆರ್ಸಿ ಮೇಲೆ M ಆಕಾರವನ್ನು ವಿನ್ಯಾಸಗೊಳಿಸಿರುವುದು ವಿಶೇಷ.
9 / 11
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಕೂಡ ನೇರಳೆ ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ ಜೆರ್ಸಿಯ ಮುಂಭಾಗದ ವಿನ್ಯಾಸಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಇದನ್ನು ಹೊರತುಪಡಿಸಿದರೆ ಎಂದಿನಂತೆ ಪರ್ಪಲ್-ಗೋಲ್ಡ್ ಬಣ್ಣಗಳನ್ನೇ ಈ ಬಾರಿ ಸಹ ಬಳಸಲಾಗಿದೆ.
10 / 11
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿ ಕೂಡ ಡಾರ್ಕ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಅಲ್ಲದೆ ಕಳೆದ ಸೀಸನ್ನಲ್ಲಿನ ಜೆರ್ಸಿಯನ್ನೇ ಈ ಬಾರಿ ಕೂಡ ಮುಂದುವರೆಸಿರುವುದು ವಿಶೇಷ.
11 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡದ ಜೆರ್ಸಿಯ ಬಣ್ಣ ಬದಲಾಗಿದೆ. ಕಪ್ಪು-ಕೆಂಪು ಇದ್ದ ಜಾಗದಲ್ಲಿ ಇದೀಗ ನೀಲಿ-ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಹಾಗೆಯೇ ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿದೆ. ಇದರ ಜೊತೆಗೆ ಲೋಗೋವನ್ನು ಕೂಡ ಬದಲಿಸಲಾಗಿದೆ.