RCB ಯಾವತ್ತೂ ಕಪ್ ಗೆಲ್ಲಲ್ಲ ಎಂದ CSK ಮಾಜಿ ಆಟಗಾರ
TV9 Web | Updated By: ಝಾಹಿರ್ ಯೂಸುಫ್
Updated on:
Apr 04, 2024 | 8:08 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಇನ್ನುಳಿದ ಮೂರು ಪಂದ್ಯಗಳಲ್ಲೂ ಪರಾಜಯಗೊಂಡಿದೆ. ಇದೀಗ ತನ್ನ ಐದನೇ ಪಂದ್ಯಕ್ಕಾಗಿ ಆರ್‌ಸಿಬಿ ಸಜ್ಜಾಗುತ್ತಿದ್ದು, ಏಪ್ರಿಲ್ 6 ರಂದು ನಡೆಯುವ ಈ ಪಂದ್ಯದಲ್ಲಿ ಆರ್ಪಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 16 ಪಂದ್ಯಗಳು ಮುಗಿದಿವೆ. ಇದರ ಬೆನ್ನಲ್ಲೇ ಯಾರು ಬಲಿಷ್ಠ, ಯಾವ ತಂಡ ಕನಿಷ್ಠ ಎಂಬ ಚರ್ಚೆಗಳು ಶುರುವಾಗಿದೆ. ಈ ಚರ್ಚೆಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನವನ್ನು ವಿಮರ್ಶಿಸಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು.
2 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಅಂಬಾಟಿ ರಾಯುಡು, ಆರ್‌ಸಿಬಿ ತಂಡದ್ದು ಯಾವಾಗಲೂ ಇದೇ ಪರಿಸ್ಥಿತಿ. ಅವರು ಎಂದಿಗೂ ಒತ್ತಡವನ್ನು ಮೀರಿ ಪಂದ್ಯವಾಡಿಲ್ಲ. ತಂಡದ ಅಗ್ರಸ್ಥಾನದಲ್ಲಿರುವ ಪ್ರಮುಖ ಆಟಗಾರರು ಎಂದಿಗೂ ಉತ್ತಮ ಪ್ರದರ್ಶನ ನೀಡುವುದಿಲ್ಲ. ಇದುವೇ ಆರ್‌ಸಿಬಿ ಸೋಲಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
3 / 6
ಕಳೆದ 16 ಸೀಸನ್ಗಳಿಂದಲೂ ಆರ್‌ಸಿಬಿ ಪ್ರಶಸ್ತಿ ಗೆದ್ದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಬೌಲಿಂಗ್ ಲೈನಪ್. ಆರ್‌ಸಿಬಿ ತಂಡದ ಬೌಲಿಂಗ್ ಘಟಕ ಯಾವಾಗಲೂ ಸಾಕಷ್ಟು ರನ್ ಸೋರಿಕೆ ಮಾಡುತ್ತದೆ. ಅವರ ಬ್ಯಾಟರ್ಗಳು ಕಲೆಹಾಕುವ ರನ್ ಗತಿಗಿಂತ ಆರ್‌ಸಿಬಿ ಬೌಲರ್ಗಳು ಹೆಚ್ಚಿನ ರನ್ಗಳನ್ನು ಬಿಟ್ಟು ಕೊಡುತ್ತಿರುತ್ತಾರೆ ಎಂದು ರಾಯುಡು ಹೇಳಿದ್ದಾರೆ.
4 / 6
ಆರ್‌ಸಿಬಿ ಬ್ಯಾಟರ್ಗಳು ಕಲೆಹಾಕುವ ಪ್ರತಿ ಓವರ್ ಸರಾಸರಿ ರನ್ಗಿಂತ ಬೌಲರ್ಗಳು ನೀಡುವ ಸರಾಸರಿ ರನ್ಗಳೇ ಜಾಸ್ತಿ ಇರುತ್ತದೆ. ಒಂದು ರೀತಿಯಲ್ಲಿ ಬ್ಯಾಟರ್ ಮತ್ತು ಬೌಲರ್ಗಳು ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಇನ್ನು ಆರ್‌ಸಿಬಿ ತಂಡ ಒತ್ತಡದಲ್ಲಿರುವಾಗ ಅವರ ಯಾವುದೇ ಪ್ರಮುಖ ಬ್ಯಾಟರ್ ಆಡಲ್ಲ. ಹೀಗಾಗಿಯೇ ಆರ್‌ಸಿಬಿ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಅಂಬಾಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.
5 / 6
ಅಷ್ಟೇ ಅಲ್ಲದೆ ಹೀಗೆ ಬ್ಯಾಟಿಂಗ್-ಬೌಲಿಂಗ್ ಸರಿ ಸಮಾನವಾಗಿ ರನ್ ಸರಾಸರಿ ಹೊಂದಿರುವ ಆರ್‌ಸಿಬಿ ತಂಡವು ಎಂದಿಗೂ ಕಪ್ ಗೆಲ್ಲಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಾಕ್ಷಿಯೇ ಕಳೆದ 16 ಸೀಸನ್ಗಳು. ಈ ಕಥೆ ಈ ಬಾರಿ ಕೂಡ ಮುಂದುವರೆಯುವ ಸಾಧ್ಯತೆಯಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
6 / 6
ಈ ಬಾರಿಯ ಐಪಿಎಲ್ನಲ್ಲಿ 4 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 3 ರಲ್ಲಿ ಸೋಲನುಭವಿಸಿದೆ. ಸಿಎಸ್ಕೆ ವಿರುದ್ಧದ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಫಾಫ್ ಪಡೆ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಇದಾದ ಬಳಿಕ ಕೆಕೆಆರ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಮುಗ್ಗರಿಸಿದೆ.