IPL 2024: ಐಪಿಎಲ್ನಲ್ಲಿ ಮೂರು ಬಣ್ಣಗಳು ಬ್ಯಾನ್..!
TV9 Web | Updated By: ಝಾಹಿರ್ ಯೂಸುಫ್
Updated on:
Mar 19, 2024 | 1:03 PM
IPL 2024: ಐಪಿಎಲ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಮತ್ತು ಸಿಎಸ್ಕೆ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದೊಂದಿಗೆ IPL 2024 ಕ್ಕೆ ಚಾಲನೆ ಸಿಗಲಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಮೂರು ಬಣ್ಣಗಳು ಬ್ಯಾನ್ ಆಗಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಐಪಿಎಲ್ ಜೆರ್ಸಿಯಲ್ಲಿ ಮೂರು ಬಣ್ಣಗಳನ್ನು ಬಳಸದಂತೆ 10 ಫ್ರಾಂಚೈಸಿಗಳಿಗೆ ಬಿಸಿಸಿಐ ತಾಕೀತು ಮಾಡಿದೆ. ಹೀಗಾಗಿಯೇ ಕೆಲ ತಂಡಗಳ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ.
2 / 5
ಈ ಹಿಂದೆ ನೀವು ಕೆಲ ತಂಡಗಳ ಜೆರ್ಸಿಗಳಲ್ಲಿ ಬಿಳಿ, ಬೂದು ಮತ್ತು ಬೆಳ್ಳಿ ಬಣ್ಣಗಳನ್ನು ನೋಡಿರುತ್ತೀರಿ. ಆದರೀಗ ಈ ಮೂರು ಬಣ್ಣಗಳನ್ನು ಬಿಸಿಸಿಐ ನಿಷೇಧಿಸಿದ್ದು, ಅದರ ಬದಲು ಬೇರೆ ಬಣ್ಣಗಳನ್ನು ಬಳಸುವಂತೆ ಸೂಚಿಸಲಾಗಿದೆ.
3 / 5
ಪಂಜಾಬ್ ಕಿಂಗ್ಸ್ ತಂಡವು ತನ್ನ ಜೆರ್ಸಿಯಲ್ಲಿ ಕೆಂಪು ಬಣ್ಣದ ಜೊತೆ ಬೆಳ್ಳಿ ಅಥವಾ ಬೂದು ಬಣ್ಣಗಳನ್ನು ಬಳಸುತ್ತಿತ್ತು. ಆದರೆ ಕಳೆದೆರೆಡು ಐಪಿಎಲ್ ಸೀಸನ್ಗಳಿಂದ ಪಂಜಾಬ್ ಕಿಂಗ್ಸ್ ತಂಡವು ಸಂಪೂರ್ಣ ರೆಡ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಹಾಗೆಯೇ ಗುಜರಾತ್ ಟೈಟಾನ್ಸ್ ತಂಡದ ಜೆರ್ಸಿಯಲ್ಲಿ ಕಾಣಿಸುತ್ತಿದ್ದ ಬೂದು ಬಣ್ಣ ಕೂಡ ಈಗ ಮಾಯವಾಗಿದೆ.
4 / 5
ಇದಕ್ಕೆ ಮುಖ್ಯ ಕಾರಣ ಐಪಿಎಲ್ನಲ್ಲಿ ವೈಟ್ ಬಾಲ್ ಬಳಸುತ್ತಿರುವುದು. ಅಂದರೆ ಬಿಳಿ ಚೆಂಡಿನ ಗೋಚರತೆಯ ಸಮಸ್ಯೆಗಳಿಗಾಗಿ ಬಿಸಿಸಿಐ ಕೆಲವು ಬಣ್ಣಗಳಾದ ಬೆಳ್ಳಿ, ಬಿಳಿ ಮತ್ತು ಬೂದು ಬಣ್ಣವನ್ನು ನಿಷೇಧಿಸಿದೆ. ಹೀಗಾಗಿಯೇ ಪಂಜಾಬ್ ಕಿಂಗ್ಸ್ ತನ್ನ ಜೆರ್ಸಿಯಲ್ಲಿ ಈಗ ಬೂದು ಅಥವಾ ಬೆಳ್ಳಿ ಬಣ್ಣಗಳನ್ನು ಬಳಸುತ್ತಿಲ್ಲ.
5 / 5
ಜೆರ್ಸಿ ಮೇಲೆ ಬಿಳಿ, ಬೂದು ಅಥವಾ ಬೆಳ್ಳಿ ಬಣ್ಣಗಳಿದ್ದರೆ ಅಂಪೈರ್ಗೆ ಬಿಳಿ ಚೆಂಡನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಚೆಂಡು ಎಲ್ಲಿ ತಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ. ಹೀಗಾಗಿ ಬಿಸಿಸಿಐ ಮೂರು ಬಣ್ಣಗಳ ಮೇಲೆ ನಿಷೇಧ ಹೇರಿದೆ ಎಂದು ತಿಳಿದು ಬಂದಿದೆ.
Published On - 1:03 pm, Tue, 19 March 24